Advertisement

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

12:02 AM Mar 02, 2021 | Team Udayavani |

ಬೆಂಗಳೂರು: ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಿ ಎಐಎಡಿಎಂಕೆ ಮೈತ್ರಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ರಾಜ್ಯದಿಂದ ಸಚಿವರು- ಶಾಸಕರ ಸಹಿತ 50ಕ್ಕೂ ಹೆಚ್ಚು ನಾಯಕರನ್ನು ಚುನಾವಣೆ ಉಸ್ತುವಾರಿಗಳಾಗಿ ನೇಮಿಸಲು ತೀರ್ಮಾನಿಸಿದೆ.

Advertisement

ಸೋಮವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸುಮಾರು 50 ಮಂದಿ ಪ್ರತಿನಿಧಿಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ. ಪಕ್ಷದ ಅಭ್ಯರ್ಥಿಗಳ ಜತೆಗೆ ಮೈತ್ರಿ ಪಕ್ಷವಾದ ಎಐಎಡಿಎಂಕೆ ಅಭ್ಯರ್ಥಿಗಳ ಗೆಲುವಿಗೂ ಶ್ರಮಿಸುವ ಕುರಿತು ಕಾರ್ಯತಂತ್ರ ರೂಪಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎಐಎಡಿಎಂಕೆಯೊಂದಿಗೆ ಸೀಟು ಹಂಚಿಕೆ ಪೂರ್ಣಗೊಂಡು ಬಿಜೆಪಿಗೆ ದೊರೆಯುವ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾದ ಬಳಿಕ ಅಧಿಕೃತ ಜವಾಬ್ದಾರಿ ವಹಿಸಲಾಗುತ್ತದೆ. ರಾಜ್ಯ ಪ್ರ. ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರನ್ನು ಕೊಯಮತ್ತೂರು ಭಾಗದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಅತ್ತ ಪುದುಚೇರಿಯಲ್ಲಿ ಕೂಡ ರಾಜ್ಯ ಬಿಜೆಪಿ ಚುನಾವಣ ಉಸ್ತುವಾರಿಗಳ ತಂಡ ಕಾರ್ಯ ನಿರ್ವಹಿಸುತ್ತಿದೆ.

ಕೇರಳದಲ್ಲಿ ಜೋಶಿ ನೇತೃತ್ವ
ಕೇರಳ ಚುನಾವಣೆ ಉಸ್ತುವಾರಿಯಾಗಿ ಪ್ರಹ್ಲಾದ್‌ ಜೋಶಿ, ಡಿಸಿಎಂ ಡಾ| ಅಶ್ವತ್ಥ್ ನಾರಾಯಣ, ಸುನಿಲ್‌ ಕುಮಾರ್‌ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ದ. ಕ., ಉಡುಪಿ ಜಿಲ್ಲೆಗಳಿಂದ 40 ಜನರ ತಂಡ ಕಳುಹಿಸಲಾಗಿದೆ. ಪಶ್ಚಿಮ ಬಂಗಾಲಕ್ಕೆ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ತಂಡ ತೆರಳಲಿದೆ.

Advertisement

ಕಾಂಗ್ರೆಸ್‌ನಿಂದಲೂ ರಾಜ್ಯ ತಂಡ
ನೆರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್‌ನಿಂದಲೂ ತಂಡ ರಚನೆ ಮಾಡಲಾಗಿದೆ. ತ.ನಾಡಿಗೆ ದಿನೇಶ್‌ ಗುಂಡೂರಾವ್‌, ವೀರಪ್ಪ ಮೊಲಿ; ಕೇರಳಕ್ಕೆ ಐವನ್‌ ಡಿ’ಸೋಜಾ, ಪಿ.ಯು. ಮೋಹನ್‌ ಅವರನ್ನು ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next