Advertisement

ತಾವರಗೇರಾ: ಮತ ಯಂತ್ರಗಳ ಸಂಖ್ಯೆ ಬದಲಾಗಿವೆ ಎಂದು ಪ್ರತಿಭಟನೆ

03:00 PM Dec 24, 2021 | Team Udayavani |

ಕುಷ್ಟಗಿ: ಕುಷ್ಟಗಿ ತಹಶೀಲ್ದಾರ ಕಚೇರಿಯ ಚುನಾವಣಾ ವಿಭಾಗದಲ್ಲಿರುವ ತಾವರಗೇರಾ ಪಟ್ಟಣ ಪಂಚಾಯತಿ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳ ಸಂಖ್ಯೆ ಬದಲಾಗಿವೆ ಎಂದು ಶಂಕಿಸಿ ನಾಗರೀಕ ಅಭಿವೃದ್ಧಿ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಡಿ.27ಕ್ಕೆ ನಿಗದಿಯಾದ ಪಟ್ಟಣ ಪಂಚಾಯತಿ ಚುನಾವಣೆಗೆ, ತಹಶೀಲ್ದಾರ ಕಛೇರಿಯ ಚುನಾವಣಾ ವಿಭಾಗದಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕೆಲವು ಮತಯಂತ್ರಗಳ ಸಂಖ್ಯೆ ಬದಲಿಯಾಗಿವೆ ಎನ್ನುವುದು ನಾಗರೀಕ ಅಭಿವೃದ್ಧಿ ಸಮಿತಿಯ ವಾದ. ಇದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿದ್ದು ಮುಂಚಿತವಾಗಿ 500ಕ್ಕೂ ಅಧಿಕ ಮತಗಳನ್ನು ಹಾಕಿಕೊಂಡಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಈ ವಾದ ಅಲ್ಲಗಳೆದಿರುವ ಸ್ಥಳೀಯ ಸಿಬ್ಬಂದಿ ತಹಶೀಲ್ದಾರ ಎಂ.ಸಿದ್ದೇಶ ಹಾಗೂ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಸಮಕ್ಷಮದಲ್ಲಿ ಪುನರ್ ಪರಿಶೀಲಿಸುವ ಭರವಸೆ ನೀಡಿದೆ.

ಇದೇ ವೇಳೆ ಪಟ್ಟಣ ಪಂಚಾಯತಿ ಬಳಿ ಆಯೋಜಿಸುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆಯ ವೇದಿಕೆಯ ಬಗ್ಗೆ ನಾಗರೀಕ ಅಭಿವೃದ್ಧಿಯ ವೇದಿಕೆಯಿಂದ ತೀವ್ರ ತಕರಾರು ವ್ಯಕ್ತವಾಯಿತು.

ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್ ಸಿಂಗ್

Advertisement

ಪಟ್ಟಣ ಪಂಚಾಯಿತಿ ಹತ್ತಿರದ ರಸ್ತೆಯಲ್ಲಿ ವೇದಿಕೆ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ಇಲ್ಲಿ ವೇದಿಕೆ ನಿರ್ಮಿಸಲು ಅವಕಾಶ ಕಲ್ಪಿಸಿದ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಪ್ರತಿಭಟನಾ ನಿರತರು ತಹಶೀಲ್ದಾರರನ್ನು ಸಂಪರ್ಕಿಸಿದಾಗ ಅನುಮತಿ ಪಡೆಯದ ವಿಷಯ ಗೊತ್ತಾದಾಗ, ಕಾಂಗ್ರೆಸ್ ಪಕ್ಷದ ಮತ ಯಾಚನೆಯ ಬಹಿರಂಗ ಸಭೆಯ ವೇದಿಕೆಯ ನಿರ್ಮಾಣ ಕೆಲಸ ಮೊಟಕುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next