Advertisement

ವಿದ್ಯಾರ್ಥಿಗಳಿಗೆ ಲೈಂಗಿಕ ಆಮಿಷ: ಪ್ರಾಧ್ಯಾಪಕಿ ಸೆರೆ

10:25 AM Apr 18, 2018 | Team Udayavani |

ಚೆನ್ನೈ: ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಜತೆ ಹಾಸಿಗೆ ಹಂಚಿಕೊಂಡಲ್ಲಿ, ಅಂಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಸವಲತ್ತು ನೀಡುವುದಾಗಿ ಮಹಿಳಾ ಪ್ರೊಫೆಸರ್‌ ಒಬ್ಬರು ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿರುಧನಗರ್‌ನ ದೇವಾಂಗ ಆರ್ಟ್ಸ್ ಕಾಲೇಜ್‌ನಲ್ಲಿ ಗಣಿತ ಪ್ರೊಫೆಸರ್‌ ಆಗಿದ್ದ ನಿರ್ಮಲಾ ದೇವಿ (46) ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಬಂಧಿತೆ ನಿರ್ಮಲಾ ತಮ್ಮ ಮೇಲಿನ ಆರೋಪ ಸುಳ್ಳು. ತಮಗೆ ರಾಜ್ಯಪಾಲರ ಪರಿಚಯವಿದೆ ಎಂದು ಪೊಲೀಸರಿಗೆ ಹೇಳಿದ್ದು, ಅದಕ್ಕೆ ರಾಜ್ಯಪಾಲರೇ ಸ್ಪಷ್ಟನೆ ನೀಡಿದ್ದಾರೆ. ಆ ಮಹಿಳಾ ಪ್ರೊಫೆಸರ್‌ ತಮಗೆ ಪರಿಚಯವಿಲ್ಲ. ಅವರು ಯಾರೆಂದೇ ಗೊತ್ತಿಲ್ಲ ಎಂದು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next