Advertisement

ಕ್ವಾರೆ, ಕ್ರಷರ್‌ಗಳಿಗೆ ಟಾಸ್‌ಫೋರ್ಸ್ ಸಮಿತಿ ಭೇಟಿ

06:50 PM Jul 23, 2021 | Team Udayavani |

ಮಂಡ್ಯ: ಮಂಡ್ಯ ತಾಲೂಕು ಹಾಗೂ ಶ್ರೀರಂಗಪಟ್ಟಣವ್ಯಾಪ್ತಿಯ ರಾಗಿಮುದ್ದನಹಳ್ಳಿಯ ಕ್ವಾರೆ ಹಾಗೂಕ್ರಷರ್‌ಗಳಿಗೆ ತಹಶೀಲ್ದಾರ್‌ ಚಂದ್ರಶೇಖರ್‌ ಶಂ.ಗಾಲಿನೇತೃತ್ವದ ಗಣಿ ಹಾಗೂ ಪೊಲೀಸ್‌ ಅಧಿಕಾರಿಗಳ ತಂಡಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ರಾಗಿಮುದ್ದನಹಳ್ಳಿ ಹಾಗೂ ಕೋಡಿಶೆಟ್ಟಿಪುರಗ್ರಾಮಗಳ ಸಮೀಪ ನಡೆಯುತ್ತಿರುವ ಕ್ರಷರ್‌ ಹಾಗೂಕ್ವಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರದೂರು ಹಿನ್ನೆಲೆಯಲ್ಲಿ ಮಂಡ್ಯ ತಾಲೂಕು ವ್ಯಾಪ್ತಿಯರಾಗಿ ಮುದ್ದನಹಳ್ಳಿ ಗ್ರಾಮದ ಸಮೀಪ ನಡೆಯುತ್ತಿರುವ ಕ್ರಷರ್‌ ಹಾಗೂ ಕ್ವಾರಿಗಳಿಗೆ ಭೇಟಿ ನೀಡಿದ ಅವರುಬ್ಲಾಸ್ಟಿಂಗ್‌, ಎಷ್ಟು ಆಳದವರೆಗೆ ಕಲ್ಲು ತೆಗೆಯಲಾಗಿದೆಹಾಗೂ ಕ್ರಷರ್‌ ನಡೆಸುತ್ತಿರುವ ಬಗ್ಗೆ ಮಾಹಿತಿಪಡೆದುಕೊಂಡರು.

ತಹಶೀಲ್ದಾರ್‌ಗೆ ತರಾಟೆ: ಪ್ರಸ್ತುತ ಕಳೆದ ಒಂದುವಾರದಿಂದ ಯಾವುದೇ ಬ್ಲಾಸ್ಟಿಂಗ್‌ ಹಾಗೂ ಕ್ರಷರ್‌ಗಳು ನಿಂತಿವೆ. ಇಲ್ಲಿಯವರೆಗೂ ಬ್ಲಾಸ್ಟಿಂಗ್‌ನಡೆಯುತ್ತಿದೆ. ಗ್ರಾಮಸ್ಥರ ಮನೆಗಳು ಬಿರುಕು ಬಿಟ್ಟಿವೆ.ಬ್ಲಾಸ್ಟಿಂಗ್‌ ಶಬ್ದಕ್ಕೆ ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ.

ದೂಳು, ಶಬ್ದದಿಂದರೋಗಗಳು ಉಂಟಾಗುತ್ತಿದೆ.ಬ್ಲಾಸ್ಟಿಂಗ್‌ ಮಾಡಲು ಅನುಮತಿ ನೀಡಿದ್ದೀರಾಎಂದು ಗ್ರಾಮದ ಮುಖಂಡರೊಬ್ಬರು ತಹಶೀಲ್ದಾರ್‌ಚಂದ್ರಶೇಖರ್‌ಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆಪ್ರತಿಕ್ರಿಯಿಸಿದ ಅವರು, ಗಣಿಇಲಾಖೆ ಅಧಿಕಾರಿಗಳನ್ನು ಕೇಳಿ, ನಾವು ಈಗಾಗಲೇ ತನಿಖೆ ನಡೆಸಲಾಗಿದ್ದು,ವರದಿ ನೀಡಲಾಗುವುದು ಎಂದಾಗ, ತಾಲೂಕಿನತಹಶೀಲ್ದಾರ್‌ ನೀವಾಗಿದ್ದೀರಾ? ಇದರ ಬಗ್ಗೆ ಕ್ರಮವಹಿಸಬೇಕು ಎಂದು ಪ್ರಶ್ನಿಸಿದಾಗ ಮೌನ ವಹಿಸಿದರು ಎಂದು ಕೋಡಿಶೆಟ್ಟಿಪುರ ಗ್ರಾಮದ ತೇಜಸ್‌ಗೌಡಉದಯವಾಣಿಗೆ ತಿಳಿಸಿದರು. ಭೇಟಿ ಸಂದರ್ಭದಲ್ಲಿಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಶಿಲ್ಪಾಶ್ರೀ ಸೇರಿದಂತೆ ಗಣಿ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next