Advertisement

ಟಾಟಾದಿಂದ ಅನ್ವಿಯಾ ಕಾನ್ಸೆಪ್ಟ್ ಅನಾವರಣ; 2025ಕ್ಕೆ ರಸ್ತೆಗಿಳಿಯುವ ಸಾಧ್ಯತೆ

06:45 PM Apr 29, 2022 | Team Udayavani |

ಟಾಟಾ ಮೋಟಾರ್ಸ್‌ ಸಂಸ್ಥೆಯು ಎಲೆಕ್ಟ್ರಿಕ್‌ ಎಸ್‌ಯುವಿಗಳಲ್ಲಿ ಹೊಸದಾಗಿ “ಅನ್ವಿಯಾ’ ಕಾನ್ಸೆಪ್ಟ್ ಅನಾವರಣ ಮಾಡಿದೆ.

Advertisement

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿರುವ ಈ ಕಾರನ್ನು ಪ್ಯೂರ್‌ ಇವಿ ಜನರೇಷನ್‌ 3 ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣ ಮಾಡಲಾಗುವುದು. ಈ ರೀತಿಯ ಮೊದಲ ಕಾರು 2025ರಲ್ಲಿ ರಸ್ತೆಗಿಳಿಯುವ ಸಾಧ್ಯತೆಯಿದೆ.

ಎಸ್‌ಯುವಿ ಮತ್ತು ಎಂಪಿವಿ ಎರಡೂ ರೀತಿಯ ವಿನ್ಯಾಸವನ್ನು ಸೇರಿಸಿ ಮಾಡಲಾಗುವ ಈ ಕಾರು 4300ಮಿ.ಮೀ ಉದ್ದವಿರಲಿದೆ. ವಿಶೇಷವಾಗಿ ಬಟರ್‌ಫ್ಲೈ ವಿನ್ಯಾಸದಲ್ಲಿ ಕಾರಿನ ಬಾಗಿಲುಗಳಿರುವ ಸಾಧ್ಯತೆಯಿದೆ.

ಇದನ್ನೂ ಓದಿ:ಅಸ್ಸಾಂ; ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿಗೆ ಜಾಮೀನು

ಈ ಕಾರು ಒಮ್ಮೆ ಪೂರ್ತಿ ಚಾರ್ಜ್‌ ಆದರೆ 500ಕಿ.ಮೀ ದೂರ ಕ್ರಮಿಸಬಲ್ಲದು ಹಾಗೂ ಡಿಸಿ ಫಾಸ್ಟ್‌ ಚಾರ್ಜ್‌ರ್‌ ಬಳಸಿಕೊಂಡು 30 ನಿಮಿಷಗಳಲ್ಲಿ ಚಾರ್ಜ್‌ ಆಗಬಹುದಾಗಿದೆ ಎಂದು ಮೂಲಗಳು ಹೇಳಿವೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next