Advertisement

ಭಾರತ ಒಂದು ದೇಶವೇ ಅಲ್ಲ… ಜೈ ಶ್ರೀರಾಮ್, ಭಾರತ್ ಮಾತಾ ಕೀ… ನಾವು ಒಪ್ಪಲ್ಲ: ಡಿಎಂಕೆ ಸಂಸದ

03:20 PM Mar 05, 2024 | Team Udayavani |

ಚೆನ್ನೈ: ಇತ್ತೀಚಿಗೆ ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯ ಬೆನ್ನಲ್ಲೇ ಇದೀಗ ಮತ್ತೊಬ್ಬ ಸಂಸದ ದೇಶ ಹಾಗೂ ಹಿಂದೂ ಧರ್ಮದ ಬಗ್ಗೆ ನಾಲಗೆ ಹರಿ ಬಿಟ್ಟಿದ್ದಾರೆ. ಬಿಜೆಪಿಯ ಜೈ ಶ್ರೀರಾಮ್ ಮತ್ತು ಭಾರತ್ ಮಾತಾ… ಸಿದ್ಧಾಂತವನ್ನು ತಮಿಳುನಾಡು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಎ ರಾಜಾ ಮಂಗಳವಾರ ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

ಮಧುರೈಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ “ಭಾರತ ಒಂದು ದೇಶವೇ ಅಲ್ಲ… ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಬಿಜೆಪಿಯವರು ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಎಂದು ಹೇಳಿದರೆ ನಾವು ಮತ್ತು ತಮಿಳುನಾಡು ಜನತೆ ಎಂದಿಗೂ ಈ ಹೇಳಿಕೆಯನ್ನು ನೀಡಲ್ಲ… ನಾವೆಲ್ಲರೂ ರಾಮನ ಶತ್ರುಗಳು. ರಾಮಾಯಣ ಮತ್ತು ರಾಮನ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಸಲಿಗೆ ರಾಜಾ ಹೇಳಿದ್ದೇನು?
ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎ ರಾಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ. ಭಾರತ ಒಂದು ರಾಷ್ಟ್ರವಲ್ಲ, ಆದರೆ ಒಂದು ಉಪಖಂಡ. ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣವನ್ನು ವಿವರಿಸಿದ ಅವರು, “ಇಲ್ಲಿ ತಮಿಳು ಒಂದು ರಾಷ್ಟ್ರ ಮತ್ತು ದೇಶವಾಗಿದೆ. ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ. ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಈ ಎಲ್ಲಾ ರಾಷ್ಟ್ರಗಳು ಸೇರಿ ಭಾರತವನ್ನು ಮಾಡಿದರೆ ಭಾರತ ದೇಶವಲ್ಲ. ಇದೊಂದು ಉಪಖಂಡ ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಸಾಕಷ್ಟು ಸಂಪ್ರದಾಯಗಳು ಮತ್ತು ಸಂಸ್ಕೃತಿಗಳಿವೆ. ತಮಿಳುನಾಡಿಗೆ ಬಂದರೆ ಅಲ್ಲೊಂದು ಸಂಸ್ಕೃತಿ ಇದೆ. ಕೇರಳದಲ್ಲಿ ಇನ್ನೊಂದು ಸಂಸ್ಕೃತಿ ಇದೆ. ದೆಹಲಿಯಲ್ಲಿ ಇನ್ನೊಂದು ಸಂಸ್ಕೃತಿ ಇದೆ. ಒರಿಯಾದಲ್ಲಿ ಇನ್ನೊಂದು ಸಂಸ್ಕೃತಿ ಇದೆ. ಅದೇ ರೀತಿ ಕಾಶ್ಮೀರದಲ್ಲೂ ಸಂಸ್ಕೃತಿ ಇದೆ ಎಂದು ಅವರು ಹೇಳಿದರು.

ಮಣಿಪುರದ ಜನರು ನಾಯಿ ಮಾಂಸ ತಿನ್ನುತ್ತಾರೆ, ಈ ಸತ್ಯವನ್ನು ಒಪ್ಪಿಕೊಳ್ಳಿ. ಒಂದು ಸಮುದಾಯವು ಗೋಮಾಂಸ ತಿಂದರೆ ನಿಮಗೇನು ಸಮಸ್ಯೆ? ಅವರು ನಿಮ್ಮನ್ನು ತಿನ್ನಲು ಕೇಳಿದ್ದಾರೆಯೇ? ಆದ್ದರಿಂದ, ವಿವಿಧತೆಯಲ್ಲಿ ಏಕತೆಯ ಹೊರತಾಗಿಯೂ, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದ್ದಾರೆ.

Advertisement

ಬಿಜೆಪಿ ಕಿಡಿ
ಇತ್ತೀಚಿಗೆ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಅವರಿಗೆ ಮಾರ್ಚ್ ೫ ರಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ಇದರ ಬೆನ್ನಲ್ಲೇ ಇನ್ನೊಬ್ಬ ಸಂಸದ ನಾಲಿಗೆ ಹರಿಬಿಟ್ಟಿದ್ದು ಇದರಿಂದ ಆಕ್ರೋಶಗೊಂಡ ಬಿಜೆಪಿ ಎ. ರಾಜಾ ವಿರುದ್ಧ ಕಿಡಿಕಾರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next