ಮೈಸೂರು: ತಮಿಳುನಾಡು ಸರ್ಕಾರ ಭಾರತ ಸರ್ಕಾರಕ್ಕೆ ಸೂಚನೆ ನೀಡುವಂತಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿಕೆ ನೀಡಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಮಿಳುನಾಡು ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಕೆದಾಟು ಯೋಜನೆ ಕುರಿತು ಅಫಿಡವಿಟ್ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದರು.
ತಮಿಳುನಾಡು ಹಾಕಿರುವುದು ಸಮ್ಮಿಶ್ರ ಅರ್ಜಿ. ಸರ್ವೋಚ್ಛ ನ್ಯಾಯಾಲಯ ನಮಗೆ ನೋಟೀಸ್ ಜಾರಿ ಮಾಡಬೇಕು. ಅದಕ್ಕೆ ನಾವು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತೇವೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ರಚಿಸಲ್ಪಟ್ಟಿರುವ ಸಂಸ್ಥೆಯಾಗಿದೆ. ಯಾವುದೇ ಯೋಜನೆಗೆ ಅನುಮೋದನೆ ನೀಡಲು ಪ್ರಾಧಿಕಾರಕ್ಕೆ ಮಾತ್ರ ಅಧಿಕಾರವಿದೆ. ನ್ಯಾಯಮಂಡಳಿಯ ಆದೇಶ ಪಾಲನೆಯಾಗಿದೆಯೇ, ಯಾವ ರೀತಿ ಆಗಬೇಕು ಎಂದು ಸೂಚಿಸುವ ಅಧಿಕಾರ ಅದಕ್ಕಿದೆ. ಈ ಬಗ್ಗೆ ಈಗಾಗಲೇ 15- 16 ಸಭೆಗಳಾಗಿವೆ ಎಂದರು.
ದೆಹಲಿಯಲ್ಲಿ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ ವಿರೋಧ ವ್ಯಕ್ತಪಡಿಸಿದೆ.