Advertisement

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

10:47 PM Feb 25, 2021 | Team Udayavani |

ಬಂಟ್ವಾಳ: ನಗರ ಸ್ಥಳೀಯ ಸಂಸ್ಥೆಗಳಲ್ಲಿ 2021-22ನೇ ಸಾಲಿನಿಂದ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದಲ್ಲಿ ಖಾಲಿ ಭೂಮಿಗೆ ತೆರಿಗೆ ವಿಧಿಸುವ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಂಟ್ವಾಳ ಪುರಸಭೆಯ ಸದಸ್ಯರು ಯಾವುದೇ ಕಾರಣಕ್ಕೂ ಈ ಕುರಿತು ನಿರ್ಣಯ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

Advertisement

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಗುರುವಾರ ಪುರಸಭೆ ಸಭಾಂಗ ಣದಲ್ಲಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಕಂದಾಯ ನಿರೀಕ್ಷಕರು ತೆರಿಗೆಯ ವಿಚಾರ ಪ್ರಸ್ತಾವಿಸುತ್ತಿದ್ದಂತೆ, ಸದಸ್ಯ ಗೋವಿಂದ ಪ್ರಭು, ಈ ವಿಚಾರವನ್ನು ಮೊದಲೇ ಯಾಕೆ ತಿಳಿಸಿಲ್ಲ ಎಂದು ಪ್ರಶ್ನಿಸಿ ದರು. ಫೆ. 19ರಂದು ಈ ಆದೇಶ ಬಂದಿದ್ದು, ಫೆ. 24ರಂದು ಕಂದಾಯ ನಿರೀಕ್ಷಕರು ತರಬೇತಿ ಮುಗಿಸಿಕೊಂಡು ಬಂದಿದ್ದಾರೆ. ಹೀಗಾಗಿ ನಮಗೂ ಮಾಹಿತಿ ವಿಳಂಬವಾಗಿ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸದಸ್ಯರಾದ ಮುನೀಶ್‌ ಆಲಿ, ಲುಕಾ¾ನ್‌ ಬಂಟ್ವಾಳ, ಗಂಗಾಧರ ಪೂಜಾರಿ, ಮೊಹ ಮ್ಮದ್‌ ನಂದರಬೆಟ್ಟು ವಿರೋಧ ವ್ಯಕ್ತಪಡಿಸಿದರು. ತೆರಿಗೆಗೆ ಸಂಬಂಧಿಸಿ 1964ರ ಅಧಿನಿಮಯವನ್ನು ಬದಲಿಸಿ ರುವುದರಿಂದ ನಿರ್ಣಯ ತೆಗೆದುಕೊಳ್ಳದೆ ಇದ್ದರೆ ತೆರಿಗೆ ಸಂಗ್ರಹ ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ಲೀಲಾ ಬ್ರಿಟ್ಟೊ ತಿಳಿಸಿದರು. ಬಳಿಕ ಈ ಕುರಿತು ಮುಂದೆ ವಿಶೇಷ ಸಭೆ ಕರೆಯುವುದಾಗಿ ಅಧ್ಯಕ್ಷರು ತಿಳಿಸಿದರು.

ಡಬ್ಬಲ್‌ ಟ್ಯಾಕ್ಸ್‌ನಲ್ಲಿ ಡೋರ್‌ ನಂಬರ್‌ ಚರ್ಚೆ
ಪರವಾನಿಗೆ ಇಲ್ಲದೆ ಮನೆ ಕಟ್ಟಿ ಕೊಂಡವರಿಗೆ ಡಬ್ಬಲ್‌ ಟ್ಯಾಕ್ಸ್‌ನಲ್ಲಿ ಡೋರ್‌ ನಂಬರ್‌ ನೀಡುವ ಕುರಿತು ನಿರ್ಣಯ ವಾದರೂ ಯಾಕೆ ಅನುಷ್ಠಾನಗೊಂಡಿಲ್ಲ ಎಂದು ಸದಸ್ಯ ಅಬೂಬಕ್ಕರ್‌ ಸಿದ್ದಿಕ್‌ ಪ್ರಶ್ನಿಸಿದರು. ನಾವು ಬಡವರ ಮನೆಗಳಿಗೆ ಡೋರ್‌ ನಂಬರ್‌ ಕೇಳುತ್ತಿದ್ದೇವೆ. ವಾಣಿಜ್ಯ ಕಟ್ಟಡಕ್ಕಲ್ಲ ಎಂದು ಪ್ರಶ್ನಿಸಿದರು. ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್‌ ಸ್ಥಳದಲ್ಲೂ ಡೋರ್‌ ನಂಬರ್‌ ನೀಡಲಾಗುತ್ತಿದೆ. ಜತೆಗೆ ಅಕ್ರಮ ಕಟ್ಟಡಗಳ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮತೆಗೆದುಕೊಳ್ಳುವುದಿಲ್ಲ ಎಂದು ಸಿದ್ದಿಕ್‌ ಆರೋಪಿಸಿದರು.

ಈ ವೇಳೆ ಜಿಲ್ಲಾಧಿಕಾರಿಗೆ ಬರೆದಿ ರುವುದಾಗಿ ಅಧಿಕಾರಿಗಳು ತಿಳಿಸಿದಾಗ, ಸದಸ್ಯರಾದ ಮುನೀಶ್‌ ಆಲಿ ಹಾಗೂ ಲುಕಾ¾ನ್‌ ಬಂಟ್ವಾಳ ಆಕ್ರೋಶಿತರಾಗಿ ಎಲ್ಲವನ್ನೂ ಜಿಲ್ಲಾಧಿಕಾರಿಗಳ ಬಳಿ ಕೇಳುವುದು ಸರಿಯಲ್ಲ ಎಂದು ತಿಳಿಸಿದರು. ಈ ರೀತಿ ಡೋರ್‌ ನಂಬರ್‌ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಸದಸ್ಯರು ಪತ್ರದ ಮೂಲಕ ತಿಳಿಸಿದರು.

Advertisement

ವಾಹನ ನಿಲುಗಡೆಗೆ ಶೆಡ್‌ ನಿರ್ಮಾಣಕ್ಕೆ ಮೀಸಲಿಟ್ಟ 20 ಲಕ್ಷ ರೂ. ಅನ್ನು ಸಿಸಿ ಕೆಮರಾ ವ್ಯವಸ್ಥೆಗೆ ಮೀಸಲಿಡೋಣ ಎಂದು ಎಂಜಿನಿಯರ್‌ ಡೊಮಿನಿಕ್‌ ಡಿ’ಮೆಲ್ಲೊ ತಿಳಿಸಿದರು. ಕಸದ ವಾಹನವರು ಮೈಕ್‌ ಅನೌನ್ಸ್‌ಮೆಂಟ್‌ ಮಾಡಬೇಕು ಎಂದು ಗಂಗಾಧರ ಪೂಜಾರಿ ಆಗ್ರಹಿಸಿದರು. ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ನಿರೀಕ್ಷಕರು ತಿಳಿಸಿದರು.

ಪುರಸಭೆಯ ಮನವಿಗೆ ಸರ್ವೇ ಇಲಾಖೆ ಸ್ಪಂದನೆ ನೀಡುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮನೆಗಳ ಕುಡಿಯುವ ನೀರಿನ ಕನಿಷ್ಠ ಬಿಲ್‌ ಅನ್ನು 100 ರೂ.ಗಳಿಗಿಂತ ಹೆಚ್ಚಿಗೆ ಮಾಡುವುದಕ್ಕೆ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಹಸೈನಾರ್‌ ವಿರೋಧ ವ್ಯಕ್ತಪಡಿಸಿದರು.

ಸಮರ್ಪಕ ಬಾಡಿಗೆ ನೀಡುತ್ತಿಲ್ಲ
ಪುರಸಭಾ ಕಟ್ಟಡದಲ್ಲಿ ವಿವಿಧ ಶುಲ್ಕ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಖಾಸಗಿ ಬ್ಯಾಂಕೊಂದರ ಘಟಕ ಕೆಲಸ ಮಾಡುತ್ತಿದ್ದು, ಆದರೆ ಅವರು ಬಾಡಿಗೆ ಸಮರ್ಪಕವಾಗಿ ನೀಡುತ್ತಿಲ್ಲ. ಜತೆಗೆ ಇಡೀ ದೇಶದಲ್ಲೇ ನಮಗೆ ಬಾಡಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು. ಈ ವೇಳೆ ಬ್ಯಾಂಕಿನವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ ಸದಸ್ಯ ಗೋವಿಂದ ಪ್ರಭು ವಿರೋಧಿಸಿದರು. ಆಗ ಎಲ್ಲ ಸದಸ್ಯರು ಧ್ವನಿಗೂಡಿಸಿ ಬಾಡಿಗೆ ನೀಡದೇ ಇದ್ದರೆ ಅವರು ಬಿಟ್ಟು ಹೋಗಲಿ ಎಂದು ಆಗ್ರಹಿಸಿದರು. ಅವರಿಗೆ ಬಾಡಿಗೆ ನೀಡುವಂತೆ ನೋಟಿಸ್‌ ನೀಡಿ, ಇದಕ್ಕೆ ಪೂರಕವಾಗಿ ಅನ್ಯ ಬ್ಯಾಂಕಿನವರು ಈ ರೀತಿ ಘಟಕ ಮಾಡುವುದಕ್ಕೆ ಸಾಧ್ಯವಿದೆಯೇ ಎಂದು ಚರ್ಚಿಸೋಣ ಎಂದು ಮುಖ್ಯಾಧಿಕಾರಿ ತಿಳಿಸಿದರು. ಅವರ ಬ್ಯಾಂಕಿನಲ್ಲಿರುವ ಪುರಸಭೆಯ ಎಲ್ಲ ಖಾತೆಗಳನ್ನು ರದ್ದು ಮಾಡೋಣ ಎಂದು ಅಧ್ಯಕ್ಷರು ತಿಳಿಸಿದರು.

ಗೌರವ ನೀಡಬೇಕು
ಬಿ.ಸಿ. ರೋಡ್‌ನ‌ಲ್ಲಿ ನಿರ್ಮಾಣ ಗೊಂಡಿರುವ ಕನ್ನಡ ಭವನಕ್ಕೆ ಅನುದಾನ ನೀಡುವಂತೆ ಕಸಾಪ ಅಧ್ಯಕ್ಷ ಮಾಡಿರುವ ಮನವಿಯನ್ನು ಪುರಸ್ಕರಿಸಿ 25 ಸಾವಿರ ರೂ. ನೀಡಲು ಸದಸ್ಯರು ಒಪ್ಪಿಗೆ ಸೂಚಿಸಿದರು. ಪೌರ ಕಾರ್ಮಿಕರು ಜಾತಿಯನ್ನು ಹಿಡಿದುಕೊಂಡು ಸದಸ್ಯರನ್ನು ಹೆಸರಿ ಸುವುದು ಸರಿಯಲ್ಲ, ಸದಸ್ಯರಿಗೆ ಗೌರವ ನೀಡಬೇಕು ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್‌ ತಿಳಿಸಿದರು. ಪೀಠೊಪಕರಣ ಅಳವಡಿಸುವುದಕ್ಕೆ ಹಿಂದಿನ ಸಭೆಯಲ್ಲಿ ಅನುಮೋದನೆಗೊಳ್ಳದ ಕಾರಣದಿಂದ ನಾವು ವಿರೋಧಿಸಿದ್ದೇವೆ. ಆದರೆ ನೀವು ನಡಾವಳಿಯಲ್ಲಿ ಅನುಮೋದನೆ ನೀಡಿದೆ ಎಂದು ಹಾಕಿದ್ದೀರಿ ಎಂದು ಸದಸ್ಯ ಹರಿಪ್ರಸಾದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next