Advertisement
ಸರ್ಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಿ ಸುಮಾರು 25-30 ವರ್ಷಗಳು ಗತಿಸಿದ್ದರೂ ಇಲ್ಲಿವರೆಗೆ ಯಾವುದೇ ವೈದ್ಯಾ ಧಿಕಾರಿಗಳು ಒಳಾಂಗಣದ ಅಂಗಳದಲ್ಲಿ ಕಸ ಕಡ್ಡಿ, ತ್ಯಾಜ್ಯ ಚೆಲ್ಲಿ ಅದರಲ್ಲಿ ತಿರುಗಾಡಲು ಸಹ ಆಗುತ್ತಿರಲಿಲ್ಲ. ಇದೀಗ ಆಸ್ಪತ್ರೆಯಲ್ಲಿಯೇ ಕೊಳವೆ ಬಾವಿ ಕೊರೆಸಿದ್ದು, ಆಸ್ಪತ್ರೆಗೆ ಬೇಕಾಗುವಷ್ಟು ನೀರು ಲಭ್ಯವಿದೆ. ಈ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿ ಡಾ| ಕಾವೇರಿ ಶ್ಯಾವಿ ಅವರು ವೈಯಕ್ತಿಕ ಆಸಕ್ತಿ ವಹಿಸಿ, ಒಳಾಂಗಣದ ಸ್ಥಳವನ್ನು ಸ್ವಚ್ಛ ಗೊಳಿಸುವುದರ ಜೊತೆಗೆ ಕೆಂಪು ಮಣ್ಣನ್ನು ಹಾಕಿಸಿ ಹದಗೊಳಿಸಿದರು.
ಉದ್ಯಾನವನದಲ್ಲಿ ಲವಳಸರ ಸಸ್ಯ, ಕಸ್ತೂರಿ, ತುಳಸಿ, ಕಟಾಣಿ ತೊಪ್ಪಲ ಸಸಿ, ಅಮೃತ ಬಳ್ಳಿ, ಬಿಳಿ ಮತ್ತು ಕೆಂಪು ದಾಸವಾಳ, ಪಾರಿಜಾತ, ನೀಲಗಿರಿ ಸೇರಿದಂತೆ ಸುಮಾರು 50ರಿಂದ 60 ವಿವಿಧ ಜಾತಿಯ ಔಷ ಧೀಯ ಸಸಿಗಳನ್ನು ನಾಟಿ ಮಾಡಲಾಗಿದೆ. ಸಸಿಗಳ ನಿರ್ವಹಣೆಗೆ ಪ್ರತಿದಿನ ಬೆಳಗ್ಗೆ ಸ್ವತಃ ತಾವೇ ಬಂದು ನೀರು ಹರಿಸುತ್ತಾರೆ. ಸಸಿಗಳ ರಕ್ಷಣೆಗಾಗಿ ಒಳಾಂಗಣದ ಸುತ್ತ ಜಾಲರಿ ಹಾಕಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕೂಡ ಉದ್ಯಾನವನ ರಕ್ಷಣೆ ಮಾಡುವಲ್ಲಿ ಮತ್ತು ಬೆಳೆಸುವಲ್ಲಿ ಶ್ರಮ ಪಡುತ್ತಿದ್ದಾರೆ. ಈ ಮೊದಲು ಆಸ್ಪತ್ರೆಗೆ ನೀರಿನ ಕೊರತೆ ಇತ್ತು. ನಮ್ಮ ಇಲಾಖೆಯವರು ಇತ್ತೀಚಿಗೆ ಕೊಳವೆಬಾವಿ ಹಾಕಿಸಿದಾಗ ಅದರಲ್ಲಿ ಆಸ್ಪತ್ರೆಗೆ ಬೇಕಾಗುವಷ್ಟು ನೀರು ಲಭ್ಯವಾಗಿದೆ. ಇದರಿಂದ ಪ್ರೇರಣೆಗೊಂಡು ಸಸಿಗಳನ್ನು ಹಚ್ಚಿ ಬೆಳೆಸಿದ್ದೇನೆ. ಇದರಿಂದ ತಮಗೆ ಸಂತೃಪ್ತಿಯಾಗಿದೆ.
ಡಾ| ಕಾವೇರಿ ಶ್ಯಾವಿ, ಮುಖ್ಯ ವೈದ್ಯಾಧಿಕಾರಿ
ಸಮುದಾಯ ಆರೋಗ್ಯ ಕೇಂದ್ರ.
Related Articles
ಶಂಕರ್ ಈಳಗೇರ
ವ್ಯಾಪಾರಿ ತಾವರಗೇರಾ
Advertisement
ಎನ್. ಶಾಮೀದ್