Advertisement

ಸ್ವಚ್ಛತೆ ಅರಿವು ಮೂಡಿಸುವ ಕಾರ್ಯ ಆಗಲಿ

03:42 PM Mar 25, 2019 | Team Udayavani |
ಚಳ್ಳಕೆರೆ: ಗ್ರಾಮೀಣ ಭಾಗಗಳಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಹೆಚ್ಚೆಚ್ಚು ನಡೆಯಬೇಕು. ಸ್ವತ್ಛತೆ ಇದ್ದಲ್ಲಿ ಮಾತ್ರ ಯಾವುದೇ ವ್ಯಕ್ತಿ ಅನಾರೋಗ್ಯ ಪೀಡಿತನಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸ್ವತ್ಛತಾ ಅಂದೋಲನ ಯಶಸ್ವಿಯಾಗಲು ಗ್ರಾಮೀಣ ಪ್ರದೇಶಗಳಲ್ಲಿ ಸ್ವತ್ಛತೆಗೆ ಒತ್ತು ನೀಡಬೇಕು ಎಂದು ಮೀರಾಸಾಬಿಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ಡಿ.ಟಿ. ಹೇಮಣ್ಣ ರೆಡ್ಡಿ ಕರೆ ನೀಡಿದರು.
ತಾಲೂಕಿನ ಮೀರಸಾಬಿಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಂಗವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿರುವ ನಗರದ ಬಾಪೂಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್‌ ಘಟಕದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ವಾರ ಕಾಲ ನಮ್ಮ ಗ್ರಾಮದಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಹಲವಾರು ವಿಷಯಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಯಾವ ವಿದ್ಯಾರ್ಥಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾನೆಯೋ ಆತ ಉತ್ತಮವಾಗಿ ಬದುಕು ರೂಪಿಸಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾನೆ ಎಂದರು.
ಕನ್ನಡ ಪ್ರಾಧ್ಯಾಪಕ ಡಾ| ಜಿ.ವಿ. ರಾಜಣ್ಣ ಮಾತನಾಡಿ, ಗ್ರಾಮೀಣ ಭಾಗಗಳ ಸ್ವತ್ಛತೆ ಬಗ್ಗೆ ಪ್ರಾರಂಭದ ಹಂತದಲ್ಲಿ ಜಾಗೃತಿ ಮೂಡಿಸಬೇಕೆಂಬ ಮೂಲ ಉದ್ದೇಶವನ್ನು ಮಹಾತ್ಮ ಗಾಂಧೀಜಿಯವರು ಹೊಂದಿದ್ದರು. ಗಾಂಧೀಜಿಯವರ ಕನಸನ್ನು ನನಸು ಮಾಡಲು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿವೆ.
ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಿಂದ ಕಳೆದ ಹತ್ತಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸಿ ಸ್ವತ್ಛತೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಕೆ. ತಿಪ್ಪೇಸ್ವಾಮಿ, ಎ. ತಿಪ್ಪೇಸ್ವಾಮಿ, ಪ್ರೊ| ಡಿ. ಕರಿಯಣ್ಣ, ಪ್ರೊ| ಆರ್‌.ಎಸ್‌. ಉಮೇಶ್‌, ಜಿ.ಎಂ. ಮುರಳಿ, ಕೆ.ಎಂ. ಮಹಂತೇಶ್‌, ವಿ.ಆರ್‌. ತಿಪ್ಪೇಸ್ವಾಮಿ, ಮಾಲತೇಶ್‌, ನಿಂಗಣ್ಣ, ಕರಿಯಣ್ಣ, ರಾಮಣ್ಣ, ಎಚ್‌. ಮಹಲಿಂಗಪ್ಪ, ರಾಜೇಶ್‌ ಮೊದಲಾದವರು ಪಾಲ್ಗೊಂಡಿದ್ದರು.
ಗ್ರಾಮೀಣ ಪ್ರದೇಶದ ಜನರ ಮನೋಭಾವ ಬದಲಾಗಲಿ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳ ಜನರಲ್ಲಿ ಸ್ವತ್ಛತೆ ಬಗ್ಗೆ ನಿರಾಸಕ್ತಿ ಇದೆ. ಈ ಭಾವನೆಯನ್ನು ಹೋಗಲಾಡಿಸಲು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಇಡೀ ಗ್ರಾಮದಲ್ಲಿ ಸಂಚರಿಸಿ ಜನರೊಂದಿಗೆ ಬೆರೆಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಓ.ಬಾಬುಕುಮಾರ್‌ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next