Advertisement
ಜನವರಿ 2019ರ ಆರಂಭದಲ್ಲಿ ಅದೊಂದು ದಿನ ಕೃಷಿಕ ಜಗದೀಶ್ ಪಾರಿಖ್ ಅವರಿಗೆ ರಾಷ್ಟ್ರಪತಿ ಭವನದಿಂದ ಫೋನ್ ಕರೆ ಬಂತು: ಅವರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಸಂಭ್ರಮದ ಸುದ್ದಿ ತಿಳಿಸಿತು. ರಾಜಸ್ಥಾನದ ಸಿರ್ಕ ಜಿಲ್ಲೆಯ ಅಜಿತ್‌ಘರ್ ಗ್ರಾಮದ 72 ವರ್ಷ ವಯಸ್ಸಿನ ಅಪ್ಪಟ ಸಾವಯವ ಕೃಷಿಕ ಜಗದೀಶ್ ಪಾರಿಖ್ ಕಳೆದ ಐದು ದಶಕಗಳಿಂದ ಭಾರೀ ಗಾತ್ರದ ಹಾಗೂ ಪೋಷಕಾಂಶಭರಿತ ಸಾವಯವ ತರಕಾರಿ ಬೆಳೆಯುವ ರೈತನೆಂದು ಸುದ್ದಿ ಮಾಡಿದ್ದಾರೆ.
Related Articles
Advertisement
ಸೆಗಣಿ- ಸಿಪ್ಪೆ- ಎಲೆ: ಸಾವಯವ ಗೊಬ್ಬರ ತಯಾರಿ ವಿಧಾನದ ಬಗ್ಗೆ ಅವರು ನೀಡುವ ಮಾಹಿತಿ ಹೀಗಿದೆ- “ನನ್ನ ಜಮೀನಿನಲ್ಲಿ 10 x 6 x 3 ಅಡಿ ಅಳತೆಯ ಹೊಂಡ ಮಾಡಿದ್ದೇನೆ. ಇದರಲ್ಲಿ 10 ಸೆಂ.ಮೀ. ದಪ್ಪಕ್ಕೆ ಪ್ರಾಣಿಗಳ ಸೆಗಣಿ ಸಂಗ್ರಹಿಸುತ್ತೇನೆ. ಅದರ ಮೇಲೆ ಸೌತೆಕಾಯಿ ಸಿಪ್ಪೆ, ಬೇವಿನ ಎಲೆಗಳು ಮತ್ತು ಇತರ ಎಲೆಗಳನ್ನು ಹರಡುತ್ತೇನೆ. ಇದನ್ನು ಹಾಗೆಯೇ ಬಿಟ್ಟರೆ 15 ದಿನಗಳಲ್ಲಿ ಗೊಬ್ಬರ ತಯಾರು’. ಈ ಗೊಬ್ಬರ, ಸಸಿಗಳಿಗೆ ಉತ್ತಮ ಪೋಷಕ. ಮಾತ್ರವಲ್ಲ, ಇದಕ್ಕೆ ಯಾವುದೇ ವೆಚ್ಚವಿಲ್ಲ. ಸಸಿಗಳಿಗೆ ರೋಗ ಬಂದಾಗ ಹತೋಟಿಗಾಗಿ ರಾಸಾಯನಿಕಗಳನ್ನು ಪ್ರಯೋಗಿಸುವುದು ಬಹಳ ದುಬಾರಿ ಎನ್ನುವುದು ಪಾರಿಖ್‌ರ ಅಭಿಪ್ರಾಯ.
ಮಾರುಕಟ್ಟೆ ವಿಸ್ತರಣಾ ತಂತ್ರಗಳು: ಜಗದೀಶ್ ಪಾರಿಖ್ ಬೆಳೆಸಿದ ತರಕಾರಿಗಳು ಸುಲಭವಾಗಿ ಮಾರಾಟವಾಗುತ್ತಿಲ್ಲ. ಈ ಸಮಸ್ಯೆಗೆ ಅವರು ಕಂಡುಕೊಂಡ ಪರಿಹಾರ: ಕಡಿಮೆ ಬೆಲೆಗೆ ತರಕಾರಿಗಳನ್ನು ಮಾರುವುದು. ಉದಾಹರಣೆಗೆ, ಎಲೆಕೋಸಿನ ಮಾರುಕಟ್ಟೆ ಬೆಲೆ ಕಿಲೋಗೆ 40ರೂ. ಇದ್ದಾಗ, ಪಾರಿಖ್ ಕಿಲೋಗೆ 15ರೂ. ಬೆಲೆಗೆ ಮಾರುತ್ತಾರೆ. ಹಾಗಿದ್ದೂ ತರಕಾರಿ ಮಾರಾಟದಿಂದ ಪಾರಿಖ್ ಗಳಿಸುವ ಆದಾಯ ವರ್ಷಕ್ಕೆ 13 ಲಕ್ಷ ರೂ. ತಾವು ಬೆಳೆಸುವ ತರಕಾರಿಗಳ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳಲು ಪಾರಿಖರು ರೈತರಿಗೆ ತರಬೇತಿ ಮತ್ತು ಉಚಿತ ಬೀಜ ವಿತರಣೆಯಂಥ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ.
ಸಾವಯವ ಕೃಷಿ ರಾಕೆಟ್ ವಿಜ್ಞಾನವೇನಲ್ಲ. ಸ್ವಲ್ಪ ಹೆಚ್ಚು ಶ್ರಮ, ಗಮನ ಮತ್ತು ಸಹನೆ ಇದ್ದರೆ ಯಾರು ಬೇಕಾದರೂ ಯಶಸ್ಸು ಪಡೆಯಬಹುದು.-ಜಗದೀಶ್ ಪಾರಿಖ್ * ಅಡ್ಡೂರು ಕೃಷ್ಣ ರಾವ್