ನವದೆಹಲಿ: ದೇಶದ ರೈತರಿಗೆ ನೆರವಾಗುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಸರ್ಕಾರ ರೈತರು, ದುರ್ಬಲ ವರ್ಗದವರ ಕಲ್ಯಾಣಕ್ಕೆ ಬದ್ಧವಾಗಿದೆ. ತ್ರಿವಳಿ ತಲಾಖ್ ಮಸೂದೆ ಶೀಘ್ರವೇ ಮಂಡನೆಯಾಗುವ ವಿಶ್ವಾಸವಿದ್ದು, ಈ ಮೂಲಕ ಮುಸ್ಲಿಂ ಮಹಿಳೆಯರು ಗೌರವಯುತ ಹಾಗೂ ಭಯರಹಿತ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಸೋಮವಾರ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಮಾತನಾಡಿದರು.
ಅಸಮಾನತೆ ತೊಲಗಿಸಲು ಸರ್ಕಾರದಿಂದ ಸರ್ವ ಪ್ರಯತ್ನ ಮಾಡಲಾಗುತ್ತಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಬಾರಿಯ ಗಣರಾಜ್ಯೋತ್ಸವಕ್ಕೆ 10 ಏಷಿಯನ ದೇಶಗಳ ಅತಿಥಿಗಳು ಭಾಗವಹಿಸುವ ಮೂಲಕ ಭಾರತದ ವಸುಧೈವ ಕುಟುಂಬಕಂದ ಧ್ಯೇಯ ಪ್ರಚುರಪಡಿಸಿದಂತಾಗಿದೆ.
2018ನೇ ವರ್ಷ ನವಭಾರತದ ಕನಸನ್ನು ಸಾಕಾರಗೊಳಿಸಲಿದೆ. 2019ರ ವೇಳೆಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ್ ಗುರಿ. ಹಿಂದುಗಳಿ ವರ್ಗದವರ ಶಿಕ್ಷಣಕ್ಕಾಗಿ ಸಮಿತಿ ರಚನೆ. ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಗುರಿ ಹೊಂದಿದೆ ಎಂದರು.
2.5 ಲಕ್ಷ ಗ್ರಾಮ ಪಂಚಾಯ್ತಿಗಳಲ್ಲಿ ಬ್ರಾಡ್ ಬ್ಯಾಂಡ್ ಕಲ್ಪಿಸಲಾಗಿದೆ. ಶೇ.82ರಷ್ಟು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಎಲ್ಲಾ ವರ್ಗದವರ ಸಶಕ್ತೀಕರಣ ಕೇಂದ್ರ ಸರ್ಕಾರದ ಗುರಿ ಎಂದು ತಿಳಿಸಿದರು.