Advertisement

ತೆರಿಗೆ ಇಲಾಖೆ ರಚನಾ ದಿನೋತ್ಸವ

09:15 AM Jul 26, 2017 | Team Udayavani |

ಬೀದರ: ಆದಾಯ ತೆರಿಗೆ ಇಲಾಖೆಯ ರಚನಾ ದಿನೋತ್ಸವದ ಪ್ರಯುಕ್ತ ಜಿಲ್ಲಾ ಆದಾಯ ತೆರಿಗೆ ಇಲಾಖೆಯಿಂದ ವಿವಿಧ
ಕಾರ್ಯಕ್ರಮಗಳು ನಡೆದವು. ನಗರದ ಗಣೇಶ ಮೈದಾನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. 

Advertisement

ಬಳಿಕ ಹೊಟೇಲ್‌ ಮಯೂರದಲ್ಲಿ ನಗರದ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ
ಚಿತ್ರಕಲಾ ಸ್ಪರ್ಧೆ ನಡೆಯಿತು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌. ಸೆಲ್ವಮಣಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಯ ರಚನೆ ಹಾಗೂ ಕಾರ್ಯಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿರುವುದು ಶ್ಲಾಘನೀಯ ಸಂಗತಿ. ಈ ನಿಟ್ಟಿನಲ್ಲಿಯೇ ಜಿಲ್ಲಾ ಆದಾಯ ತೆರಿಗೆ ಇಲಾಖೆ ಉತ್ತಮವಾಗಿ
ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. 

ವರಮಾನ ತೆರಿಗೆ ಅಧಿಕಾರಿ ವಿ. ಶ್ರೀನಿವಾಸರಾವ್‌ ಮಾತನಾಡಿ, ರಾಷ್ಟ್ರದ ಉದ್ದೇಶಗಳು ಸಫಲವಾಗುವ ದಿಶೆಯಲ್ಲಿ ಹಾಗೂ ಆದಾಯ ಒಟ್ಟುಗೂಡಿಸುವ ನಿಟ್ಟಿನಲ್ಲಿ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಜಿಎಸ್‌ಟಿ ಅಧೀಕ್ಷಕ ಎಚ್‌. ಮಾರುತಿ ಮಾತನಾಡಿದರು. ಆದಾಯ ತೆರಿಗೆ ಅಧಿಕಾರಿ ವಿ. ಶ್ರೀನಿವಾಸ, ಬೀದರ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಕೆ.ಕೆ.
ಅಟ್ಟಲ್‌ ಹಾಗೂ ಕಿರಾಣಿ, ಬಟ್ಟೆ, ಫಾರ್ಮಾ, ಹೊಟೇಲ್‌, ಜ್ಯುವೇಲರಿ ಸೇರಿದಂತೆ ವಿವಿಧ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು. ಅಂಚೆ ಇಲಾಖೆ ಸಿಬ್ಬಂದಿ ಮಂಗಲಾ ಭಾಗವತ ನಿರೂಪಿಸಿದರು. 

ಇಲಾಖೆಯ ಸಿಬ್ಬಂದಿ ಉಮಾಕಾಂತ, ಅಂಬಾದಾಸ ಹಾಗೂ ಝಾನ್ಸನ್‌ ಸ್ವಾಗತ ಗೀತೆ ಹಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next