ಭೂಪಾಲ್: ಮಧ್ಯಪ್ರದೇಶದಲ್ಲಿ ಶತಾಯಗತಾಯ ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ 60 ಲಕ್ಷ ನಕಲಿ ವೋಟರ್ ಐಡಿಗಳು ಇರುವ ಬಗ್ಗೆ ಆರೋಪಿಸಿ ಕೆಲ ದಾಖಲೆಗಳನ್ನು ನೀಡಿದೆ.
ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಕ್ರಮಗಳ ಬಗ್ಗೆ ಸಾಕ್ಷಿಯನ್ನೂ ಒದಗಿಸಿರುವುದಾಗಿ ಕಾಂಗ್ರೆಸ್ ಹೇಳಿದೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಈ ಬಗ್ಗೆ ಹೇಳಿಕೆ ನೀಡಿದ್ದು, ‘ಇದು ಆಡಳಿತಾತ್ಮಕ ನಿರ್ಲಕ್ಷ್ಯವಲ್ಲ ಆದರೆ ಆಡಳಿತಾತ್ಮಕ ದುರ್ಬಳಕೆ’ ಎಂದು ಬಿಜೆಪಿ ವಿರುದ್ದ ಆರೋಪ ಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಮಾತನಾಡಿ ‘ಈ ಅಕ್ರಮಗಳನ್ನು ಬಿಜೆಪಿ ಮಾಡಿದ್ದು, 10 ವರ್ಷ ಗಳಲ್ಲಿ ಜನಸಂಖ್ಯೆ 24 % ಹೆಚ್ಚಳವಾಗಿದ್ದು, ಮತದಾರರ ಸಂಖ್ಯೆ ಮಾತ್ರ 40 % ಹೆಚ್ಚಾಗಿದೆ’ ಎಂದಿದ್ದಾರೆ.
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.