ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ ಎಂದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಹೆಣಗಾಡುವ ಸ್ಥಿತಿಯನ್ನು ಕಾಣುತ್ತಿದ್ದೇವೆ. ಅಂದರೆ ಇಂದಿನ ಶಿಕ್ಷಣ ದುಬಾರಿಯಾಗುತ್ತಿದೆ. ಮಕ್ಕಳನ್ನು ಸ್ಕೂಲಿಗೆ ಸೇರಿಸಲು ಲಕ್ಷಗಟ್ಟಲೆ ತೆರಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಪೋಷಕರು ಕಟ್ಟುವ ಶಾಲಾ ಕಾಲೇಜಿನ ಬೋಧನಾ ಶುಲ್ಕದಿಂದಾಗಿ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಕ್ಕರೆ
ಸಮಾಧಾನವಲ್ಲವೇ?
Advertisement
ಶಾಲಾ ದಿನಗಳು ಎಲ್ಲರಿಗೂ ಪ್ರಿಯವೇ.! ಚೆಂದದ ಬಟ್ಟೆಯನ್ನು ತೊಟ್ಟು, ಅಮ್ಮ ನೀಡುವ ಬುತ್ತಿ, ಪುಸ್ತಕಗಳ ಬ್ಯಾಗಿನೊಂದಿಗೆ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ಕಾಲವನ್ನು ನೆನೆದರೆ ಮತ್ತೆ ಮತ್ತೆ ಮನಸ್ಸು ಮುದಗೊಳ್ಳುತ್ತದೆ. ನೋಟ್ ಬುಕ್, ಪೆನ್ಸಿಲ್, ರಬ್ಬರ್, ಮೆಂಡರ್ ಇತ್ಯಾದಿ ವಿಷಯಗಳಿಗೆ ಸ್ನೇಹಿತರೊಂದಿಗೆ ಕಿತ್ತಾಡಿದ್ದು ಯಾರಿಗೆ ನೆನಪಿಲ್ಲ? ಇದನ್ನೆಲ್ಲಾ ನೆನಪಿಸಿಕೊಳ್ಳುವಾಗ, ಶಾಲೆ ಮತ್ತು ಪರೀಕ್ಷೆ ಫೀಸ್‌ಗಾಗಿ ಅಪ್ಪನಿಗೆ ಹೇಳು ಎಂದು ಅಮ್ಮನನ್ನು ಪೀಡಿಸಿದ್ದು ಮರೆಯಲು ಸಾಧ್ಯವೇ..? ಅದೇ ವೇಳೆಗೆ, ನಮ್ಮ ವಿದ್ಯಾಭ್ಯಾಸಕ್ಕಾಗಿ ಪೋಷಕರು ಎಷ್ಟೊಂದು ಕಷ್ಟಪಟ್ಟರು, ನಮ್ಮ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬ ಪ್ರಶ್ನೆ ಕಾಡದೇ ಇರದು. ಈಗ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಶೈಕ್ಷಣಿಕ ವಲಯದಲ್ಲೂ ವೇಗ ಹೆಚ್ಚಿದೆ. ಪೋಷಕರ ಪ್ರತಿಷ್ಠೆ ಕಾರಣವೋ, ಜಾಗತಿಕ ಪ್ರಭಾವವೋ ಶಿಕ್ಷಣವಂತೂ ದುಬಾರಿಯಾಗಿದೆ. ಈಗ ಮಕ್ಕಳನ್ನು ಶಾಲೆಗೆ ಸೇರಿಸ
ಬೇಕೆಂದರೆ ಪೋಷಕರು ಪರದಾಟುವುದಂತೂ ನಿಜ. ಸ್ಕೂಲ್ ಫೀಸು, ಡೊನೇಷನ್, ಬಟ್ಟೆ, ಪುಸ್ತಕಗಳ ಜೊತೆಗೆ ಮಕ್ಕಳ ಪರೀಕ್ಷೆ ಫೀಸಿನಿಂದ ಟ್ಯೂಷನ್ ಫೀಸಿನವರೆಗೆ ವಾರ್ಷಿಕವಾಗಿ ಅನೇಕ ಖರ್ಚುಗಳು ಎದುರಾಗುತ್ತಿವೆ.
ಏನು? ಸ್ಕೂಲಿನವರು ವಿನಾಯಿತಿ ಕೊಡುತ್ತಾರೆ ಎಂದು ಭಾವಿಸಿದಿರಾ? ಇಲ್ಲ. ಪೋಷಕರೇ ತಾವು ಕಟ್ಟುವ ತೆರಿಗೆಯಲ್ಲಿ ಶೈಕ್ಷಣಿಕ ವಿನಾಯಿತಿ ಪಡೆಯುವ ಅವಕಾಶವೊಂದು ನಮ್ಮ ಮುಂದಿದೆ ಅದೇನೆಂದರೆ..! ತೆರಿಗೆ ಕಾಯಿದೆ ಹೇಳುವುದೇನು ?
1961ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಬೋಧನಾ ಶುಲ್ಕಕ್ಕೆ ಸಂಬಂಧಿಸಿದಂತೆ ಹೀಗೆ ವಿವರಿಸಲಾಗಿದೆ. ಆ ಪ್ರಕಾರ ಪೋಷಕರು ವಾರ್ಷಿಕವಾಗಿ ಮಕ್ಕಳಿಗಾಗಿ ಮಾಡುವ ಶೈಕ್ಷಣಿಕ ವೆಚ್ಚ 1.5 ಲಕ್ಷದೊಳಗೆ ಇದ್ದಲ್ಲಿ ತೆರಿಗೆ ವಿನಾಯಿತಿಯನ್ನು
ಪಡೆಯಬಹುದಾಗಿದೆ. ಚಿಕ್ಕ ಲೆಕ್ಕಾಚಾರದಲ್ಲಿ ವಿವರಿಸಬಹುದಾದರೆ ಒಬ್ಬ ವ್ಯಕ್ತಿ ತನ್ನ ಆದಾಯದ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಿದ್ದು, ಜೊತೆಗೆ ಆತನ ಮಗಳ/ಮಗನ ವಾರ್ಷಿಕ ಶೈಕ್ಷಣಿಕ ವೆಚ್ಚ 80 ಸಾವಿರ ತಲುಪುತ್ತಿದ್ದರೆ, ಆತನು ಕಟ್ಟುವ ಹೆಚ್ಚಿನ (30%) ತೆರಿಗೆಯಲ್ಲಿ ವಾರ್ಷಿಕವಾಗಿ 24,720 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. (ಇದು ಆತನು ಪಡೆಯುವ
ಗರಿಷ್ಠ ತೆರಿಗೆ ವಿನಾಯಿತಿ.) ತೆರಿಗೆ ವಿನಾಯಿತಿ ಹೇಗೆ ಸಿಗುತ್ತದೆ?
ದೇಶೀಯ ಮೂಲ: ಶಾಲಾ, ಕಾಲೇಜು ಪ್ರವೇಶ ವರ್ಷದಲ್ಲಿ ಪ್ರಮಾಣೀಕೃತ ಶಾಲೆಗಳು, ವಿಶ್ವವಿದ್ಯಾಲಯ, ಶೈಕ್ಷಣಿಕ ವಿದ್ಯಾಸಂಸ್ಥೆಗಳ
ವಿದ್ಯಾರ್ಥಿಗಳನ್ನು ದಾಖಲಿಸುವುದರಿಂದ ಈ ವಿನಾಯಿತಿ ಸಿಗಲಿದೆ. ಆದರೆ ಈ ಶಾಲೆ ಅಥವಾ ಕಾಲೇಜುಗಳು ಭಾರತೀಯ ಮೂಲದವೇ ಆಗಿರಬೇಕು.
Related Articles
ಕನಿಷ್ಠ ಹತ್ತುವರ್ಷವಾದರೂ ಇರಬೇಕು. ವಿದ್ಯಾರ್ಥಿ ಕಾಲೇಜು ಸೇರಿ ಓದುವವರೆಗೂ ಇದ್ದರೆ ಇದರ ಲಾಭ ಪಡೆಯಬಹುದು.
ಪ್ಲೇ ಹೋಂ ಸೇರಿದಂತೆ ನರ್ಸರಿಗೆ ಸೇರುವ ಮಕ್ಕಳಿಗೂ ಈ ವಿನಾಯಿತಿಯುಂಟು. ಅದರೆ ಅವರು ಶಿಕ್ಷಣ ಪಡೆಯುವ ಸ್ಥಳ ಸರ್ಕಾರಿ ಪ್ರಾಯೋಜಿತ ಶಾಲೆಯಾಗಿರಬೇಕು.
Advertisement
ಎರಡು ಮಕ್ಕಳಿಗೆ ಮಾತ್ರ: ಈ ತೆರಿಗೆ ವಿನಾಯಿತಿಯು ಎರಡು ಮಕ್ಕಳನ್ನು ಹೊಂದಿರುವ ದಂಪತಿಗೆ ಮಾತ್ರ ಅನ್ವಯವಾಗುತ್ತದೆ.ಎರಡು ಮಕ್ಕಳಿಗಿಂತ ಹೆಚ್ಚು ಇದ್ದರೆ ಅಂಥವರಿಗೆ ಈ ವಿನಾಯಿತಿ ಸೂತ್ರ ಅನ್ವಯವಾಗುವುದಿಲ್ಲ. ಪ್ರತ್ಯೇಕ ಪಾವತಿಗೆ ಅನ್ವಯ: ಒಂದು ವೇಳೆ ಕುಟುಂಬದ ಪತಿ-ಪತ್ನಿಯರಿಬ್ಬರೂ ಉದ್ಯೋಗಸ್ಥರಾಗಿದ್ದು, ಸರ್ಕಾರಕ್ಕೆ ಪ್ರತ್ಯೇಕವಾಗಿ
ತೆರಿಗೆ ಪಾವತಿಸುತ್ತಿದ್ದು, ಅವರ ಮನೆಯಲ್ಲಿ ನಾಲ್ಕುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಪಕ್ಷದಲ್ಲಿ ಪತಿ ಇಬ್ಬರು ಮಕ್ಕಳಿಗೆ ಮತ್ತು ಪತ್ನಿ ಇಬ್ಬರು ಮಕ್ಕಳಿಗೆ ಪತ್ಯೇಕವಾಗಿ ಶೈಕ್ಷಣಿಕ ಶುಲ್ಕವನ್ನು ಪಾವತಿಸಿದರೆ, ಆದ ಕೂಡ ವಿನಾಯಿತಿ ಇದೆ. ಆದರೆ ಕುಟುಂಬದಿಂದ ವಾರ್ಷಿಕ ಶೈಕ್ಷಣಿಕ ಶುಲ್ಕಪಾವತಿ 2 ಲಕ್ಷವನ್ನು ಮೀರಬಾರದು.
ಶೈಕ್ಷಣಿಕ ಸಾಲ ಪಡೆದಾಗ
ಎಜುಕೇಷನ್ ಲೋನ್ ಪಡೆದಾಗ ಸೆಕ್ಷನ್ 80ಉ ಅಡಿಯಲ್ಲಿ ಸಾಲದ ಬಡ್ಡಿಯಲ್ಲಿ ವಿನಾಯಿತಿ ಪಡೆಯಬಹುದು. ಆದರೆ ಸಾಲವು ವಿದ್ಯಾರ್ಥಿ ಹೆಸರಲ್ಲಿದ್ದು, ಆತನೇ ಪಾವತಿಸುತ್ತಿರಬೇಕು ಮತ್ತು ಉನ್ನತ ವ್ಯಾಸಂಗಕ್ಕೆ ಭಾರತೀಯ ಪ್ರಮಾಣೀಕೃತ ಬ್ಯಾಂಕಿನಲ್ಲಿ ಮಾತ್ರ ಸಾಲ ಪಡೆದಿರಬೇಕು. ದೀರ್ಘಕಾಲದ ಸಾಲ ಮರುಪಾವತಿಗೆ ಇದು ಹೇಳಿ ಮಾಡಿಸಿದ ಅವಕಾಶ. ಟ್ಯೂಷನ್‌ಗಳು
ದೇಶದಲ್ಲಿ ಸರ್ಕಾರಿ ಪ್ರಯೋಜಕತ್ವದ ಮೊರಾರ್ಜಿ, ನವೋದಯ, ಜೆಪಿ, ಇಂದಿರಾಗಾಂಧಿ… ಈ ಮಾದರಿಯ ಅನೇಕ ಶಾಲೆಗಳಿವೆ. ಇವು ಸರ್ಕಾರಿ ಪ್ರಾಯೋಜಕತ್ವದೊಂದಿಗೆ ಖಾಸಗಿ ಶೈಲಿಯ ಶಿಕ್ಷಣವನ್ನೂ ರೂಢಿಸಿಕೊಂಡಿವೆ. ಅಂದರೆ ಪ್ರಸ್ತುತ ಟ್ರೆಂಡಿನಲ್ಲಿ ಮನೆಪಾಠದ ಬದಲಾಗಿ ಶಾಲೆಯಲ್ಲಿಯೇ ಟ್ಯೂಷನ್ ಗಳನ್ನು ಮಾಡಲಾಗುತ್ತದೆ. ಅಂತಹ ವ್ಯವಸ್ಥೆಗಳಿಗೆ ಪ್ರತ್ಯೇಕ ಶುಲ್ಕವನ್ನು ಶಾಲೆ ಪ್ರಾರಂಭದಲ್ಲಿಯೇ ವಿಧಿಸುತ್ತವೆ ಈ ಮಾದರಿಯ ಶುಲ್ಕಗಳಿಗೆ ವಿನಾಯಿತಿ ಸಿಗುತ್ತದೆ. ದತ್ತು ಮಕ್ಕಳಿಗೆ ಹಕ್ಕಿದೆ
ತಮ್ಮ, ತಂಗಿ, ಅಕ್ಕನ ಮಗ, ತಂಗಿಯ ಮಗಳು,ದೊಡ್ಡಪ್ಪನ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸ ನೀಡಿ ಶೈಕ್ಷಣಿಕ ಶುಲ್ಕದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲಾಗುವುದಿಲ್ಲ. ಆದರೆ ಮಕ್ಕಳನ್ನು ದತ್ತು ಪಡೆದ ದಂಪತಿಗಳು ಆ ಮಗುವಿನ
ವಿದ್ಯಾಭ್ಯಾಸ ಮಾಡಿಸಿದರೆ ಶೈಕ್ಷಣಿಕ ಶುಲ್ಕಗಳಿಂದ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ತಪ್ಪು ಮಾಡಿದರೆ ಕಷ್ಟ ಆಗುತ್ತೆ…
ಪತಿ ಪತ್ನಿಯರಿಬ್ಬರೂ ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಕೊಳ್ಳೋಣ, ಒಬ್ಬರು ತೆರಿಗೆ ಪಾವತಿಸಿ ಮತ್ತೂಬ್ಬರು ಮರೆಮಾಚುವ,
ಅಥವಾ ಅನ್ಯಮೂಲದ ಗಳಿಕೆಯನ್ನು ಮರೆ ಮಾಚುತ್ತಾ, ಶೈಕ್ಷಣಿಕ ಶುಲ್ಕದಲ್ಲಿ ವಿನಾಯಿತಿಯನ್ನು ಪಡೆಯುತ್ತಿದ್ದು, ಇದು
ಕಾಲಾನಂತರದಲ್ಲಿ ಬೆಳಕಿಗೆ ಬಂದರೆ ತೆರಿಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿರುತ್ತದೆ. ಯಾರಿಗೆ ಈ ವಿನಾಯತಿ ಸಿಗುವುದಿಲ್ಲ?
ಒಟ್ಟು ಕುಟುಂಬದಲ್ಲಿದ್ದುಕೊಂಡು ಹಲವಾರು ಮಕ್ಕಳಿಗೆ ತೆರಿಗೆ ವಿನಾಯಿತಿಯನ್ನು ಪಡೆಯಲೆತ್ನಿಸಿದರೆ ಅದು ಅಸಾಧ್ಯ ಎನ್ನುತ್ತಾರೆ ತೆರಿಗೆ ತಜ್ಞರು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮಕ್ಕಳನ್ನು ಸೇರಿಸುವವರಿಗೆ ಈ ವಿನಾಯಿತಿ ಸಿಗದು.
ತಮ್ಮ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವೇ ಇಲ್ಲ.
ಪೋಷಕರು ನೀಡುವ ಆದಾಯ ತೆರಿಗೆ ರಿಟರ್ನ್ಗಳು ಮತ್ತು ಪೇಮೆಂಟ… ರಸೀದಿಗಳನ್ನು ನೀಡಲು ಅಥವಾ ಸರಿಯಾದ ಸಮಯದಲ್ಲಿ ತಲುಪಿಸಲು ವಿಫಲರಾದಲ್ಲಿ ಶೈಕ್ಷಣಿಕ ಶುಲ್ಕದ ತೆರಿಗೆ ವಿನಾಯಿತಿ ಸಿಗುವುದಿಲ್ಲ.
ನಿಮ್ಮ ಆದಾಯ ತೆರಿಗೆ ವ್ಯಾಪ್ತಿ, ಇತರ ಆದಾಯ ತೆರಿಗೆಯಲ್ಲಿ ಉಳಿತಾಯ ಅಥವಾ ಕಡಿತ, ನಿಮ್ಮ ವೆಚ್ಚ, ಖಾತೆ ನಿರ್ವಹಣೆ
ಎಲ್ಲವನ್ನು ಆದಾಯ ತೆರಿಗೆ ತಜ್ಞರು ಪರಿಶೀಲಿಸುತ್ತಾರೆ. ವ್ಯತ್ಯಾಸ ಕಂಡುಬಂದಲ್ಲಿ ವಿನಾಯಿತಿ ರದ್ದು.
ಶಾಲೆಯಲ್ಲಿ ಫೀಸನ್ನು ಲೇಟಾಗಿ ಕಟ್ಟಿದ ಕಾರಣಗಳು ಕಂಡುಬಂದರೂ ಈ ಅವಕಾಶದಿಂದ
ವಂಚಿತರಾಗಬೇಕಾಗುವುದು. ತೊಡಕುಗಳು
ಒಂದು ಕಡೆ ನೆಲೆ ನಿಲ್ಲದೆ ಪದೇ ಪದೇ ರಾಜ್ಯದಿಂದ ರಾಜ್ಯಕ್ಕೆ, ವಿದೇಶಕ್ಕೆ ವಲಸೆ ಹೋಗುವ ದಂಪತಿಗೆ ಈ ಯೋಜನೆಯಿಂದ ತೊಡಕು.
ವಾರ್ಷಿಕ ವರ್ಷದಲ್ಲಿಯೇ ನೀವು ಶೈಕ್ಷಣಿಕ ತೆರಿಗೆ ವಿನಾಯಿತಿಯನ್ನು ಪಡೆಯಬೇಕಿದ್ದು, ಆದಾಯ ತೆರಿಗೆ ಪರಿಣಿತರ ಸೂಚನೆ
ಮೇರಗೆ ವಿನಾಯತಿಯನ್ನು ಪಡೆಯಬೇಕಾಗುತ್ತದೆ. ಪ್ರಾರಂಭದಲ್ಲಿ ಆದಾಯ ತೆರಿಗೆ ಪಾವತಿ, ವಿನಾಯಿತಿ ಗೊಂದಲ ಮೂಡುವುದು ಸಹಜ.
ಕೂಡು ಕುಟುಂಬದಲ್ಲಿರದೇ ವಿಘಟಿತ ಕುಟುಂಬದಲ್ಲಿರುವ ಕುಟುಂಬದಲ್ಲಿರುವವರಿಗೆ ಇದು ಅನುಕೂಲವಾದ್ದರಿಂದ ಭಾರತೀಯರಿಗೆ ತೊಡಕು
ಮಕ್ಕಳಿಗೆ ಅನಾರೋಗ್ಯ ಮತ್ತು ಅವರ ತುಂಟತನದಿಂದ ಶಾಲೆ ತ್ಯಜಿಸಿದರೆ ಶುಲ್ಕ ವಿನಾಯಿತಿಗೆ ತೊಂದರೆ. ವಿನಾಯ್ತಿ ವ್ಯಾಪ್ತಿಗೆ ಬರದ ಶುಲ್ಕಗಳು
ಖಾಸಗಿ ಟ್ಯೂಷನ್ ಶುಲ್ಕ,
ಪ್ರೊಫೇಶನಲ್ ಕೋರ್ಸ್‌ಗಳಿಗಾಗಿ ಸೇರುವ ತರಬೇತಿ ಶುಲ್ಕಗಳು
ಪಾರ್ಟ್ ಟೈಮ… ಕೋರ್ಸ್‌ಗಳು
ಶಾಲಾಭಿವೃದ್ಧಿಗೆ ನೀಡಿದ ಹಣ
ಹಾಸ್ಟೆಲ್, ಮೆಸ್, ಲೈಬ್ರರಿ ಚಾರ್ಜ್‌ಗಳು,
ಶಾಲಾ,ಕಾಲೇಜಿಗೆ ತೆರಳಲು ಬಳಸಿದ ಕ್ಯಾಬ…,ಬಸ್ ಶುಲ್ಕ
ಸ್ಕೂಟರ್, ಕಾರ್, ಸೈಕಲ್ ಸ್ಟಾಂಡ್ ಚಾರ್ಜ್‌ಗಳು
ಟರ್ಮ್ ಫೀ, ಬಿಲ್ಡಿಂಗ್ ಫಂಡ್, ಡೊನೇಷನ್, ಕ್ಯಾಪಿಟೇಷನ್ ಫೀಸುಗಳು ಎನ್. ಅನಂತನಾಗ್