ಸಾಂಬಾರ್‌ಗೆ ಉಪ್ಪು ಮತ್ತಿತರ ಅಂಶಗಳು ಸಾಕಾಗಿದೆಯೋ ಎಂದು ರುಚಿ ನೋಡಿ ಖಚಿತಮಾಡಬಹುದು. ಆದರೆ ಆಹಾರದ ರುಚಿಯನ್ನು ಟಿವಿ ಪರದೆಯಲ್ಲಿ ನೆಕ್ಕಿ ನೋಡುವಂಥ ವಿಚಾರ ಇದೆಯೇ?
ಜಪಾನ್‌ನ ಮೈಜಿ ವಿವಿಯ ಪ್ರೊಫೆಸರ್ ಹೋಮಿ ಮಿಯಾಶಿಟ ಕ್ರೇ ಇಂಥ ಒಂದು ಹೊಸ ಸಂಶೋಧನೆ ಮಾಡಿದ್ದಾರೆ.
ಟಿವಿ ಪರದೆಯಲ್ಲಿ ಕಾಣುವ ಆಹಾರದ ರುಚಿಯನ್ನು, ನೆಕ್ಕಿ ಅನುಭವಿಸಬಹುದು! ಹೀಗೊಂದು ಅನುಭವ ಜನರಿಗೆ ಸಿಗಲು ಟಿವಿ ಸಿದ್ಧಪಡಿಸಿದ್ದಾರೆ. ಅದಕ್ಕೆ ಅವರು ಇಟ್ಟ ಹೆಸರು ಟೇಸ್ಟ್ ದ ಟಿವಿ (ಟಿಟಿಟಿವಿ).
ಟಿವಿಗೆ ಅಂಟಿಕೊಂಡಂತೆ ಒಂದು ದೊಡ್ಡ ಡಬ್ಬಿ, ಅದರೊಳಗೆ ಪರದೆಯೊಳಗೆ ಕಾಣುವ ಆಹಾರದ ಫ್ಲೇವರ್‌ಗಳನ್ನು ಹೊಂದಿರುವ 10 ಚಿಕ್ಕ ಚಿಕ್ಕ ಡಬ್ಬಿಗಳಿರುತ್ತವೆ. ಪರದೆಯಲ್ಲಿ ಆಹಾರ ಕಾಣಿಸಿದ ಕೂಡಲೇ; ಅದೇ ರುಚಿ ಪರದೆಯ ಮೇಲೆ ಅಂಟಿಸಲಾಗಿರುವ ಅತೀ ತೆಳುಪದರದ ಮೇಲೆ ಸಿಂಪಡಣೆ ಯಾಗುತ್ತದೆ. ಅದನ್ನು ನೆಕ್ಕಿ ರುಚಿ ಖಚಿತಪಡಿಸಿಕೊಳ್ಳಬಹುದಂತೆ.
ಇದನ್ನೂ ಓದಿ:ವರದಕ್ಷಿಣೆ ಇರುವ ಮದುವೆಗೆ ಹೋಗಲ್ಲ: ನಿತೀಶ್ ಕುಮಾರ್