Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 16ನೇ ಹಣಕಾಸು ಆಯೋಗವು ದೇಶದ ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಹಿಂದಿನ ಹಣಕಾಸು ಆಯೋಗದ ಕೆಲ ನೀತಿಯಿಂದ ಕರ್ನಾಟಕ ಮತ್ತು ಇತರೆ ತಲಾವಾರು ಜಿಎಸ್ಡಿಪಿ ಹೆಚ್ಚಿದ್ದು, ಒಟ್ಟಾರೆ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳು ಕಡಿಮೆ ಮೊತ್ತದ ತೆರಿಗೆ ಪಾಲು ಪಡೆಯುವಂತಾಗಿದೆ. ಇದರಿಂದಾಗಿ ಮಾನವ ಸಂಪನ್ಮೂಲ ಹಾಗೂ ಭೌತಿಕ ಸಂಪನ್ಮೂಲದ ಮೇಲೆ ಬಂಡವಾಳ ಹಾಕುವ ಸಾಮರ್ಥ್ಯಕ್ಕೆ ಮಿತಿ ಹೇರುವಂತಾಗಿದೆ. ತೆರಿಗೆದಾರರು ತಾವು ಕಟ್ಟಿದ ತೆರಿಗೆಯ ಪಾಲು ನ್ಯಾಯಸಮ್ಮತವಾಗಿ ಹಿಂದಿರುಗಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಹಣಕಾಸು ಆಯೋಗವು ದಕ್ಷತೆ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ತೆರಿಗೆ ಪಾಲನ್ನು ಹಂಚಿಕೆ ಮಾಡಬೇಕು ಎಂಬುದನ್ನು ಕರ್ನಾಟಕಕ್ಕೆ ಆಯೋಗ ಬಂದಾಗ ಸ್ಪಷ್ಟವಾಗಿ ತಿಳಿಸಿದ್ದೇವೆ.
ಒಟ್ಟಾಗಿ ಪ್ರಸ್ತಾವನೆ ಇಡಲು ಪ್ರಸ್ತಾಪ:
ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ಕೊಡುತ್ತಿರುವ ರಾಜ್ಯಗಳು ಅತ್ಯಂತ ಕಡಿಮೆ ಪ್ರಮಾಣದ ತೆರಿಗೆ ಪಾಲನ್ನು ಕೇಂದ್ರದಿಂದ ಪಡೆಯುತ್ತಿದೆ. ಈ ಬಗ್ಗೆ ಆಯೋಗದ ಮುಂದೆ ಸೂಕ್ತ ಪ್ರಸ್ತಾವನೆಯನ್ನು ಎಲ್ಲರೂ ಒಟ್ಟಾಗಿ ಇಡಬೇಕಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.