Advertisement

Tarikere; ಬಾಲಕಿಯ ಜತೆ ಅಸಭ್ಯ ವರ್ತನೆ ತೋರಿದ ಚಿನ್ನದಂಗಡಿಯವಗೆ ಥಳಿತ

10:50 AM Oct 17, 2023 | Team Udayavani |

ಚಿಕ್ಕಮಗಳೂರು: ಚಿನ್ನದಂಗಡಿಗೆ ಬರುವ ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಚಿನ್ನದಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

Advertisement

ತರೀಕೆರೆ ಪಟ್ಟಣದ ಎಂ.ಜಿ.ರಸ್ತೆ ಚಿನ್ನದಂಗಡಿಯ ಮಾಲೀಕ ಅಮೀರ್ ಥಳಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಅಂಗಡಿಗೆ ಬಂದಿದ್ದ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:Allu Arjun: ವಿಶೇಷ ಅಭಿಮಾನಿಯೊಂದಿಗೆ ಆತ್ಮೀಯ ಕ್ಷಣವನ್ನು ಕಳೆದ ʼಬನ್ನಿʼ; ಫೋಟೋ ವೈರಲ್

ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿಕರು ಅಂಗಡಿ ಮಾಲೀಕ ಅಮೀರನನ್ನು ಥಳಿಸಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next