Advertisement

ಭಾರತ ವಿರುದ್ಧ ಸರಣಿಗೆ ತಮೀಮ್ ಇಕ್ಬಾಲ್ ಅಲಭ್ಯ ಸಾಧ್ಯತೆ

03:13 PM Oct 24, 2019 | keerthan |

ಢಾಕಾ: ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಮುಂದಿನ ಭಾರತ ವಿರುದ್ಧದ ಸರಣಿಯ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ತಮೀಮ್ ಅಲಭ್ಯತೆಯ ಬಗ್ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬಳಿ ಪರವಾನಗಿ ಪಡೆದಿದ್ದಾರೆ ಎಂದು ವರದಿಯಾಗಿದೆ.

Advertisement

ಪತ್ನಿಯ ವೈದ್ಯಕೀಯ ತಪಾಸಣೆಯ ಕಾರಣದಿಂದ ತಮೀಮ್ ಅಲಭ್ಯರಾಗಲಿದ್ದಾರೆ. ಒಂದು ವೇಳೆ ತಪಾಸಣೆಯ ಆರೋಗ್ಯ ಸ್ಥಿರವಾಗಿದ್ದರೆ ತಕ್ಷಣ ತಮೀಮ್ ಭಾರತಕ್ಕೆ ಆಗಮಿಸಲಿದ್ದಾರೆ.

ತಮೀಮ್ ಅಲಭ್ಯತೆಯ ಸಾಧ್ಯತೆ ಇರುವ ಕಾರಣ ಬಾಂಗ್ಲಾ ತಂಡ ಈಗಾಗಲೆ ಇಮ್ರುಲ್ ಖಯಾಸ್ ಅವರನ್ನು ಹೆಚ್ಚುವರಿ ಆರಂಭಿಕರನ್ನಾಗಿ ನೇಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next