Advertisement

 ಕೋವಿಡ್ ಎಫೆಕ್ಟ್ : ಟ್ಯಾಕ್ಸಿ ಚಾಲಕ-ಮಾಲೀಕರ ಬದುಕು ಹೈರಾಣು

04:15 PM Apr 28, 2021 | Team Udayavani |

ವರದಿ:ಚೇತನ ಆರ್‌. ಕಣವಿ

Advertisement

ಬೀಳಗಿ: ಕಳೆದ ವರ್ಷ ಮದುವೆಯ ಸಮಾರಂಭ ಅವ ಧಿಯಲ್ಲಿಯೂ ಕೂಡಾ ಕೊರೊನಾ ವೈರಸ್‌ ವಕ್ಕರಿಸಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಗೆ ನಷ್ಟವಾಗಿದೆ.

ಈ ವರ್ಷವಾದರು ಸರಿಯಾಗಿ ವಾಹನ ದುಡಿಸಿ ಸ್ವಲ್ಪ ಹಣ ಸಂಪಾದನೆ ಮಾಡಬೇಕು ಮತ್ತು ಬ್ಯಾಂಕಿನ್‌ ಕಂತು, ಕುಟುಂಬದ ಸಮಸ್ಯೆಗೆ ನೆರವಾದಿತು ಎಂಬ ಆಸೆಯಿಂದ ಕಾದುಕುಳಿತರೆ ಕೊರೊನಾ ರೂಪಾಂತರಿ ವೈರಸ್‌ ವಕ್ಕರಿಸಿ ಚಾಲಕ ಮತ್ತು ಮಾಲೀಕರ ಜೀವನ ರಸ್ತೆಗೆ ಬರುವಂತಾಗಿದೆ. ದಿನನಿತ್ಯ ಹಗಲು, ರಾತ್ರಿಯನ್ನು ಲೆಕ್ಕಿಸದೆ ತಮ್ಮ ಜೀವನ ಪಣಕ್ಕಿಟ್ಟು ದುಡಿಮೆ ಮಾಡಿ ತಮ್ಮ ಹೊಟ್ಟೆ ಜೀವನ ನಡೆಸುವುದರ ಜತೆಗೆ ಸಮಾಜಮುಖೀ ಕೆಲಸದ ಪಾತ್ರವು ಟ್ಯಾಕ್ಸಿ ಚಾಲಕರಿಗೆ ಸಲ್ಲುತ್ತದೆ.

ತಿಂಗಳ ಕೊನೆಯ ದಿನ ಬಂದರೆ ಸಾಕು ಮಾಲೀಕರಿಗೆ ವಾಹನದ ಕಂತ್ತುಕಟ್ಟುವ ಚಿಂತೆ ಒಂದು ಕಡೆಯಾದರೆ, ತಮ್ಮ ಮಾನ ಕಾಪಾಡುವ ಸಲುವಾಗಿ ಸಾಲ ಮಾಡಿ ಕಂತನ್ನು ಕಟ್ಟಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರೂಪಾಂತರಿ ವೈರಸ್‌ ಬಂದಿದ್ದು ಟ್ಯಾಕ್ಸಿ ಚಾಲಕರ ಜೀವನಕ್ಕೆ ಕುತ್ತಾಗಿದೆ.

ಕೊರೊನಾ ಕರ್ಫ್ಯೂದಿಂದ ಖಾಸಗಿ ವಾಹನ ಓಡಾಟಕ್ಕೆ ಕಡಿವಾಣ ಹೇರಿದ್ದರಿಂದ ತೀವ್ರ ಸಂಕಷ್ಟಕ್ಕೆ ಚಾಲಕರು ಮತ್ತು ಮಾಲೀಕರು ಸಿಲುಕಿದ್ದಾರೆ.ಮೂರು ತಿಂಗಳಿಗೆ ಸುಮಾರು 300- 4200 ರೂ.ವರೆಗೆ ರಸ್ತೆ ತೆರಿಗೆ ಪಾವತಿಸಿ ವಾಹನ ದುಡಿಸುತ್ತಾರೆ. ಅದರಲ್ಲೂ ವೈಟ್‌ ಬೋರ್ಡ್‌ ವಾಹನದ ಹಾವಳಿ ಹೆಚ್ಚಾಗಿದ್ದು, ಎಲೊ ಬೋಡ್‌ ವಾಹನಕ್ಕೆ ನಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಕೂಡಾ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಪಾತ್ರ ಚಾಲಕ-ಮಾಲೀಕನಿಗೆ ಅನಿವಾರ್ಯವಾಗಿದೆ. ಅದರಲ್ಲೂ ತಿಂಗಳಿಗೆ 6 ಸಾವಿರ ಸಂಬಳಕ್ಕೆ ದುಡಿಯುವ ಚಾಲಕರಿಗೆ ಭಗವಂತನೆ ಗತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಾಲೀಕರು ಚಾಲಕರಿಗೆ ವಾಹನ ತಂದು ಮನೆಯ ಮುಂದೆ ನಿಲ್ಲಿಸಿ ಆದರೆ, ಲಾಕ್‌ಡೌನ್‌ ವೇಳೆಯಲ್ಲಿ ಸಂಬಳ ನೀಡಲು ಮಾಲೀಕರು ನಿರಾಕರಿಸಿದ್ದಾರೆ. ಇಂತಹ ಸಂದರ್ಭದಲ್ಲೂ ಮೂಕ ಪ್ರೇಕ್ಷಕರಂತೆ ಜೀವನವನ್ನು ಚಾಲಕರು ಸಾಗಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next