ಚೆನ್ನೈ: ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲು ಹೋದ ಮೀನುಗಾರಿಕಾ ಸಚಿವರು ಕೊನೆಗೆ ತಾನೇ ಪ್ರವಾಹದಲ್ಲಿ ಸಿಲುಕಿ ಎರಡು ದಿನಗಳ ಬಳಿಕ ಸಚಿವರನ್ನು ರಕ್ಷಣೆ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳಿಂದ ತಮಿಳುನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಈ ವೇಳೆ ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿತ್ತು ಈ ನಡುವೆ ತಮಿಳುನಾಡಿನ ಮೀನುಗಾರಿಕಾ ಸಚಿವರಾದ ಅನಿತಾ ಆರ್ ರಾಧಾಕೃಷ್ಣನ್ ಅವರು ಕಳೆದ 18 ರಂದು ತೂತುಕುಡಿಯ ಎರಲ್ ಪಟ್ಟಣಕ್ಕೆ ತೆರಳಿ ಅಲ್ಲಿನ ಜನರಿಗೆ ಮಳೆ ಪರಿಹಾರ ನೀಡಲು ಮುಂದಾಗಿದ್ದಾರೆ ಈ ವೇಳೆ ಪಕ್ಷದ ಕೆಲ ಸದಸ್ಯರು ಜೊತೆಗಿದ್ದರು ಎನ್ನಲಾಗಿದೆ. ಬರ ಪರಿಹಾರ ನೀಡಿ ವಾಹನದಲ್ಲಿ ಹಿಂತಿರುಗುವ ವೇಳೆ ಅರಳ್ ಬಳಿಯ ಉಮರಿಕಾಡು ಪ್ರದೇಶಕ್ಕೆ ಬರುತ್ತಿದ್ದಂತೆ ಪ್ರವಾಹದ ನೀರು ಏರಿಕೆಯಾಗಿ ರಸ್ತೆಗಳು ಮುಳುಗಡೆಗೊಂಡಿತ್ತು ಹಾಗಾಗಿ ಅಲ್ಲಿಂದ ಸಚಿವರ ಕಾರು ಮುಂದೆ ಬರಲಾಗದೆ ಬಾಕಿಯಾದರು.
ಭಾರೀ ಮಳೆಯಿಂದಾಗಿ ದಕ್ಷಿಣ ಜಿಲ್ಲೆಗಳಾದ ತೂತುಕುಡಿ, ತಿರುನಲ್ವೇಲಿ, ಕನ್ನಿಯಾಕುಮಾರಿ ಮತ್ತು ತೆಂಕಶಿಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ರಸ್ತೆಗಳು ಜಲಾವೃತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಈ ವೇಳೆ ಸಚಿವರ ಜೊತೆಗಿದ್ದ ಪಕ್ಷದ ಕಾರ್ಯಕರ್ತರು ಸಚಿವ ಅನಿತಾ ಆರ್.ರಾಧಾಕೃಷ್ಣನ್ರನ್ನ ಸುರಕ್ಷಿತವಾಗಿ ಉಮರಿಕಾಡು ಗ್ರಾಮದ ಪಕ್ಷದ ಕಾರ್ಯಕಾರಿಣಿಯ ಮನೆಗೆ ಕರೆದೊಯ್ದರು ಅಲ್ಲೇ ಎರಡು ದಿನಗಳ ಕಾಲ ಇದ್ದ ಸಚಿವರು ನಿನ್ನೆ(ಬುಧವಾರ) ಪ್ರವಾಹದ ನೀರು ಕಡಿಮೆಯಾಗುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಂದ ಅಲ್ಲಿಗೆ ತೆರಳಿ ಸಚಿವರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆ ತಂದಿದೆ. ಇದರಿಂದ ಸಚಿವರು ಎರಡು ದಿನಗಳ ಕಾಲ ಉಮರಿಕಾಡಿನಲ್ಲೇ ಉಳಿಯಬೇಕಾಯಿತು ಎಂದಿದ್ದಾರೆ.
ಸದ್ಯ ತಮಿಳುನಾಡಿನ ಕೆಲ ಪ್ರದೇಶಗಳು ಜಲಾವೃತವಾಗಿದ್ದು ಸಾವಿರಾರು ಮಂದಿಯನ್ನು ರಕ್ಷಣಾ ತಂಡ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ, ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಸೇರಿದೆ.
ಇದನ್ನೂ ಓದಿ: Ayodhya: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ವಿಪಕ್ಷಗಳ ಹಿರಿಯ ನಾಯಕರಿಗೂ ಅಹ್ವಾನ