Advertisement

ನ್ಯಾಯಬೆಲೆ ಅಂಗಡಿಯಲ್ಲೇ ಟೊಮೇಟೊ ಮಾರಾಟ ಮಾಡಲು ಮುಂದಾದ ತಮಿಳುನಾಡು ಸರಕಾರ

06:04 PM Jul 04, 2023 | Team Udayavani |

ತಮಿಳುನಾಡು: ದಿನದಿಂದ ದಿನಕ್ಕೆ ಟೊಮೇಟೊ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ, ದಿನಬೆಳಗಾದರೆ ಚಿನ್ನದ ಬೆಲೆಯಂತೆ ಟೊಮೇಟೊ ದರವನ್ನು ಕೇಳುವ ಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಟೊಮೇಟೊ ದರ ನೂರರ ಗಡಿ ದಾಟಿದ್ದು, ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ಮಂಗಳವಾರ ನಗರದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಟೊಮೇಟೊ ಕಿಲೋಗೆ 60 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ.

Advertisement

ಈಗಾಗಲೇ ರಾಜ್ಯದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ಮಾಡುತ್ತಿದ್ದು, ಅಗತ್ಯ ಬಿದ್ದರೆ ಈ ಉಪಕ್ರಮವನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಸಹಕಾರಿ ಸಚಿವ ಕೆ ಆರ್ ಪೆರಿಯಕರುಪ್ಪನ್ ಹೇಳಿದರು.

ಟೊಮೇಟೊ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಸೋಮವಾರ ಈ ನಿರ್ಧಾರಕ್ಕೆ ಬಂದಿದ್ದು ಬೆಲೆ ಕಡಿಮೆಯಾಗದಿದ್ದಲ್ಲಿ ಈ ಕ್ರಮವನ್ನು ಇತರ ಕಡೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸದ್ಯ ನೆರೆ ರಾಜ್ಯದಿಂದ ಟೊಮೇಟೊ ಆಮದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು ಸಧ್ಯದಲ್ಲೇ ಈ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಹೇಳಿದ ಅವರು ಅಲ್ಲಿಯವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ನೈಜ ಬೆಲೆಗೆ ದೊರಕಲಿದೆ ಎಂದು ಹೇಳಿದರು.

ಇದನ್ನೂ ಓದಿ: Bombay Stock Market: ಷೇರುಪೇಟೆ ಸಂವೇದಿ ಸೂಚ್ಯಂಕ ನಾಗಾಲೋಟ-ಸಾರ್ವಕಾಲಿಕ ಗರಿಷ್ಠ

Advertisement
Advertisement

Udayavani is now on Telegram. Click here to join our channel and stay updated with the latest news.

Next