Advertisement

ದೇಶಾದ್ಯಂತ ಟ್ಯಾಕ್ಸಿ ಮಾರಾಟ ಸ್ಥಗಿತ ಸಾಧ್ಯತೆ

11:14 AM Nov 30, 2018 | Harsha Rao |

ಹೊಸದಿಲ್ಲಿ: ಕ್ಯಾಬ್‌ ಸೇವೆಯಲ್ಲಿರುವ ವಾಹನಗಳಿಗೆ ಮೂರು ವರ್ಷಗಳ ಕಾಲಮಿತಿಯ ಥರ್ಡ್‌ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಇಲಾಖೆ ನ. 12 ರಂದು ಜಾರಿಗೊಳಿಸಿರುವ ಆದೇಶದಿಂದಾಗಿ ದೇಶಾದ್ಯಂತ ಟ್ಯಾಕ್ಸಿ ಮಾರಾಟ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. 

Advertisement

ಈಗಾಗಲೇ ಕಳೆದ ಎರಡು ವಾರಗಳಿಂದ ದೆಹಲಿ, ಮಹಾ ರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಟ್ಯಾಕ್ಸಿ ಸೇವೆಗೆ ಭಾರೀ ಹೊಡೆತ ಬಿದ್ದಿದ್ದು, ಟ್ಯಾಕ್ಸಿ ಮಾರಾಟ ಸ್ಥಗಿತಗೊಂಡಿದೆ ಎಂದು ಆ ಕ್ಷೇತ್ರದ ಪರಿಣಿತರು ಹೇಳಿದ್ದಾರೆ.

ವಾರ್ಷಿಕವಾಗಿ 2,40,000 ಟ್ಯಾಕ್ಸಿಗಳನ್ನು ಒಂದು ವರ್ಷದ ಅವಧಿಗೆ ಒಂದು ವರ್ಷದ ವಿಮೆಯೊಂದಿಗೆ ಖರೀದಿಸುತ್ತಿದ್ದ ಟ್ಯಾಕ್ಸಿ ಕಂಪನಿಗಳಿಗೆ ಮೂರು ವರ್ಷಗಳವರೆಗೆ ವಿಮೆ ಪ್ರೀಮಿಯಂ ತುಂಬುವುದು ದೊಡ್ಡ ಹೊರೆ ಯಾಗಿರುವುದರಿಂದ ಇದು ಕೆಲ ರಾಜ್ಯಗಳಲ್ಲಿ ಟ್ಯಾಕ್ಸಿ ಸೇವೆ ಗಳ ಮೇಲೆ, ಪರೋಕ್ಷವಾಗಿ ಕಾರು ಉತ್ಪಾದನಾ ರಂಗದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. 

ಅಲ್ಲದೆ, ಇದರಿಂದಾಗಿ ಕೆಲವೇ ದಿನಗಳಲ್ಲಿ ದೇಶಾದ್ಯಂತ ಟ್ಯಾಕ್ಸಿ ಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆ ಸ್ಥಗಿತ ಗೊಳ್ಳಲಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ದಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next