ಚೆನ್ನೈ: ಅಂಗಡಿಯೊಂದರಲ್ಲಿ ಹೊಟ್ಟೆ ತುಂಬಾ ತಿಂದು ಹಣ ಪಾವತಿಸಲು ನಿರಾಕರಿಸಿದ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಕಾನ್ಟೇಬಲ್ ಗಳನ್ನು ಅಮಾನತುಗೊಳಿಸಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಇತ್ತೀಚೆಗೆ ಸಬ್ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಮೂವರು ಕಾನ್ಸ್‌ಟೇಬಲ್ ಗಳೊಂದಿಗೆ ಠಾಣೆಯ ಬಳಿ ಇರುವ ರಸ್ತೆ ಬದಿಯ ಅಂಗಡಿಯೊಂದಕ್ಕೆ ತೆರಳಿದ್ದಾರೆ. ಅಲ್ಲಿ ಜ್ಯೂಸ್ ಹಾಗೂ ಬ್ರೆಡ್ ಆಮ್ಲೇಟ್ ಆರ್ಡರ್ ಮಾಡಿ, ನೀರಿನ ಬಾಟಲಿಯನ್ನು ತೆಗೆದುಕೊಂಡಿದ್ದಾರೆ. ಕೆಲ ನಿಮಿಷದ ಬಳಿಕ ಹೇಳಿದ ತಿಂಡಿ ಬಂದಿದ್ದು, ಅದನ್ನು ತಿಂದ ಬಳಿಕ ಅಂಗಡಿಯವನು ಪೊಲೀಸರ ಬಳಿ ಹಣ ಪಾವತಿಸಲು ಕೇಳಿದ್ದಾರೆ.
ನಿಯತ್ತಿನಿಂದ ಹಣ ಪಾವತಿಸಲು ಕೇಳಿದ ಅಂಗಡಿ ಆತನಿಗೆ ಪೊಲೀಸರು ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಜೋರು ಮಾಡಿದ್ದಾರೆ. ಈ ಬಗ್ಗೆ ಅಂಗಡಿ ಮಾಲೀಕ ಮಣಿಮಂಗಲಂ ದೂರು ನೀಡಿದ್ದು, ಸಿಸಿಟಿವಿ ದೃಶ್ಯವನ್ನು ಆಧರಿಸಿ ತನಿಖೆ ನಡೆಸಲಾಗಿದೆ. ಪೊಲೀಸರ ತಪ್ಪು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಂಬರಂ ಕಮಿಷನರ್ ಅಮಲರಾಜ್ ಸಬ್ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಇತರ ಮೂವರು ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.