Advertisement

ತೆರಿಗೆ ಸ್ಲ್ಯಾಬ್ ಬದಲಾಗಿಲ್ಲ ಏಕೆಂದರೆ…

09:54 AM Feb 02, 2018 | |

ಈಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆ ಸಂಬಳದಾರರಲ್ಲಿ ಇತ್ತು. ಆದರೆ ವಿತ್ತ ಸಚಿವರು ಹಿಂದಿನ ವರ್ಷದ ಪಟ್ಟಿಯನ್ನೇ ಮುಂದುವರಿಸಿದ್ದಾರೆ. ಏಕೆಂದರೆ ಇದು ದೇಶದ ಜನರ ಆರೋಗ್ಯ ಕಾಪಾಡುವ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮುಂದಾಗಿರುವ ಸರ್ಕಾರ ಅತಿದೊಡ್ಡ ವಿಮಾ ಯೋಜನೆ ಜಾರಿಗೊಳಿಸಲು ಮುಂದಾಗಿದೆ.
ಅದಕ್ಕೆ ಸೂಕ್ತ ರೀತಿಯ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಅದರತ್ತ ಗಮನ ಹರಿಸಲು ಮುಂದಾಗಿಲ್ಲ ಎಂದು
ವಿಶ್ಲೇಷಿಸಬಹುದು. ಏಕೆಂದರೆ ಘೋಷಣೆ ಯಾಗಿರುವ ವಿಮಾಯೋಜನೆಯಲ್ಲಿ ದೇಶದ ಕಡು ಬಡವರಿಗೆ ಹಾಗೂ ದುರ್ಬಲ
ವರ್ಗದ 10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂ.ಮೊತ್ತದವೈದ್ಯಕೀಯ ವಿಮೆ ಸೌಲ್ಯಭ್ಯ ಒದಗಿಸಲು ಮುಂದಾಗಿದ್ದಾರೆ.

Advertisement

ಹೀಗಾಗಿ ಆದಾಯ ತೆರಿಗೆ ಮಿತಿ ವಿಸ್ತರಿಸಿದರೆ ತಾಂತ್ರಿಕ ಸಮಸ್ಯೆ ಉಂಟಾಗಬಹುದು. ಅದನ್ನು ಗ್ರಹಿಸಿಕೊಂಡೇ ಯಥಾ ಸ್ಥಿತಿಯನ್ನು ಮುಂದುವರಿಸಲು ವಿತ್ತ ಸಚಿವರು ನಿರ್ಧರಿಸಿರುವ ಸಾಧ್ಯತೆ ಇದೆ. ಹಿರಿಯ ನಾಗರಿಕರಿಗೆ 50 ಸಾವಿರ ರೂ. ವರೆಗಿನ ಉಳಿತಾದ ಮೇಲಿನ ಬ್ಯಾಂಕ್‌ ಬಡ್ಡಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಜತೆಗೆ ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿಯನ್ನು 50 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿರುವುದು, ಉತ್ತಮ ಬೆಳವಣಿಗೆಯೇ. ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು 40 ಸಾವಿರ ರೂ.ಮಾಡಿದ್ದರಿಂದ ವೈಯಕ್ತಿಕ ತೆರಿಗೆಯಲ್ಲಿ ಕೊಂಚ ಉಳಿತಾಯ ಮಾಡಿದಂತಾಗಿದೆ. ಇನ್ನು ಕೃಷಿ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆಯನ್ನೇ ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಕೃಷಿ ಆಧಾರಿತ ಕಂಪನಿಗಳಿಗೆ ಶೇ.100ರಷ್ಟು ತೆರಿಗೆ ವಿನಾಯಿ ಪ್ರಕಟಿಸಲಾಗಿದೆ. ಹೀಗಾಗಿ ಕೃಷಿ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಹೊಸ ಉತ್ತೇಜನ ನೀಡಿದಂತಾಗಿದೆ ಎಂದರೆ ತಪ್ಪಾಗಲಾರದು.

ಕೃಷಿ ಆಧರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಂತೆಯೂ ಆಗಲಿದೆ. ವಿದೇಶಗಳಿಂದ ಆಮದು ಮಾಡುವ ಮೊಬೈಲ್‌ ಫೋನ್‌ಗಳಿಗೆ ಶೇ.20ರಷ್ಟು ತೆರಿಗೆ ವಿಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ “ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ನೆರವಾಗಲಿದೆ. ಭಾರತವನ್ನು ಉತ್ಪಾದನಾ ಕ್ಷೇತ್ರದ ಪ್ರಮುಖ ತಾಣವನ್ನಾಗಿ ಮಾಡಬೇಕು ಎನ್ನುವ ಕೇಂದ್ರದ ಆಶಯಕ್ಕೆ ಅದು ಪೂರಕವಾಗಿಯೂ ಇರಲಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಉತ್ತಮ ರೀತಿಯ ಬಂಡವಾಳ ಹೂಡಿಕೆ ಹರಿದು ಬರುವ ನಿರೀಕ್ಷೆ
ಸರ್ಕಾರದ್ದಾಗಿದೆ. 70 ಲಕ್ಷ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಮುದ್ರಾ ಬ್ಯಾಂಕ್‌ ಯೋಜನೆಯಡಿ 3 ಲಕ್ಷ ಕೋಟಿ ರೂ. ಸಾಲ ನೀಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. 

ರಮೇಶ್‌ ಕಟ್ಟ , ತೆರಿಗೆ ಸಲಹೆಗಾರರು

Advertisement

Udayavani is now on Telegram. Click here to join our channel and stay updated with the latest news.

Next