Advertisement
ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…– ಡಾ| ಎನ್. ಗೋಪಾಲಕೃಷ್ಣ
Related Articles
Advertisement
‘ನಾನಾಗಲಿ ನೀನಾಗಲಿ ಇಲ್ಲಿ ಯಾವಾಗಲೂ ಇದ್ದವರೆ, ಈ ರಾಜರಾದರೂ ಅಷ್ಟೇ. ಮುಂದೆಯೂ ಎಂದೆಂದಿಗೂ ನಾವೆಲ್ಲ ಇಲ್ಲದೆ ಇಲ್ಲ. ನಾಶವಾಗದಂಥ ಈ ಆತ್ಮವನ್ನು ಯಾರಿಂದಲೂ ನಾಶಮಾಡಲಾಗದು ಅರ್ಜುನ.’
‘ಒಬ್ಬನು ಇವನನ್ನು (ಆತ್ಮನನ್ನು) ಆಶ್ಚರ್ಯವನ್ನು ಕಂಡಂತೆ ನೋಡುತ್ತಾನೆ. ಇನ್ನೊಬ್ಬನನ್ನು ಆಶ್ಚರ್ಯವನ್ನು ಕುರಿತು ಹೇಳುವಂತೆ ಹೇಳುತ್ತಾನೆ. ಮತ್ತೊಬ್ಬನು ಆಶ್ಚರ್ಯವನ್ನು ಕೇಳಿಸಿಕೊಳ್ಳುವಂತೆ ಕೇಳುತ್ತಾನೆ. ಆದರೂ ಇವನ ವಿಷಯವನ್ನೂ ಕೇಳಿದರೂ ಅರ್ತಮಾಡಿಕೊಳ್ಳುವುದೇ ಇಲ್ಲ’ ಎಂಬುದೂ ಶ್ರೀಕೃಷ್ಣ ಉವಾಚವೇ ಆಗಿದೆ.
ಗೀತೆಯಲ್ಲಿ ಆತ್ಮನ ಬಗೆಗಿನ ವರ್ಣನೆ ಹೀಗಿದೆ- ‘ಈ ವಿಶ್ವವವನ್ನು ಸೂರ್ಯದೇವನು ಯಾವ ರೀತಿ ಬೆಳಗುತ್ತಿರುವನೋ, ಅದೇ ರೀತಿ ಶರೀರದೊಳಗಿರುವ ಆತ್ಮನು ಶರೀರವನ್ನು ಪ್ರಜ್ಞಾಸ್ಥಿತಿಯಿಂದ ಬೆಳಗುತ್ತಿರುತ್ತಾನೆ.‘
ಮನುಷ್ಯ ತಾನು ಸಾಯುವ ಕಾಲದಲ್ಲಿ ಎಂಥ ಸ್ಥಿತಿಯನ್ನು ನೆನಪಿಸಿಕೊಳ್ಳುವನೋ ಅಂಥದೇ ಸ್ಥಿತಿಯಲ್ಲಿ ತನ್ನ ಮುಂದಿನ ಜನ್ಮದಲ್ಲಿ ಜನಿಸುತ್ತಾನೆ ಎಂದೂ ಭಗವದ್ಗೀತೆ ಹೇಳುತ್ತದೆ. ಭರತ ಮಹಾರಾಜನ ಕಥೆಯಿಂದ ಈ ಹೇಳಿಕೆಯನ್ನು ಪುಷ್ಟೀಕರಿಸುವವರಿದ್ದಾರೆ.
ವೇದೋಪನಿಷತ್ತುಗಳ ಪ್ರಕಾರ, ಆತ್ಮವು ಮನುಷ್ಯ ರೂಪಕ್ಕೆ ಬಂದು ಸೇರುವುದಕ್ಕೆ ಮಂಚೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿರುತ್ತದೆ.
ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’ ಚಕ್ರವ್ಯೂಹ
ಮಹಾಭಾರತದಲ್ಲಿ ಅರ್ಜುನನ ಮಗ ಅಭಿಮನ್ಯು ತನ್ನ ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ, ಚಕ್ರವ್ಯೂಹದೊಳಕ್ಕೆ ಪ್ರವೇಶಿಸಿ ಯುದ್ಧ ಮಾಡುವ ಕಲೆ ಕುರಿತ ವಿವರಣೆಯನ್ನು ಕೃಷ್ಣನಿಂದ ಕೇಳಿಸಿಕೊಂಡಿರುತ್ತಾನೆ. ಚಕ್ರವ್ಯೂಹ ಪ್ರವೇಶ ಹೇಗೆ ಎಂಬಲ್ಲಿಯವರೆಗೆ ಮಾತ್ರ ಕೇಳಿಸಿಕೊಂಡ ಸುಭದ್ರೆ ವ್ಯೂಹದಿಂದ ಹೊರಬರುವ ಕಲೆಯನ್ನು ಶ್ರೀಕೃಷ್ಣ ವಿವರಿಸುವಷ್ಟರಲ್ಲಿ ನಿದ್ರಿಸಿಬಿಡುತ್ತಾಳೆ. ಇದರಿಂದಾಗಿ ಮುಂದೆ ಯುದ್ಧರಂಗದಲ್ಲಿ ಅಭಿಮನ್ಯು ಚಕ್ರವ್ಯೂಹದಿಂದ ಹೊರಬರಲಾಗದೆ ಪ್ರಾಣ ತೆರುತ್ತಾನೆ. ಅಂದ ಮೇಲೆ ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಅದರ ನೆನೆಪಿನ ಕೋಶ ಮಾಹಿತಿ ಸಂಗ್ರಹ ಮಾಡಿಕೊಳ್ಳುತ್ತದೆ. ಹಿಂದಿನ ಜನ್ಮದ ನೆನೆಪುಗಳ ಜೊತೆಗೇ ಈ ಜನ್ಮದ ನೆನೆಪು, ಮಾಹಿತಿ, ವಿದ್ಯೆ, ಜ್ಞಾನ ಎಲ್ಲ ಸೇರುತ್ತಾ ಹೋಗುತ್ತವೆ. ಎಲ್ಲೋ ಕೆಲವರು ಮಾತ್ರ ಹಿಂದಿನ ಜನ್ಮದ ನೆನಪುಗಳನ್ನು ಹೊರತೆಗೆಯಬಲ್ಲರು. ಬಹಳ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಚಕ್ರವ್ಯೂಹದ ಸಂದರ್ಭವನ್ನು ದಾರ್ಶನಿಕರು ಈ ರೀತಿಯಾಗಿಯೂ ವ್ಯಾಖ್ಯಾನಿಸುತ್ತಾರೆ. ಈ ವಿಶ್ವವೇ ಒಂದು ಚಕ್ರವ್ಯೂಹ. ಬಹಳ ಜನರಿಗೆ ಚಕ್ರವ್ಯೂಹದೊಳಗೆ ಹೋಗುವುದು ತಿಳಿದಿದ್ದರೂ ಅದರಿಂದ ಹೊರಗೆ ಬದಲು ಅಸಾಧ್ಯವಾಗುತ್ತದೆ. ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ! ಶ್ರೀ ರಾಮಕೃಷ್ಣರು ತಿಳಿಸುವಂತೆ ವಿಶ್ವವೆಂಬ ನದಿಯ ತುಂಬ ಮೊಸಳೆಗಳಿರುತ್ತವೆ. ಅವುಗಳನ್ನು ದಾಟಿಕೊಂಡೇ ನಾವು ಹೋಗಬೇಕು. ಜೀವನ ದುಷ್ಟ ಶಕ್ತಿಗಳಾದ ಅಹಂ, ಕೋಪ, ಅಸೂಯೆಗಳಂಥ ಅನೇಕ ದುಷ್ಟಶಕ್ತಿಗಳಿಂದ ತುಂಬಿರುತ್ತದೆ. ಹೀಗಾಗಿ ಪ್ರತಿ ಹೆಜ್ಜೆಯಲ್ಲೂ ಆಮಿಷಗಳೂ ಇರುತ್ತವೆ. ಜಾಗರೂಕತೆಯಿಂದ ಇರಬೇಕಾಗುತ್ತದೆ. (ಮುಂದುವರಿಯುತ್ತದೆ…)