ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಿತಿಮೀರಿದ ಬಿಡಾಡಿ ಗೂಳಿಗಳ ಉಪಟಳ ಮುಂದುವರಿದಿದೆ.
ಬೆಟಗೇರಿಯ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.
ಮೂವರು ವಿದ್ಯಾರ್ಥಿನಿಯರು ನರಸಾಪೂರ ಬಳಿಯ ಡಿಪ್ಲೊಮಾ ಕಾಲೇಜಿನಿಂದ ಬೆಟಗೇರಿ ಕಡೆಗೆ ತೆರಳುತ್ತಿರುವ ಬಿಡಾಡಿ ಗೂಳಿಯೊಂದು ಏಕಾಏಕಿ ವಿದ್ಯಾರ್ಥಿನಿ ಮೇಲೆ ಎರಗಿದೆ. ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು, ಗಾಯಗೊಂಡಿದ್ದಾಳೆ.
ಗೂಳಿ ವಿದ್ಯಾರ್ಥಿನಿಗೆ ಗುದ್ದಿದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ, ಎರಡು ಗೂಳಿಗಳು ರಸ್ತೆ ಮಧ್ಯದಲ್ಲಿಯೇ ಪರಸ್ಪರ ಕಾದಾಡುತ್ತ ಆತಂಕ ಸೃಷ್ಟಿಸಿದ ವಿಡಿಯೋ ಕೂಡ ವಾಹನ ಸವಾರರನ್ನು ಮೈಜುಮ್ಮೆನಿಸುವಂತೆ ಮಾಡಿದೆ.
ನಗರಸಭೆ ಈಗಾಗಲೇ ಬಿಡಾಡಿ ದನಗಳ ಸ್ಥಳಾಂತರ ಆರಂಭಿಸಿದ್ದರೂ, ಇನ್ನೂ ಕೂಡ ಬಿಡಾಡಿ ದನಗಳ ಹಾವಳಿ ನಿಂತಿಲ್ಲ. ಕೂಡಲೇ ಅವಳಿ ನಗರದಲ್ಲಿರುವ ಎಲ್ಲಾ ಬಿಡಾಡಿ ದನಗಳನ್ನೂ ಸ್ಥಳಾಂತರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Bihar: ಸಂಗೀತ ಕಾರ್ಯಕ್ರಮದ ವೇಳೆ ಶೀಟ್ ಕುಸಿದು 100 ಮಂದಿಗೆ ಗಾಯ