Advertisement

ವಾಸ್ತವ್ಯ ಮನೆಗಳಿಗೆ ದುಪ್ಪಟ್ಟು ತೆರಿಗೆ: ಆಕ್ಷೇಪ 

03:13 PM Nov 29, 2017 | |

ವಿಟ್ಲ: ಪ.ಪಂ. ವ್ಯಾಪ್ತಿಯಲ್ಲಿ ವಾಸ್ತವ್ಯ ಮನೆಗಳಿಗೆ ವಾಣಿಜ್ಯ ತೆರಿಗೆಗಿಂತ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ಮರುಪರಿಶೀಲಿಸಬೇಕೆಂದು ವಿಪಕ್ಷ ನಾಯಕ ಅಶೋಕ್‌ ಕುಮಾರ್‌ ಶೆಟ್ಟಿ ಆಗ್ರಹಿಸಿದರು. ಆಗ ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಸ್ಪಷ್ಟನೆ ನೀಡಿ ಈ ಮೊದಲೇ ನಿಗದಿಯಾದಂತೆ ತೆರಿಗೆ ಹಾಕಲಾಗಿದೆ. ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆಯಾಗಲಿದ್ದು, ಬರುವ ವರ್ಷ ಪರಿಷ್ಕರಣೆ ನಡೆಯಬೇಕು ಎಂದರು. ಆಗ ಅಶೋಕ್‌ ಕುಮಾರ್‌ ಶೆಟ್ಟಿ ಅವರು ಮರು ಉತ್ತರಿಸಿ, ಅದಕ್ಕಾಗಿ ಮುಂದಿನ ವರ್ಷದ ತನಕ ಜನರಿಗೆ ತೊಂದರೆ ನೀಡಬಾರದು, ಕೂಡಲೇ ಪಟ್ಟಿ ಸಿದ್ಧಪಡಿಸಿ ಕಳುಹಿಸಬೇಕು ಎಂದು ತಿಳಿಸಿದರು.ಮಂಗಳವಾರ ವಿಟ್ಲ ಪ.ಪಂ. ಅಧ್ಯಕ್ಷ ಅರುಣ್‌ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

Advertisement

ಪ.ಜಾ. ಅಥವಾ ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಿ ಪ.ಪಂ. ಉಪಾಧ್ಯಕ್ಷರ ಆಯ್ಕೆ ನಡೆಸುವಂತೆ ಜಿಲ್ಲಾಧಿಕಾರಿಯವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಪೂರಕ ಸ್ಪಂದನೆ ಸಿಕ್ಕಿಲ್ಲ ಎಂದು ಅಧ್ಯಕ್ಷರು ಉತ್ತರಿಸಿದರು. ಇನ್ನೊಮ್ಮೆ ಸಂಬಂಧಿಸಿದ ಇಲಾಖೆ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಬ್ರೋಕರ್‌ಗಳ ಹಾವಳಿ
ಪ.ಪಂ.ನಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದ್ದು, ಹಿಂಬಾಗಿಲನ್ನು ಮುಚ್ಚಬೇಕೆಂದು ಸದಸ್ಯ ರವಿಪ್ರಕಾಶ್‌ ಹೇಳಿದಾಗ ಹಿಂಬಾಗಿಲನ್ನು ಮುಚ್ಚಬಾರದು, ಬದಲಾಗಿ ಸಿಸಿ ಕೆಮರಾ ಅಳವಡಿಸಿ ಎಂದು ವಿಪಕ್ಷ ನಾಯಕ ಅಶೋಕ್‌ ಕುಮಾರ್‌ ಶೆಟ್ಟಿ ತಿರುಗೇಟು ನೀಡಿದರು. ಈ ಸಂದರ್ಭ ಎರಡೂ ಪಕ್ಷಗಳ ಸದಸ್ಯರ ಮಧ್ಯೆ ಕೆಲ ಹೊತ್ತು ವಾಗ್ವಾದ ನಡೆಯಿತು.

ಸಭೆಯಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗೆ ಅವರವರ ವಿದ್ಯಾರ್ಹತೆ, ಅನುಭವಕ್ಕೆ ಸರಿಯಾಗಿ ಸಂಬಳ ಹೆಚ್ಚಿಸಬೇಕು. ಆಡಳಿತ ಸಮಿತಿಯ ಗಮನಕ್ಕೆ ಬಾರದೇ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಹೆಚ್ಚಿಸುವಂತಿಲ್ಲ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪ ತೆಂಗಿನ ಮರಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಮಾಲಕರಿಗೆ ನೋಟಿಸ್‌ ನೀಡಬೇಕು. ಬಸ್‌ ನಿಲುಗಡೆ, ವಾಹನ ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿ ನಿಭಾಯಿಸಬೇಕು, ಹಸಿಕಸ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸ್ಥಾಯೀ ಸಮಿತಿ ಅಧ್ಯಕ್ಷ ವಿ. ರಾಮದಾಸ ಶೆಣೆ„, ಸದಸ್ಯರಾದ ಲೋಕನಾಥ ಶೆಟ್ಟಿ ಕೊಲ್ಯ, ಉಷಾ ಕೃಷ್ಣಪ್ಪ, ಜಯಂತ, ಸುನೀತಾ ಕೋಟ್ಯಾನ್‌, ಮಂಜುನಾಥ ಕಲ್ಲಕಟ್ಟ, ಕೆ.ಚಂದ್ರಕಾಂತಿ ಶೆಟ್ಟಿ, ದಮಯಂತಿ, ಸಂಧ್ಯಾ ಮೋಹನ್‌ ಎಸ್‌., ಲತಾ ಅಶೋಕ್‌ ಪೂಜಾರಿ, ಗೀತಾ ಪುರಂದರ ಸೇರಾಜೆ, ಅಬ್ದುಲ್‌ ರಹಿಮಾನ್‌ ನೆಲ್ಲಿಗುಡ್ಡೆ, ಅಬ್ಬೋಕರೆ ವಿ., ನಾಮನಿರ್ದೇಶಿತ ಸದಸ್ಯರಾದ ಭವಾನಿ ರೈ ಕೊಲ್ಯ, ವಿ.ಎಚ್‌. ಸಮೀರ್‌ ಪಳಿಕೆ, ಪ್ರಭಾಕರ ಭಟ್‌ ಮಾವೆ, ಮುಖ್ಯಾಧಿಕಾರಿ ಮಾಲಿನಿ, ಕಿರಿಯ ಅಭಿಯಂತರ ಶ್ರೀಧರ ನಾಯ್ಕ ಭಾಗವಹಿಸಿದ್ದರು.

Advertisement

ಉಪಾಧ್ಯಕ್ಷರ ಆಯ್ಕೆಯಾಗಿಲ್ಲ
ಮೆಸ್ಕಾಂ ಜನಸಂಪರ್ಕ ಸಭೆ ಪ.ಪಂ. ಸಭಾಭವನದಲ್ಲಿ ನಡೆದರೂ ಪಟ್ಟಣ ಪಂಚಾಯತ್‌ ಸದಸ್ಯರಿಗೆ ಆಹ್ವಾನ ನೀಡಿಲ್ಲ. ಎರಡು ವರ್ಷವಾಗುತ್ತಾ ಬಂದರೂ ಪ.ಪಂ. ಉಪಾಧ್ಯಕ್ಷರ ಆಯ್ಕೆಯಾಗಿಲ್ಲ ಏಕೆ ಎಂದು ಆಡಳಿತ ಪಕ್ಷದ ಸದಸ್ಯ ಶ್ರೀಕೃಷ್ಣ ಸಭೆಯಲ್ಲಿ ಸ್ಪಷ್ಟನೆ ಕೇಳಿದರು. ಇನ್ನು ಮುಂದಕ್ಕೆ ಅಧ್ಯಕ್ಷರ ಹಾಗೂ ಆಡಳಿತ ಸಮಿತಿ ಸದಸ್ಯರ ಗಮನಕ್ಕೆ ಬಾರದೇ ಯಾವುದೇ ಅನುಮತಿ ನೀಡ ಕೂಡದೆಂದು ನಿರ್ಣಯಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next