Advertisement

ತಮಿಳುನಾಡಿನಲ್ಲಿ RSS ಪಥ ಸಂಚಲನ: ವಿಚಾರಣೆ ಮಾರ್ಚ್ 17 ಕ್ಕೆ ಮುಂದೂಡಿದ ಸುಪ್ರೀಂ

03:09 PM Mar 03, 2023 | Team Udayavani |

ನವದೆಹಲಿ: ಮಾರ್ಚ್ 5 ರಂದು ತಮಿಳುನಾಡಿನಲ್ಲಿ ಯಾವುದೇ ರೂಟ್ ಮಾರ್ಚ್ ನಡೆಸುತ್ತಿಲ್ಲ ಎಂದು ಆರ್‌ಎಸ್‌ಎಸ್ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.ರಾಜ್ಯದಲ್ಲಿ ಆರ್‌ಎಸ್‌ಎಸ್‌ಗೆ ತನ್ನ ರೂಟ್ ಮಾರ್ಚ್‌ಗೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರಕಾರದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 17 ಕ್ಕೆ ಮುಂದೂಡಿದೆ.

Advertisement

ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಹಕ್ಕು ಸರಕಾರಕ್ಕೆ ಇದೆ ಎಂದು ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ವಾದ ಮಂಡಿಸಿದೆ.

ತಮಿಳುನಾಡಿನಾದ್ಯಂತ 24 ಸ್ಥಳಗಳಲ್ಲಿ ಆರ್‌ಎಸ್‌ಎಸ್ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಆರ್‌ಎಸ್‌ಎಸ್ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿತ್ತು. 23 ಸ್ಥಳಗಳಲ್ಲಿ ಸುತ್ತುಗೋಡೆಯೊಳಗೆ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದೆ.

ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಮುಂದಿನ ದಿನಾಂಕದವರೆಗೆ ಮಾರ್ಚ್‌ನ ಉದ್ದೇಶಿತ ಮಾರ್ಗಗಳ ಕುರಿತು ಆರ್‌ಎಸ್‌ಎಸ್‌ನೊಂದಿಗೆ ಸಂವಾದ ನಡೆಸಲು ರಾಜ್ಯಕ್ಕೆ ಅನುಮತಿ ನೀಡಿದೆ.

ವಿಚಾರಣೆಯ ಸಂದರ್ಭದಲ್ಲಿ, ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ರೂಟ್ ಮಾರ್ಚ್ ನಡೆಸಲು ಸರಕಾರವು ಸಂಪೂರ್ಣವಾಗಿ ಯಾತ್ರೆಗೆ ವಿರೋಧವಿಲ್ಲ ಆದರೆ ಸೂಕ್ಷ್ಮ ಸ್ಥಳಗಳಲ್ಲಿ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

Advertisement

“ಪಿಎಫ್‌ಐ ಘಟನೆಗಳು ಮತ್ತು ನಿಷೇಧಗಳು ಇರುವುದರಿಂದ ಇದನ್ನು ಮಾಡಬೇಡಿ ಎಂದು ಹೇಳಿದ್ದೇವೆ. ಆದರೆ ಹೈಕೋರ್ಟ್ ಅವುಗಳನ್ನು ಎಲ್ಲಿ ನಡೆಸಲಿ ಎಂದು ಹೇಳುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿ ರಾಜ್ಯದ ಮೇಲಿದೆ. ಈ ವಿಷಯವು ರಾಜ್ಯಕ್ಕೆ ಸಂಬಂಧಿಸಿದೆ ಮತ್ತು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಹೊಂದಿದೆ. ಕೊಯಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟಗಳು, ಪಿಎಫ್‌ಐ ಘಟನೆಗಳು ಇತ್ಯಾದಿಗಳಿಗೆ ನ್ಯಾಯಾಲಯವು ತನ್ನ ಕಣ್ಣು ಮುಚ್ಚಲು ಸಾಧ್ಯವಿಲ್ಲ” ಎಂದು ಹಿರಿಯ ವಕೀಲರು ಹೇಳಿದ್ದಾರೆ.

ಮತ್ತೊಂದೆಡೆ, ಪಿಎಫ್‌ಐ ನಿಯಂತ್ರಿಸಲು ರಾಜ್ಯಕ್ಕೆ ಸಾಧ್ಯವಾಗದ ಕಾರಣ ಅವರು ಆರ್‌ಎಸ್‌ಎಸ್ ಪಥ ಸಂಚಲನವನ್ನು ನಿಷೇಧಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದ್ದಾರೆ.

“ನಮಗೆ 3 ಜಿಲ್ಲೆಗಳಿಗೆ ಅನುಮತಿ ನೀಡಲಾಗಿದೆ. ಆದರೆ 41 ಜಿಲ್ಲೆಗಳಲ್ಲಿ ನಿಷೇಧಿಸಲಾಗಿದೆ. ಪಿಎಫ್‌ಐ ನಿಷೇಧದ ನಂತರ ಯಾವುದೇ ಘಟನೆಗಳು ನಡೆದಿಲ್ಲ.ನಿಮ್ಮ ಆತಂಕವೇನು ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next