Advertisement
ಮನುಷ್ಯನೊಬ್ಬ ಹರತಾಳಕ್ಕೆ ಮುಂದಾದರೆ ಎಷ್ಟು ದಿನ ಕೂರಬಹುದು? ವಾರ? ತಿಂಗಳು? ಅಲ್ಲಿಗೆ, ಕೂರುವುದರ ಮೂಲಕ ಶುರುವಾಗಿದ್ದ ಅವನ ಹರತಾಳ ಮಲಗುವುದರ ಮೂಲಕ ಕೊನೆಯಾಗುತ್ತದೆಯಷ್ಟೆ! ಇಂದು ಎಲ್ಲೆಲ್ಲೂ ಸ್ಪರ್ಧೆಗಳೇ. ತರಗತಿಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ.. ಹಾಗೆಯೇ ಊಟದ ಸ್ಪರ್ಧೆಗಳಿರುವಂತೆ ಹಸಿವಿನ ಸ್ಪರ್ಧೆಯೂ ಹುಟ್ಟಿಕೊಂಡರೆ ಹೇಗಿರುತ್ತದೆ? ಅದರಲ್ಲೂ, ಮನುಷ್ಯರಿಗೂ ಪ್ರಾಣಿಗಳಿಗೂ ನಡುವೆ ಈ ಸ್ಪರ್ಧೆ ಇಟ್ಟರೆ ಟಿ.ಆರ್ .ಪಿ ಹೆಚ್ಚುವುದು ಖಂಡಿತ. ಪ್ರಾಣಿಗಳಿಂದ ಸೇವೆ ಮಾಡಿಸಿಕೊಳ್ಳುವ ಮನುಷ್ಯ ಆ ವಿಷಯದಲ್ಲಿ ಗೆದ್ದರೂ ಈ ಸ್ಪರ್ಧೆಯಲ್ಲಿ ಮಾತ್ರ ಗೆಲ್ಲಲಾರ. ಏಕೆ ಅಂತೀರಾ? ಹಾಗೊಂದು ವೇಳೆ ಇಂಥದ್ದೊಂದು ಸ್ಪರ್ಧೆ ನಿಜಕ್ಕೂ ಏರ್ಪಟ್ಟರೆ ಪ್ರಾಣಿಗಳು ತಮ್ಮ ಕಡೆಯಿಂದ ಅಖಾಡಕ್ಕಿಳಿಸುವುದು ಟರಾಂಟುಲ! ಅಂದರೆ ಜೇಡವನ್ನು!
ವಿಷಪೂರಿತವಲ್ಲ. ಹೀಗಾಗಿ ಅನಗತ್ಯ ಭಯ ಬೇಡ. ಅದೇನೇ ಇರಲಿ, ಈಗ ನೀವೇ ಯೋಚಿಸಿ. ಟರಾಂಟುಲ ವಿಷಪೂರಿತವೋ? ಇಲ್ಲಾ ಅದನ್ನೂ ಹುರಿದು ಮುಕ್ಕುವ ಮನುಷ್ಯ ವಿಷಪೂರಿತನೋ?
Related Articles
ಗೃಹೋಪಯೋಗಿ ವಸ್ತುಗಳು ತಮ್ಮ ಹೊಳಪು ಕಳೆದುಕೊಳ್ಳದಂತೆ ಕಾಲ ಕಾಲಕ್ಕೆ ತೊಳೆಯುವುದು, ಪಾಲಿಷ್ ಮಾಡಿಸುವುದು ಇತ್ಯಾದಿಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಇಲ್ಲೊಂದು ಪ್ರಾಣಿ ಇದೆ. ಇದರ ವೈಶಿಷ್ಟéವೇನೆಂದರೆ ಕತ್ತಲಿನ ಸ್ಥಳದಲ್ಲಿ ಇವುಗಳನ್ನು ಇರಿಸಿದರೆ ಕೆಲ ಸಮಯದ ನಂತರ ತಮ್ಮ ಮೈ ಹೊಳಪನ್ನು ಕಳೆದುಕೊಳ್ಳುತ್ತವೆ. ಹೊಳಪು ಕಳೆದುಕೊಂಡರೆ ಯಾರುಗೇನು ನಷ್ಟ ಎನ್ನದಿರಿ. ಏಕೆಂದರೆ ಈ ಜೀವಿಗೆ ಮುಖ್ಯವಾಗಿ ಬೇಕಾಗಿರುವುದು ಇದೇ ಮೈಯ ಹೊಳಪು. ಈ ಜೀವಿಯೇ ನಾವು ನೀವು ತಂತಮ್ಮ ಮನೆಯ ಅಲಂಕಾರ ಹೆಚ್ಚಿಸಲು ಗಾಜಿನ ಬೋನಿನಲ್ಲಿ ಕೂಡಿ ಹಾಕುವ ಗೋಲ್ಡ್ ಫಿಶ್. ಇದು ಹೊಳಪು ಕಳೆದುಕೊಂಡರೆ ಪಾಲಿಶ್ ಮಾಡಲಾಗುವುದಿಲ್ಲ.
Advertisement
ಗೋಲ್ಡ್ ಫಿಶ್ ತನ್ನ ಚಿನ್ನದ ಹೊಳಪನ್ನು ಕಳೆದುಕೊಳ್ಳಬಾರದೆಂದರೆ ಬೆಳಕು ಇರುವ ಸ್ಥಳದಲ್ಲಿಯೇ ಅದನ್ನು ಇರಿಸುವುಸು ಸೂಕ್ತ. ಇಲ್ಲವಾದರೆ ಚಿನ್ನದ ಬಣ್ಣ ಕಳೆದುಕೊಂಡ ನಂತರ ಸಾಮಾನ್ಯ ಮೀನುಗಳಂತೆ ಕಾಣುವ ಗೋಲ್ಡ್ ಫಿಷ್ ಅನ್ನು ಯಾರು ತಾನೇ ಇಟ್ಟುಕೊಂಡಾರು? ಚಿನ್ನದ ಮೆರುಗು ಮಾಯವಾದಾಕ್ಷಣ ಗೋಲ್ಡ್ ಫಿಷ್, “ರೋಲ್ಡ್ ಗೋಲ್ಡ್ ಫಿಷ್’ ಆಗಿಬಿಡುವುದಿಲ್ಲ. ಎಲ್ಲವೂ ನಮ್ಮ ಭ್ರಮೆಯಷ್ಟೇ. ಆದರೆ, ವರ್ಣಭೇದ ಮಾಡುವ ಮನುಷ್ಯನಿಂದ ಬಣ್ಣ ಕಳೆದುಕೊಂಡ ಗೋಲ್ಡ್‌ಫಿಷ್‌ಗೆ ಆಪತ್ತು ಒದಗಬಾರದಲ್ಲ?
ನಮ್ಮೊಂದಿಗೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಯಾವುದು ಗೊತ್ತೇ?ನಗುವನ್ನು ಸಾಂಕ್ರಾಮಿಕ ಅನ್ನುತ್ತಾರೆ ಅದು ಅತಿಯಾದರೆ ಮಾತ್ರ ಸಾಂಕ್ರಾಮಿಕ ಖಾಯಿಲೆ ಎಂದು ಅಪವಾದ ಹೊರಿಸಬಹುದು. ಹಾಗಾಗಿ
ಅಲ್ಲಿಯ ತನಕ ಸುಮ್ಮನಿರಿ. ನಗುವಿನಷ್ಟೇ ಸಾಂಕ್ರಾಮಿಕವಾದ, ಆದರೆ ಯಾರಿಗೂ ಬೇಡದ ಮತ್ತು ಬೇಡವೆಂದರೂ ಕಾಡುವ ಮತ್ತೂಂದು ವಿಚಾರವಿದೆ. ಇದು ನೆಗಡಿಗೆ ಸಂಬಂಧಿಸಿದ ಸಮಾಚಾರ. ನೆಗಡಿಯೂ ಸಾಂಕ್ರಾಮಿಕವಲ್ಲವೆ? ನೆಗಡಿಯಾಯ್ತು ಅಂದರೆ, ಆದವರಿಗಿಂತಲೂ ಹೆಚ್ಚಿನ ಕಾಳಜಿ ಆಗದವರಿಗೆ, ತಮಗೆ ಬರದಿರಲಪ್ಪಾ ಎಂದು. ನಿಮಗೆ ಗೊತ್ತಿದೆಯೋ, ಇಲ್ಲವೋ, ಈ ನೆಗಡಿ ನಿಮ್ಮಿಂದ ಕೇವಲ ಮನುಷ್ಯರಿಗೆ ಮಾತ್ರ ಹರಡುವುದಿಲ್ಲ, ಪ್ರಾಣಿಗಳಿಗೂ ಹರಡುತ್ತದೆ. ನಿಮ್ಮ ಜೊತೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಗೊರಿಲ್ಲ. ಒಂದೇ ಪ್ರಭೇದಕ್ಕೆ ಸೇರಿದ್ದ ನಾವುಗಳು ಅಂದರೆ ಮನುಷ್ಯ ಮತ್ತು ಗೊರಿಲ್ಲ ವಿಕಾಸಪಥದಲ್ಲಿ ಬೇರೆಯ ಹಾದಿ ಹಿಡಿದರೂ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ಆದ್ದರಿಂದ ಮುಂದಿನ ಬಾರಿ ನೆಗಡಿಯಾದಾಗ ಪ್ರೀತಿಪಾತ್ರರಿಂದ ದೂರವನ್ನು ಕಾಪಾಡಿಕೊಂಡಂತೆಯೇ ಗೊರಿಲ್ಲಾಗಳಿಂದಲೂ ದೂರವಿರಿ. ಒಂದಕ್ಕಿಂತ ಹೆಚ್ಚು ಕಂಪ್ಯೂಟರ್ ಉಪಕರಣಗಳಿಗೆ ಹೊಂದುವ ಸಾಫ್ಟ್ವೇರನ್ನು ಕಂಪ್ಯಾಟಿಬಲ್ ಎನ್ನುತ್ತಾರೆ. ಅದರಂತೆಯೇ ಮನುಷ್ಯ ಮತ್ತು ಗೊರಿಲ್ಲಾಗೂ ಹರಡುವುದರಿಂದ ನೆಗಡಿಯನ್ನು ಕಂಪ್ಯಾಟಿಬಲ್ ಎನ್ನಬಹುದು. ಏನಂತೀರಾ! *ಹರ್ಷ