Advertisement

Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ

07:25 PM Nov 06, 2024 | Team Udayavani |

ಚೆನ್ನೈ: ಮುಂಬರುವ (2026) ತಮಿಳುನಾಡು ವಿಧಾನಸಭಾ ಚುನಾವಣೆಗೆ ಯಾರೇ ಎದುರಾಳಿಯಾಗಿ ಬಂದು ನಿಂತರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ನಟ ಹಾಗೂ ಇತ್ತೀಚೆಗೆ ಹೊಸ ಪಕ್ಷ ಸ್ಥಾಪಿಸಿದ ರಾಜಕಾರಣಿ ವಿಜಯ್‌ಗೆ ಎಚ್ಚರಿಕೆ ನೀಡಿದ್ದಾರೆ.

Advertisement

ದಳಪತಿ ಅಥವಾ ನಾಯಕ ಎಂದು ಕರೆಯಲ್ಪಡುತ್ತಿದ್ದ ನಟ ವಿಜಯ್ ಅ.27ರಂದು ನೂತನವಾಗಿ ಆರಂಭಿಸಿದ ತನ್ನ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಉದ್ಘಾಟನಾ ಸಮಾವೇಶವು ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆದ ಸಮಾರಂಭದಲ್ಲಿ ವಿಜಯ್ ತಮ್ಮ ಮೊದಲ ರಾಜಕೀಯ ಭಾಷಣದಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) (DMK) ಮತ್ತು ಬಿಜೆಪಿಯ ಹೆಸರೆತ್ತದೇ ವಾಗ್ದಾಳಿ ನಡೆಸಿದ್ದರು.

ದಿಲ್ಲಿಯಿಂದ ಅಥವಾ ಸ್ಥಳೀಯವಾಗಿ ಬಂದ್ರೂ ಗೆಲುವು ನಮ್ಮದೇ:
ಅಂದಿನಿಂದ, ತಮಿಳುನಾಡಿನ ರಾಜಕೀಯ ನಾಯಕರು, ವಿಶೇಷವಾಗಿ ಡಿಎಂಕೆ ನಾಯಕರು ವಿಜಯ್ ಭಾಷಣ ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದು, ವಿಲ್ಲುಪುರಂನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಉದಯನಿಧಿ, 2026ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಅವರು ಯಾವುದೇ ಮೈತ್ರಿ ಮಾಡಿಕೊಂಡರೂ, ಅವರು ಯಾವುದೇ ದಿಕ್ಕಿನಿಂದ ಬಂದರೂ ಪರವಾಗಿಲ್ಲ, ಅವರು ದೆಹಲಿ ಅಥವಾ ಸ್ಥಳೀಯವಾಗಿ ಯಾರೇ ಬರಲಿ ಗೆಲ್ಲುವುದು ಮಾತ್ರ ಡಿಎಂಕೆ ಎಂದು ಹೇಳಿದರು.

ನಟ ವಿಜಯ್ ಜೊತೆ ಬಹಳ ವರ್ಷಗಳ ಗೆಳೆತನ ಹೊಂದಿರುವ ಉದಯನಿಧಿ, ತಮ್ಮ ಚೊಚ್ಚಲ ರಾಜಕೀಯ ಸಮಾವೇಶಕ್ಕೆ ನಟನಿಗೆ ಶುಭ ಹಾರೈಸಿದ್ದರು. ವಿಜಯ್ ನನಗೆ ಹಲವು ವರ್ಷಗಳಿಂದ ಸ್ನೇಹಿತ, ನಾನು ಅವರನ್ನು ಬಾಲ್ಯದಿಂದಲೂ ನೋಡಿದ್ದೇನೆ. ನನ್ನ ಪ್ರೊಡಕ್ಷನ್ ಹೌಸ್‌ನ ಮೊದಲ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಹೊಸ ಸಾಹಸದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಉದಯನಿಧಿ ಹೇಳಿದ್ದಾರೆ.

ವಿಜಯ್ ರಾಜಕೀಯ ಭಾಷಣದ ನಂತರ, ಅದಕ್ಕೆ ಪ್ರತಿಕ್ರಿಯೆಗಳು ವಿಭಿನ್ನವಾಗಿವೆ. ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇದನ್ನು ಸಿದ್ಧಾಂತಗಳ ಮಿಶ್ರಣ ಎಂದು ಹೇಳಿದರೆ, ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿ ಟಿವಿಕೆಯು ಡಿಎಂಕೆ ಮತಗಳ ವಿಭಜಿಸುವುದಿಲ್ಲ ಎಂದು ಹೇಳಿದರು.

Advertisement

ತಮಿಳುನಾಡು ವಿಧಾನಸಭಾ ಸ್ಪೀಕರ್‌ ಎಂ.ಅಪ್ಪಾವು ಮಾತನಾಡಿ ಬಿಜೆಪಿಯವರು ರಜನೀಕಾಂತ್‌ ಬದಲು ವಿಜಯ್‌ ಮೂಲಕ ರಾಜಕೀಯ ಪಕ್ಷವನ್ನು ತಂದಿದ್ದಾರೆ. ರಜನೀಕಾಂತ್‌ರನ್ನು ರಾಜಕೀಯಕ್ಕೆ ತರಲು ಭಾರಿ ಪ್ರಯತ್ನಪಟ್ಟರು ಆಗಲಿಲ್ಲ. ಅದಕ್ಕೆ ಈಗ ವಿಜಯ್‌ ರಾಜಕೀಯ ಪಕ್ಷ ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next