Advertisement

2020ರ ಎಪ್ರಿಲ್‌ನಿಂದ ಟಾಟಾ ನ್ಯಾನೋ ಉತ್ಪಾದನೆ, ಮಾರಾಟ ಬಂದ್‌

01:35 PM Jan 24, 2019 | udayavani editorial |

ಹೈದರಾಬಾದ್‌ : ರತನ್‌ ಟಾಟಾ ಅವರ ಕನಸಿನ ಕಾರು ಎಂದೇ ವರ್ಣಿಸಲ್ಪಟ್ಟಿದ್ದ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟವನ್ನು 2020ರ ಎಪ್ರಿಲ್‌ನಿಂದ ನಿಲ್ಲಿಸಲಾಗುವುದು ಎಂದು ಟಾಟಾ ಮೋಟರ್ಸ್‌  ಕಂಪೆನಿ ಹೇಳಿದೆ. 

Advertisement

ಟಾಟಾ ನ್ಯಾನೋ ಕಾರನ್ನು ಬಿಎಸ್‌-6 ಮಟ್ಟಕ್ಕೇರಿಸುವಲ್ಲಿ ಹಣ ಹೂಡುವ ಯಾವುದೇ ಯೋಜನೆ ತನಗಿಲ್ಲ ಎಂದು ಕಂಪೆನಿ ಹೇಳಿದೆ. 

ಈ ವರ್ಷ ಜನವರಿಯಿಂದ ಕೆಲವೊಂದು ಸುರಕ್ಷಾ ಕ್ರಮಗಳು ಜಾರಿಗೆ ಬಂದಿವೆ. ಎಪ್ರಿಲ್‌ನಲ್ಲಿ ಪುನಃ ಇನ್ನಷ್ಟು ಕ್ರಮಗಳು ಜಾರಿಗೆ ಬರಲಿವೆ.  ಅಕ್ಟೋಬರ್‌ನಿಂದ ಮತ್ತೆ ಹೊಸ ಸುರಕ್ಷಾ ಕ್ರಮಗಳು ಜಾರಿಗೆ ಬರಲಿವೆ. 2020ರ ಎಪ್ರಿಲ್‌ 1ರಿಂದ ಬಿಎಸ್‌-6 ಸಂಪೂರ್ಣವಾಗಿ ಜಾರಿಗೆ ಬರಲಿದೆ.

ಇದಕ್ಕೆ ಅನುಗುಣವಾದ ಉತ್ಪನ್ನ ತರಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯ ಇರುತ್ತದೆ. ಆದರೆ ಕಂಪೆನಿ ನ್ಯಾನೋ ಸುಧಾರಣೆಗಾಗಿ  ಹಣ ಹೂಡುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಕಂಪೆನಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next