Advertisement

ಕಡಿಮೆ ಮಾಲಿನ್ಯದ ಗಾಡಿಗೆ ತೆರಿಗೆ ಕಡಿತ? ಕೇಂದ್ರ ಸರ್ಕಾರದ ಹೊಸ ಚಿಂತನೆ

12:07 PM Oct 04, 2022 | Team Udayavani |

ನವದೆಹಲಿ: ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರ್ಕಾರ ಇದೀಗ ಕಡಿಮೆ ಪ್ರಮಾಣದಲ್ಲಿ ಹೊಗೆಯನ್ನು ಹೊರಸೂಸುವ ವಾಹನಗಳ ತೆರಿಗೆಯನ್ನೂ ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಭಾರಿ ಕೈಗಾರಿಕಾ ಸಚಿವಾಲಯದ ಮಟ್ಟದಲ್ಲಿ ಚಿಂತನೆ ನಡೆದಿದೆ.

Advertisement

ಕೇವಲ ಎಲೆಕ್ಟ್ರಿಕ್‌ ವಾಹನಗಳಿಂದ ವಾಯುಮಾಲಿನ್ಯ ನಿಯಂತ್ರಣ ಮಾಡಬಹುದು ಎಂದು ಹೇಳಲಾಗದು. ಹಾಗಾಗಿ ಮಾಲಿನ್ಯ ಕಡಿಮೆ ಮಾಡುವಂತಹ ಹಾಗೂ ಹೆಚ್ಚು ಮೈಲೇಜ್‌ ಕೊಡುವಂತಹ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಕ್ಕೆ ಸರ್ಕಾರದ ಆಂತರಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಅದಕ್ಕೆ ಒಪ್ಪಿಗೆ ಸಿಕ್ಕಿದರೆ ಈ ಪ್ರಸ್ತಾಪವನ್ನು ಜಿಎಸ್‌ಟಿ ಸಮಿತಿ ಎದುರು ಇಡಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ “ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಸದ್ಯ ವಾಹನಗಳ ಮೇಲೆ ಶೇ.28 ತೆರಿಗೆ ಹಾಕಲಾಗುತ್ತಿದೆ. ಒಂದು ವೇಳೆ ಈ ನೀತಿ ಜಾರಿಗೆ ಬಂದರೆ ಕೆಲವು ಕಂಪನಿಗಳ ಕೆಲ ಕಾರುಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next