Advertisement

ಬೆಟ್ಟಿಂಗ್: ಆನ್ ಲೈನ್ ಗೇಮ್ ನಿಷೇಧಿಸಿದ ತಮಿಳುನಾಡು ಸರ್ಕಾರ

03:33 PM Nov 21, 2020 | sudhir |

ಚೆನ್ನೈ : ಬೆಟ್ಟಿಂಗ್ ದಂಧೆಯನ್ನು ಉತ್ತೇಜಿಸುವ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

Advertisement

ಜನರು ಬೆಟ್ಟಿಂಗ್ ಗೆ ಅವಕಾಶ ನೀಡುವ ಆನ್ ಲೈನ್ ಗೇಮ್ ಗಳಿಗೆ ದಾಸರಾಗಿ ತಾವು ಡುಡಿದ ಹಣವನ್ನೆಲ್ಲಾ ಅದರಲ್ಲಿ ವಿನಿಯೋಗಿಸಿ ನಷ್ಟ ಅನುಭವಿಸಿ ನಂತರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ .

ಇದನ್ನೂ ಓದಿ:ನೈಟ್ ಬೀಟ್ ಪೊಲೀಸರ ಕಾರ್ಯಾಚರಣೆ: ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಶ; ಇಬ್ಬರು ವಶಕ್ಕೆ

ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ಈ ಸುಗ್ರೀವಾಜ್ಞೆ ಹೊರಡಿಸಿದ್ದು, ಗೇಮಿಂಗ್ ಕಾಯ್ದೆ 1930, ಚೆನ್ನೈ ನಗರ ಪೊಲೀಸ್ ಕಾಯ್ದೆ- 1888, ಚೆನ್ನೈ ಜಿಲ್ಲಾ ಪೊಲೀಸ್ ಕಾಯ್ದೆ-1859 ಗಳಿಗೆ ತಿದ್ದುಪಡಿ ಮಾಡಿ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ

ಆನ್ ಲೈನ್ ಬೆಟ್ಟಿಂಗ್ ಗೇಮ್ ಆಡುವವರಿಗೆ 5000 ರೂ. ದಂಡ , 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಅಂಗಡಿಗಳಲ್ಲಿ ಗೇಮ್ ಆಡಿಸುವವರಿಗೆ 10000 ರೂ. ದಂಡ , 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಬೆಟ್ಟಿಂಗ್ ಗೆದ್ದವರಿಗೆ ನಗದು ನೀಡಲು ಆನ್ ಲೈನ್ ಮೂಲಕ ಹಣ ಪಡೆಯುವುದು ಮತ್ತು ನೀಡುವುದನ್ನೂ ನಿಷೇಧಿಸಲಾಗಿದೆ .

Advertisement

ಈ ಆನ್ ಲೈನ್  ಗೇಮ್  ಗೀಳಿನಿಂದ ಜನರು ಅದರಲ್ಲೂ ಯುವಜನಾಂಗ ಸಮಸ್ಯೆ ಎದುರಿಸುವಂತಾಗಿದೆ. ಹಲವಾರು ಜನರು ನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ . ಹಾಗಾಗಿ ಇಂತಹ ಘಟನೆಗಳು ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಆಜ್ಞೆ ಹೊರಡಿಸಬೇಕು ಎಂಬುದಾಗು ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು ಎಂದು ರಾಜಭವನ ಪ್ರಕಟಣೆ ತಿಳಿಸಿದೆ .

Advertisement

Udayavani is now on Telegram. Click here to join our channel and stay updated with the latest news.

Next