Advertisement

ಕೊಯಮತ್ತೂರ್ ನಲ್ಲಿ ಕೋವಿಡ್ 19 ಪ್ರಕರಣ ಹೆಚ್ಚಳ, ಸಿಎಂ ಸ್ಟಾಲಿನ್ ಶೀಘ್ರವೇ ಭೇಟಿ

06:49 PM May 28, 2021 | Team Udayavani |

ಚೆನ್ನೈ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ತಮಿಳುನಾಡಿನಲ್ಲಿ ಕೋವಿಡ್ ಲಾಕ್ ಡೌನ್ ಘೋಷಿಸಿ ಮೂರು ವಾರಗಳು ಸಮೀಪಿಸುತ್ತಿದೆ. ರಾಜಧಾನಿ ಚೆನ್ನೈನಲ್ಲಿ ಪಾಸಿಟಿವಿಟಿ ದರ ಕೂಡಾ ಕಡಿಮೆಯಾಗಿದೆ. ಆದರೆ ಕೊಯಮತ್ತೂರು ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣ ಹೆಚ್ಚಳವಾಗಿದ್ದು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶೀಘ್ರವೇ ಈ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ತಮಿಳುನಾಡಿನಲ್ಲಿ ಕಳೆದ 24ಗಂಟೆಗಳಲ್ಲಿ 33,361 ಪ್ರಕರಣ ವರದಿಯಾಗಿದೆ. ಚೆನ್ನೈನಲ್ಲಿ ಇದೇ ಮೊದಲ ಬಾರಿಗೆ ಗುರುವಾರ 2,779 ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಕೊಯಮತ್ತೂರಿನಲ್ಲಿ ಕಳೆದ 24ಗಂಟೆಗಳಲ್ಲಿ ದಾಖಲೆಯ 4000 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಮೇ 26ರಂದು 4,268 ಕೋವಿಡ್ ಪ್ರಕರಣ ಹಾಗೂ ಮೇ 27ರಂದು 4,734 ಕೋವಿಡ್ ಪ್ರಕರಣ ವರದಿಯಾಗಿತ್ತು ಎಂದು ಅಂಕಿಅಂಶ ತಿಳಿಸಿದೆ.

ಈರೋಡ್, ಚೆಂಗಲ್ ಪಟ್ಟು, ಮದುರೈ, ತಿರುವಳ್ಳೂರ್ ಮತ್ತು ವಿರುಧುನಗರ್ ಗಳಲ್ಲಿ ಒಂದು ಸಾವಿರಕ್ಕಿಂತ ಅಧಿಕ ಕೋವಿಡ್ 19 ಪ್ರಕರಣಗಳು ಕಳೆದ 24ಗಂಟೆಗಳಲ್ಲಿ ಪತ್ತೆಯಾಗಿದೆ. ತಿರುಪ್ಪುರ್ ಜಿಲ್ಲೆಯಲ್ಲಿ ದಾಖಲೆಯ 2,074 ಕೋವಿಡ್ ಪ್ರಕರಣ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next