Advertisement

ಟ್ಯಾಂಕರ್‌ ಢಿಕ್ಕಿ ;ಕ್ರೂಸರ್‌ನಲ್ಲಿದ್ದ 5 ಮಂದಿ ದುರ್ಮರಣ 

11:30 AM Nov 21, 2017 | |

ಕಲಬುರಗಿ: ನಗರದ ಹೊರವಲಯದ ಔರಾದ (ಬಿ) ಎಂಬಲ್ಲಿ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಟ್ಯಾಂಕರ್‌ವೊಂದು ಕ್ರೂಸರ್‌ಗೆ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ದಾರುಣವಾಗಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಕೊಲ್ಹಾಪುರದಿಂದ ಮದುವೆಗೆ ತೆರಳುತ್ತಿದ್ದವರ ಕ್ರೂಸರ್‌ಗೆ ಓವರ್‌ ಟೇಕ್‌ ಮಾಡುತ್ತಿದ್ದ ಟ್ಯಾಂಕರ್‌ ಢಿಕ್ಕಿಯಾಗಿದೆ. ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ  ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.7 ಮಂದಿ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಸ್ಥಳಕ್ಕೆ ಕಲಬುರಗಿ ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದುರ್ಘ‌ಟನೆಗೆ ಟ್ಯಾಂಕರ್‌ ಚಾಲಕನೆ ಕಾರಣ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next