ನವ ದೆಹಲಿ : ಚಿನ್ನ, ವಜ್ರ ವೈಡೂರ್ಯ ಎಲ್ಲವೂ ಈಗ ಹಳೆಯದಾದವು. ಮೂರು ದೈನಂದಿನ ಮೂಲಭೂತ ವಸ್ತುಗಳು ದೇಶದಲ್ಲಿ ದುಬಾರಿಯಾಗಿವೆ. ಆ ಮೂರು ವಸ್ತುಗಳಿಗ ಮದುವೆಯ ವಿಶೇಷ ಉಡುಗೊರೆಯಾಗಿಯೂ ಬದಲಾಗಿವೆ.
ಓದಿ : ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಮಾಸಾಚರಣೆ
ಹೌದು, ತಮಿಳುನಾಡಿನಲ್ಲಿ ಇತ್ತೀಚೆಗೆ ನೆಡೆದ ಒಂದು ಮದುವೆ ಸಮಾರಂಭದಲ್ಲಿ ಆ ಮೂರು ವಸ್ತುಗಳನ್ನು ವಧು–ವರನಿಗೆ ಉಡುಗೊರೆಯಾಗಿ ನೀಡಿದ ಘಟನೆ ನೆಡೆದಿದೆ ಅಂದರೇ ನಿಮಗೆ ಆಶ್ಚರ್ಯವಾಗಬಹದು. ಆದರೇ, ಇದು ಅಪ್ಪಟ ಸತ್ಯ. ವಧು–ವರರ ಗೆಳೆಯರು ತಮ್ಮ ಉಡುಗೊರೆಯಾಗಿ ಎಲ್ ಪಿ ಜಿ ಸಿಲಿಂಡರ್, ಪೆಟ್ರೋಲ್ ತುಂಬಿದ ಬಾಟಲಿ ಹಾಗೂ ಈರುಳ್ಳಿಯ ಮಾಲೆಯನ್ನು ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ವಧು ವರರಾದ ಕಾರ್ತಿಕ್ ಹಾಗೂ ಶರಣ್ಯ ತಮ್ಮನ್ನು ಸುತ್ತುವರಿದ ಗೆಳೆಯರೊಂದಿಗೆ ನಗುತ್ತಿರುವುದನ್ನು ಗಮನಿಸಬಹುದು. ಉಡುಗೊರೆಯಾಗಿ ಎಲ್ ಪಿ ಜಿ ಸಿಲಿಂಡರ್, ಪೆಟ್ರೋಲ್ ಬಾಟಲ್ ನೀಡಿ ಈರುಳ್ಳಿಯಿಂದ ತಯಾರಿಸಿದ ಮಾಲೆಗಳನ್ನು ಹಾಕಿಕೊಳ್ಳುವಂತೆ ಗೆಳೆಯರು ಸೂಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗುತ್ತಿದೆ.
ಈ ವೀಡಿಯೋ ಟ್ವೀಟರ್ ನಲ್ಲಿ ಸಾವಿರಾರು ಭಾರಿ ವೀಕ್ಷಣೆಯಾಗಿದೆ.
ಓದಿ : ಕಟಪಾಡಿ; ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಧಿಕ ವಾಹನ ದಟ್ಟಣೆ