Advertisement

ನಕಲಿ ನಂದಿನಿ ತುಪ್ಪ ತಡೆಗೆ ಟಾಸ್ಕ್ ಫೋರ್ಸ್

12:52 PM Jan 04, 2022 | Team Udayavani |

ಮೈಸೂರು: ನಕಲಿ ನಂದಿನಿ ತುಪ್ಪ ತಯಾರಿಕೆ ತಡೆಗೆ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. 07 ಸದಸ್ಯರ ಈತಂಡಕ್ಕೆ ಪೂರ್ಣ ಅಧಿಕಾರ ನೀಡಲಾಗಿದೆ. ಎಲ್ಲ ರೀತಿಯಲ್ಲೂ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ಹೊಸಹುಂಡಿಯಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣ ಸಂಬಂಧ ಮೈಸೂರು ಹಾಲು ಉತ್ಪಾದಕರ ಮಹಾಮಂಡಳಿ (ಮೈಮುಲ್‌) ಆಡಳಿತ ಮಂಡಲಿ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದ ಅವರು, ಕೆಎಂಎಫ್ನಲ್ಲಿ ಲಕ್ಷಾಂತರ ರೈತರಿದ್ದಾರೆ. 5 ಕೋಟಿ ಗ್ರಾಹಕರಿದ್ದಾರೆ. ಸಂಬಳ ಪಡೆದು ಸಂಸ್ಥೆಗೆ ಮೋಸ ಮಾಡಿದರೆ ಸಹಿಸುವುದಿಲ್ಲ. ಪೊಲೀಸರಿಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಎಂದರು.

ಟಾಸ್ಕ್ಪೋರ್ಸ್‌ 14 ಹಾಲು ಒಕ್ಕೂಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈಗಾಗಲೇ ಜಾಗೃತ ದಳದ ಅಧಿಕಾರಿಗಳು ಹೊಸಕೋಟೆಯಲ್ಲಿ 1728 ಲೀಟರ್‌ ತುಪ್ಪ, ನೆಲಮಂಗಲದ ಮಾಕಳಿ ಪ್ರದೇಶದಲ್ಲಿ 6990 ಲೀಟರ್‌ ತುಪ್ಪ, ಜಯನಗರದ ಡಿಪಾರ್ಟ್‌ ಮೆಂಟಲ್‌ ಸ್ಟೋರ್ನಲ್ಲಿ 4 ಲೀಟರ್‌ ತುಪ್ಪ ಪತ್ತೆ ಮಾಡಿದ್ದಾರೆ ಎಂದು ತಿಳಿಸಿದರು.

ಕಲಬೆರಕೆ: ಕೆಎಂಎಫ್ ಏಜೆಂಟರ್‌ ಸಹಕಾರದಿಂದ ನಂದಿನಿ ನಕಲಿ ತುಪ್ಪ ತಯಾರಿಸಿರಬಹುದು. ನಂದಿನಿಪ್ಯಾಕೆಟ್‌, ಶೇ. 30ರಿಂದ 40 ಕಲಬೆರಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೇ ಕಡಿಮೆ ದರದಲ್ಲಿನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ತಿರುಪತಿ ಮತ್ತು ವಿದೇಶಗಳಿಗೆ ನಂದಿನಿ ತುಪ್ಪ ಕಳುಹಿಸಲಾಗುತ್ತದೆ. ಸಾರ್ವಜನಿಕರಿಗೆ ತಪ್ಪು ಸಂದೇಶಹೋಗಬಾರದೆಂದು ನಕಲಿ ತುಪ್ಪ ಪ್ರಕರಣಗಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವ್ಯತ್ಯಾಸ ಕಂಡು ಬಂದರೆ ಬಂಧಿಸುವಂತೆ ಆದೇಶಿಸ ಲಾಗಿದೆ ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಂದಿನಿ ಉತ್ಪನ್ನ ಮಾತ್ರವಲ್ಲದೇ ಎಲ್ಲ ಆಹಾರ ಪದಾರ್ಥಗಳನ್ನುಪರಿಶೀಲಿಸುತ್ತಾರೆ. ದೂರು ಬಂದಾಗ ತನಿಖೆ ಮಾಡುತ್ತಾರೆ. ನಕಲಿ ನಂದಿನಿ ತುಪ್ಪ ತಯಾರಿಕೆ ತನಿಖೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಪ್ರಾಥಮಿಕ ಮಾಹಿತಿ ಮಾತ್ರ ನೀಡಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಮುಲ್‌ ಅಧ್ಯಕ್ಷ ಪ್ರಸನ್ನ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್‌, ಮೈಮುಲ್‌ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಕುಮಾರ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ದಂಡಿನ ಸೇರಿದಂತೆ ಇತರರು ಇದ್ದರು.

ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣದ ಆರೋಪಿಗಳನ್ನು ರಕ್ಷಿಸುವಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗುತ್ತದೆ. ಈ ಪ್ರಕರಣದಲ್ಲಿಅಧಿಕಾರಿಗಳು ಶಾಮೀಲಾಗಿದ್ದರೆ ಕೆಲಸದಿಂದ ತೆಗೆದು, ಆಸ್ತಿ ಮುಟ್ಟುಗೋಲುಹಾಕಿಕೊಳ್ಳುತ್ತೇವೆ. ಎಸ್‌.ಟಿ.ಸೋಮಶೇಖರ್‌, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next