Advertisement
ಪಟ್ಟಣದ ಹಾಲಿನ ಡೇರಿ ಮುಂಭಾಗದಲ್ಲಿ ಟಿ.ನರಸೀಪುರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಅಶ್ವಿನ್‌ಕುಮಾರ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ತಮಗೆ ದೇಶದ ರೈತರ ಇಂದಿನ ಸ್ಥಿತಿಯನ್ನು ಕಂಡು ಬಹಳಷ್ಟು ಮರುಕವಿದೆ.
Related Articles
Advertisement
ಇಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಕುಮಾರಸ್ವಾಮಿ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ರೈತರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಇಂದು ಜೆಡಿಎಸ್ ಅಲೆ ಹೆಚ್ಚಾಗುತ್ತಿದ್ದು, ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರೂ ಆಶ್ಚರ್ಯ ವ್ಯಕ್ತಪಡಿಸುವುದೇನಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಬಳಗದ ರಾಜ್ಯಾಧ್ಯಕ್ಷ ಮಂಜುನಾಥ್, ಪುರಸಭೆಯ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ರಾಜ್ಯ ಜೆಡಿಎಸ್ ಜಂಟಿ ಕಾರ್ಯದರ್ಶಿ ರಾಹುಲ್, ಚಿಕ್ಕಯ್ಯ, ಅನಂತ, ಪಾರ್ಥಸಾರಥಿ, ರಾಮಸ್ವಾಮಿ, ಚಿಕ್ಕ ಜವರಪ್ಪ, ರಮೇಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ನಮ್ಮಲ್ಲಿ ಒಗ್ಗಟ್ಟಿನ ಕೊರತೆ: ಕಾವೇರಿ ವಿಚಾರದಲ್ಲಿ ಟ್ರಿಬನಲ್ ಮಂಡಳಿ ವಾರಕ್ಕೆ, ತಿಂಗಳಿಗೆ ತಮಿಳುನಾಡಿಗೆ ನೀರು ಬಿಡಬೇಕೆಂದು ತಿಳಿಸುತ್ತದೆ. ಕಾವೇರಿ ಅಣೆಕಟ್ಟನ್ನು ರಾಜ್ಯದ ಜನತೆಯ ಹಣದಿಂದ ಕಟ್ಟಿದ್ದೇವೆಯೇ ಹೊರತು ತಮಿಳುನಾಡಿನ ಹಣದಿಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡ, ತಮಿಳುನಾಡಿನಲ್ಲಿ ಶಾಸಕರು, ಸಂಸದರೆಲ್ಲರೂ ಸೇರಿ ನೀರಿಗಾಗಿ ಧರಣಿ ಕೂರುವ ವ್ಯವಸ್ಥೆ ನಮ್ಮಲ್ಲಿ ಏಕೆ ಇಲ್ಲ.
ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು. ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅದರ ಬಗ್ಗೆ ಮಾತನಾಡದೇ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಅದು ಜ್ಞಾಪಕವಾಗಿದೆ ಎಂದು ವ್ಯಂಗ್ಯವಾಡಿದರು.