Advertisement
ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಬಹುಮೂಲ್ಯ ಕೊಡುಗೆಯನ್ನು ನೀಡಿರುವ ಸಾಹಿತಿಗಳಾದ ಮಹಾಶ್ವೇತಾದೇವಿ(2011), ಸರ್ ವಿ.ಎಸ್. ನಾೖಪಾಲ್(2012), ಖುಷ್‌ವಂತ್ ಸಿಂಗ್(2013), ಎಂ.ಟಿ. ವಾಸುದೇವನ್ ನಾಯರ್(2014), ಕಿರಣ್ ನಗರ್‌ಕರ್(2015), ಅಮಿತಾವ್ ಘೋಷ್(2016) ಇವರಿಗೆ “ಟಾಟಾ ಸಾಹಿತ್ಯ ಜೀವಮಾನ ಸಾಧನೆ ಪ್ರಶಸಿ’¤ ದೊರಕಿದ್ದು, ಇದೀಗ ನಮ್ಮವರೇ ಆಗಿರುವ ಗಿರೀಶ್ ಕಾರ್ನಾಡ್‌ರಿಗೆ ಈ ಪ್ರಶಸ್ತಿ ದೊರಕಿದ್ದು, ನಾವು ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ.
ವಾಗುತ್ತದೆ. ಆದುದರಿಂದ ನಾಟಕಕಾರನಾಗಿ ನನಗೆ “ಟಾಟಾ ಲಿಟರೆರಿ ಲೈವ್!’ ಪ್ರಶಸ್ತಿ ನೀಡುತ್ತಿರುವುದು ನನ್ನನ್ನು ಭಾವುಕನನ್ನಾಗಿಸಿದೆ. ಹಲವು ಭಾಷೆ, ಸಂಸ್ಕೃತಿ ಹಾಗೂ ಹಿಂದಿನ ತಲೆಮಾರುಗಳೆಲ್ಲವನ್ನೂ ಮೀರಿ ಪ್ರಶಂಸೆಯ ಅಲೆಗಳು ನನ್ನನ್ನು ಇಂದು ಮುತ್ತುತ್ತಿವೆ…ಇನ್ನೇನು ಬೇಕು? ಈ ಕ್ಷಣಕ್ಕಾಗಿಯೇ ನಾಟಕಕಾರ ಬದುಕುತ್ತಾನೆ’ ಎಂದು ಗಿರೀಶ್ ಕಾರ್ನಾಡರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿರುವರು.
Related Articles
Advertisement
ವಿದೇಶದಲ್ಲಿ ವ್ಯಾಸಂಗ ಮಾಡಿ, ಅಲ್ಲಿಯ ಬದುಕನ್ನು ಹತ್ತಿರದಿಂದ ಗಮನಿಸಿದವರು ಅವರು. ಮಾತ್ರವಲ್ಲದೆ ಭಾರತಕ್ಕೆ ಹಿಂದಿರುಗಿ ಬಂದು ಹಿಂದಿ ಸಿನೆಮಾರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವರು. ಆದರೂ ಕನ್ನಡವನ್ನೇ ತಮ್ಮ ಸಾಹಿತ್ಯದ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಆಯ್ಕೆ ಮಾಡಿದರು ಎನ್ನುವುದು ಸೋಜಿಗದ ಸಂಗತಿಯೇ ಸರಿ.
ನಾಟಕಗಳೇ ಅವರ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮ. ಹಾಗೆ ನೋಡಿದರೆ ಕಳೆದೈದು ದಶಕಗಳಲ್ಲಿ ಅವರು ಬರೆದ ನಾಟಕಗಳ ಸಂಖ್ಯೆ ಕೇವಲ ಹದಿನಾಲ್ಕು. ಆದರೆ ಅವರು ಬರೆದ ಪ್ರತಿಯೊಂದು ನಾಟಕವೂ ನಾಟಕ ಸಾಹಿತ್ಯ ಪ್ರಕಾರಕ್ಕೆ ಅಂತೆಯೇ, ರಂಗಭೂಮಿಗೆ ಕೂಡ ಹೊಸತನ ನೀಡುವ ಪ್ರಯತ್ನವನ್ನು ಸತತವಾಗಿ ನಡೆಸಿವೆ. ತಮ್ಮ ನಾಟಕವನ್ನು ಸತತವಾಗಿ ತಿದ್ದಿ ಮರುಮುದ್ರಣ ಮಾಡುವ ಕಾರ್ನಾಡರು ಅತ್ಯಂತ ಪ್ರತಿಭಾಶಾಲಿ ಹಾಗೂ ಪ್ರಯೋಗಶೀಲ ನಾಟಕಕಾರ. ಆದುದರಿಂದಲೇ ನಟ ರಿಗೆ, ನಿರ್ದೇಶಕರಿಗೆ, ಕಾರ್ನಾಡರ ನಾಟಕಗಳನ್ನು ರಂಗಭೂಮಿಯ ಮೇಲೆ ಸಮರ್ಥವಾಗಿ ಪ್ರದರ್ಶಿಸುವುದೇ ಒಂದು ದೊಡ್ಡಸವಾಲೆನಿಸುತ್ತದೆ. ಅವರು ನಾಟಕ ಬರೆಯುವುದನ್ನೇ ಕಾತರದಿಂದ ಕಾಯುತ್ತಿರುವ ನಿರ್ದೇಶಕರಿಗೆ ಅದರ ರಂಗ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಿದರೆ ಸಿಗುವಷ್ಟು ಸಮಾಧಾನ ಯಾವ ಪ್ರಶಸ್ತಿಯಿಂದಲೂ ದಕ್ಕಲಾರದು ಎನ್ನುವುದು ನಿಜಸಂಗತಿ. “ಬೆಂದ್ ಕಾಳ್-ಆನ್ ಟೋಸ್ಟ್’ ಪ್ರಕಟಗೊಂಡ ತಿಂಗಳೊಂದರಲ್ಲೇ ಅದರ ರಂಗಪ್ರಯೋಗವೂ ನಡೆದು ಜನಮೆಚ್ಚುಗೆಯನ್ನು ಪಡೆದುದು ಇದಕ್ಕೆ ಸಾಕ್ಷಿ1961ರಲ್ಲಿ ಬರೆದ “ಯಯಾತಿ’ ನಾಟಕದಿಂದ ಪ್ರಾರಂಭಿಸಿ ಇತ್ತೀಚೆಗೆ ಪ್ರಕಟಣೆಗೊಂಡ “ಬೆಂದ್ ಕಾಳ್-ಆನ್ ಟೋಸ್ಟ್’ ತನಕ ಅಂದರೆ ಕಳೆದ ಐದು ದಶಕಗಳಿಂದಲೂ ನಿರಂತರವಾಗಿ ನಾಟಕಗಳನ್ನೇ ಬರೆಯುತ್ತಾ ಬಂದ ಗಿರೀಶ್ ಕಾರ್ನಾಡ್ ಅವರು ನಾಟಕಸಾಹಿತ್ಯಕ್ಕಾಗಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಹಾಗೂ ಏಕೈಕ ಸಾಹಿತಿ. ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೊದಲೇ ಇವರ ನಾಟಕಗಳು ಭಾರತೀಯ ಹಾಗೂ ವಿದೇಶೀಯ ಭಾಷೆಗಳಲ್ಲಿ ಅನುವಾದಿತಗೊಂಡಿದ್ದವು. ತಮ್ಮ ಹಾಗೂ ಇತರ ಪ್ರಖ್ಯಾತ ಭಾರತೀಯ ನಾಟಕಗಳನ್ನು(ಏವಂ ಇಂದ್ರಜಿತ್, ಆಷಾಢ್ ಕೆ ಏಕ್ ದಿನ್, ಹಯವದನ )ಇಂಗ್ಲಿಷ್‌ಗೆ ಭಾಷಾಂತರಿಸಿ ಭಾರತೀಯ ನಾಟಕಗಳಿಗೆ ಅಂತಾರಾಷ್ಟ್ರೀಯ ವೇದಿಕೆಯನ್ನು ನೀಡಿದ ಹೆಗ್ಗಳಿಕೆ ಇವರದ್ದು. ಪ್ರಾರಂಭದಲ್ಲಿ ಅವರು ಪುರಾಣ, ಇತಿಹಾಸ ಮತ್ತು ಜಾನಪದ ಕಥಾನಕಗಳೊಡನೆ ಮುಖಾಮುಖೀಯಾಗುವಷ್ಟೇ ಸಲೀಸಾಗಿ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಸ್ಥಿತ್ಯಂತರ ಗಳನ್ನು ಕೂಡ ವಿಶ್ಲೇಷಿಸುತ್ತಾರೆ. ತಮ್ಮ ನಾಟಕಗಳಲ್ಲಿ ನಿರ್ಭಿಡೆಯಿಂದ ಹೆಣ್ಣು-ಗಂಡಿನ ಸಂಬಂಧಗಳನ್ನು ವ್ಯಾಖ್ಯಾನಿಸುವಲ್ಲಿ, ಧರ್ಮ ಹಾಗೂ ರಾಜಕೀಯದ ಒಳಪದರಗಳನ್ನು ಅನಾವರಣಗೊಳಿಸುವಲ್ಲಿ, ರೂಢಿಗತ ಮೌಲ್ಯಗಳನ್ನು ಪ್ರಶ್ನಿಸುವ ರೀತಿಯಲ್ಲಿ ಕಾರ್ನಾಡ್ ಅವರು ದರ್ಶಿಸುವ ಕಲಾತ್ಮಕತೆ ಅದ್ವಿತೀಯವಾದುದು ಮತ್ತು ಅಷ್ಟೇ ಪ್ರಭಾವಶಾಲಿಯಾದುದು. ಅವರ ನಾಟಕಗಳನ್ನು ಇಬ್ರಾಹಿಮ್ ಅಲ್ಕಾಝಿ, ಸತ್ಯದೇವ್ ದುಬೆ, ವಿಜಯಾ ಮೆಹ್ತಾ, ಅಲೀಖ್ ಪದಮಸಿ, ಬಿ.ವಿ.ಕಾರಂತ, ಪ್ರಸನ್ನ ಹಾಗೂ ಬಿ.ಜಯಶ್ರೀ ಯಂತಹ ಪ್ರತಿಭಾವಂತ ನಿರ್ದೇಶಕರು ನಿರ್ದೇಶಿಸಿದ್ದಾರೆ. ಚಲನಚಿತ್ರ ನಿರ್ದೇಶಕರಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಗಿರೀಶ್ ಕಾರ್ನಾಡರು ತಮ್ಮ ‘ಒಡಕಲು ಬಿಂಬ’ ನಾಟಕವನ್ನು ಮಾತ್ರ ನಿರ್ದೇಶಿಸಿರುವರು. ರಾಜ್ಯದ, ರಾಷ್ಟ್ರೀಯ -ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಇವರ ನಾಟಕ ಸಾಹಿತ್ಯಕ್ಕೆ, ನಾಟಕ ಪ್ರದರ್ಶನಕ್ಕೆ, ಅಭಿನಯ ಹಾಗೂ ನಿರ್ದೇಶನಕ್ಕೆ ದೊರಕಿವೆ. ಅವುಗಳಲ್ಲಿ ಪದ್ಮಶ್ರೀ (1974), ಪದ್ಮಭೂಷಣ(1992), ಕರ್ನಾಟಕ ವಿ.ವಿ.ದಿಂದ ಡಿ.ಲಿಟ್ ಪದವಿ, ಕರ್ನಾಟಕ ಸರಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ(1997), ಮಧ್ಯ ಪ್ರದೇಶ ಸರಕಾರದಿಂದ ಕಾಲಿದಾಸ್ ಸಮ್ಮಾನ್ ಪ್ರಮುಖವಾದುವು. ಅವರ ಸಾಹಿತ್ಯ ಮತ್ತು ಕಲಾಕ್ಷೇತ್ರದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಕೊಡುಗೆಯನ್ನು ಗುರುತಿಸಿ 1999ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಭಾರತೀಯ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿ ಹೊಸ ಸಾಧ್ಯತೆಗಳನ್ನು ಮನಗಾಣಿಸಿ ಚೈತನ್ಯವನ್ನು ತುಂಬಿದ ಅತ್ಯಂತ ಪ್ರತಿಭಾಶಾಲಿ ಗಿರೀಶ್ ಕಾರ್ನಾಡರಿಗೆ ಅಭಿನಂದನೆಗಳು. ಡಾ. ಮಮತಾ ರಾವ್