Advertisement

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು! ವ್ಯಕ್ತಿಗಾಗಿ ತೀವ್ರ ಶೋಧ

09:12 AM Apr 10, 2020 | Nagendra Trasi |

ಚೆನ್ನೈ: ಯಡವಟ್ಟುಗಳು ಹೇಗೆ ಬೇಕಾದರೂ ಸಂಭವಿಸಬಹುದು, ಅಷ್ಟೇ ಅಲ್ಲ ಅದರಿಂದಾಗುವ ಅನಾಹುತ ಮತ್ತಷ್ಟು ಅಪಾಯಕಾರಿಯಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದೆಹಲಿಯಿಂದ ಬಂದಿದ್ದ ವ್ಯಕ್ತಿಯೊಬ್ಬನನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಆತನಿಗೆ ಕೋವಿಡ್ 19 ಸೋಂಕು ಇದ್ದಿದ್ದು ಪಾಸಿಟಿವ್ ಎಂದು ವರದಿ ನೀಡುವ ಬದಲು ಬರಹ ದೋಷ(clerical error)ದಿಂದಾಗಿ “ನೆಗಟಿವ್” ಎಂದು ವರದಿ ನೀಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿದ್ದಾರೆ! ಈಗ ಆ ವ್ಯಕ್ತಿಗಾಗಿ ತಮಿಳುನಾಡು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದ್ದರಿಂದ ಆ ವ್ಯಕ್ತಿಯನ್ನು ಮಂಗಳವಾರ ಡಿಸ್ ಚಾರ್ಜ್ ಮಾಡಲಾಗಿತ್ತು. ಆ ವಾರ್ಡ್ ನಲ್ಲಿದ್ದ ಇತರ ಮೂವರನ್ನು ಡಿಸ್ ಚಾರ್ಜ್ ಮಾಡಿದ್ದು, ಇದೀಗ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿ ಐಸೋಲೇಶನ್ ನಲ್ಲಿ ಇಡಲಾಗಿದೆ. ಆದರೆ ದಿಲ್ಲಿಯ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ವರದಿ ವಿವರಿಸಿದೆ.

ಕೋವಿಡ್ 19ನಂತಹ ಮಾರಕ ವೈರಸ್ ಗೆ ಸಂಬಂಧಿಸಿದಂತೆ ಬರಹ ದೋಷ ತುಂಬಾ ಅಪಾಯಕಾರಿಯಾಗಿದೆ. ಯಾಕೆಂದರೆ ಇದು ಸೋಂಕು ಹರಡಲು ಕಾರಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷೆ ಯಶಸ್ವಿಯಾಗಿದ್ದು, ಬೇರೆ, ಬೇರೆ ಫಲಿತಾಂಶ ತೋರಿಸಿದೆಯೇ ಅಥವಾ ಬರಹ ದೋಷ, ಗೊಂದಲ ಕಾರಣವಾಗಿದೆಯೇ ಎಂಬುದು ಖಚಿತವಾಗಿಲ್ಲ ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದಿಲ್ಲಿಯ ವ್ಯಕ್ತಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ಫೋಟೊವನ್ನು ತಮಿಳುನಾಡು ಪೊಲೀಸರು ಬೇರೆಡೆ ಹಂಚಿಕೊಂಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next