Advertisement

ಅರ್ಥಿಕ ಅಭಿವೃದ್ದಿಯತ್ತ ಟಿಎಪಿಸಿಎಂಎಸ್‌

09:39 PM Jun 29, 2019 | Team Udayavani |

ಬೇಲೂರು: ಆರ್ಥಿಕವಾಗಿ ಹಿಂದುಳಿದಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯನ್ನು ಲಾಭದಾಯಕವಾಗಿ ಮುನ್ನಡೆಸಲು ಆಡಳಳಿತ ಮಂಡಳಿ ಶ್ರಮಿಸುತ್ತಿರುವುದು ಶ್ವಾಘನೀಯ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು.

Advertisement

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ತಾಲೂಕಿನ ರೈತರಿಗೆ ಸಹಕಾರಿಯಾಗಿ ಕೆಲಸ ಮಾಡುತಿದ್ದು,

ಮುಂದಿನ ದಿನಗಳಲ್ಲಿ ಈ ಸಹಕಾರ ಸಂಘವು ಇನ್ನೂ ಹೆಚ್ಚು ಆರ್ಥಿಕವಾಗಿ ಸದೃಢವಾಗಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಸಚಿವ ರೊಂದಿಗೆ ಮಾತನಾಡಿ ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಒತ್ತುವರಿ ತೆರವು: ಹಾಗೂ ಈ ಸಹಕಾರ ಸಂಘಕ್ಕೆ ಸೇರಿದ ನಿವೇಶನವನ್ನು ಕೆಲವರು ಒತ್ತುವರಿ ಮಾಡಿರುವುದನ್ನು ಬಿಡಿಸಿ, ರೈತರಿಗೆ ಅನುಕೂಲ ವಾಗುವಂತೆ ಕೃಷಿ ಉತ್ಪನ್ನ ಮಾರುಕಟ್ಟೆಯವರೊಂದಿಗೆ ಚರ್ಚಿಸಿ ಸಂಘದ ನಿವೇಶನದಲ್ಲಿ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿರಿಯರ ಸಹಕಾರ ಸ್ಮರಣೆ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಎಂ.ಎ.ನಾಗರಾಜ್‌, ಮಾತನಾಡಿ ಆರ್ಥಿಕವಾಗಿ ಸಾಲದ ಸುಳಿಯಲ್ಲಿ ಸಲುಕಿ ನಷ್ಟದಲ್ಲಿದ್ದ ಸಂಘವನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಸಾಕಷ್ಟು ಹಿರಿಯರ ಸಹಕಾರವಿದೆ. ಸಂಘದಲ್ಲಿದ್ದ ಸಾಲವನ್ನು ತೀರಿಸಿ ಇಂದು ಸಂಘವು ಆರ್ಥಿಕವಾಗಿ ಮುಂದೆ ಸಾಗುತ್ತಿದೆ. ಅಲ್ಲದೇ ಸಂಘದಲ್ಲಿ ಉತ್ತಮ ಗೊಬ್ಬರ ವಹಿವಾಟು ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

Advertisement

ಶಾಸಕರ ಸಹಕಾರ ಅಗತ್ಯ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಷ್ಟದಲ್ಲಿದ್ದ ಸಹಕಾರ ಸಂಘವನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಕಳೆದ ಎರಡು ಅವಧಿಯ ನಿರ್ದೇಶಕರ ಪಾತ್ರ ಮಹತ್ತರವಾಗಿದೆ ಸಹಕಾರ ಸಂಘದಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಸಭೆ ನಡೆಸಲು ಸ್ಥಳದ ಕೊರತೆ ಕಾಡುತಿತ್ತು.

ಇದನ್ನು ಮನಗಂಡು ಎಲ್ಲ ಸದಸ್ಯರ ಸಹಕಾರದೊಂದಿಗೆ ನೂತನ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಅಲ್ಲದೇ ಸಂಘಕ್ಕೆ ಸೇರಿದ ನಿವೇಶನದಲ್ಲಿ ಸಹಕಾರಿ ಬ್ಯಾಂಕ್‌ನವರು ನಿವೇಶನ ಕೇಳಿದ್ದರು. ಆದರೆ ನಾವೇ ಕಟ್ಟಡ ಕಟ್ಟಿ ಕೊಡುತ್ತೇವೆ ಬಾಡಿಗೆ ಕೊಡಿ ಎಂದಿದ್ದೇವೆ. ಹಾಗೂ ನಮ್ಮ ಶಾಸಕರಾದ ಲಿಂಗೇಶ್‌ ಅವರು ನಮ್ಮ ಸಂಘದ ಬೆಳವಣಿಗೆಗೆ ಹೆಚ್ಚನ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ರಂಗೇಗೌಡ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಲ್‌.ಲಕ್ಷ್ಮಣ್‌, ನಿರ್ದೇಶಕರಾದ ಬಿ.ಡಿ. ಚಂದ್ರೇಗೌಡ, ಮಂಜುನಾಥ್‌, ಎಸ್‌,ನಾಗೇಶ್‌, ಕುಮಾರಸ್ವಾಮಿ, ಅನಿತಾ, ನಟರಾಜ್‌, ಭಾರತೀಗೌಡ, ನಾಗೇಶ್‌, ಸವೀನ್‌, ಸಹಕಾರ ಸಂಘಗಳ ನಿಬಂಧಕ ಲಕ್ಷ್ಮೀನಾರಾಯಣ್‌, ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್‌, ಕಾರ್ಯದರ್ಶಿ ದೀಪು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next