ನವದೆಹಲಿ: ತಮಿಳುನಾಡಿನಲ್ಲಿ ಮಂಗಳವಾರ ದಾಖಲೆ ಪ್ರಮಾಣ ಎಂಬಂತೆ ಕೋವಿಡ್ 19 ವೈರಸ್ ಸೋಂಕಿತರ 69 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ದಿಲ್ಲಿ ನಿಜಾಮುದ್ದೀನ್ ಮರ್ಕಝ್ ತಬ್ಲಿಘಿ ಜಮಾತ್ ನ ಸಭೆಯಲ್ಲಿ ಪಾಲ್ಗೊಂಡಿರುವ 63 ಮಂದಿ ಸೇರಿರುವುದಾಗಿ ವರದಿ ತಿಳಿಸಿದೆ. ತಮಿಳುನಾಡಿನಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 690ಕ್ಕೆ ಏರಿದೆ. ಏಳು ಮಂದಿ ಸಾವನ್ನಪ್ಪಿದ್ದಾರೆ.
ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದ 64 ವರ್ಷದ ಮಹಿಳೆ ಮಂಗಳವಾರ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಈಕೆ ಹೈಪರ್ ಟೆನ್ಶನ್ ಹಾಗೂ ಡಯಾಬಿಟಿಸ್ ನಿಂದ ಬಳಲುತ್ತಿದ್ದರು ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್ ತಿಳಿಸಿದ್ದಾರೆ.
ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕು ಪೀಡಿತರು ಪತ್ತೆಯಾಗಿದೆ.