Advertisement

ವಿಜಯ್‌ ಹಜಾರೆ ಟ್ರೋಫಿ: ತಮಿಳುನಾಡು ಫೈನಲಿಗೆ

10:30 AM Mar 17, 2017 | Team Udayavani |

ಹೊಸದಿಲ್ಲಿ: ದಿನೇಶ್‌ ಕಾರ್ತಿಕ್‌ ಮತ್ತು ವಿಜಯ್‌ ಶಂಕರ್‌ ಬಾರಿಸಿದ ಅರ್ಧಶತಕದ ನೆರವಿನಿಂದ ತಮಿಳುನಾಡು ತಂಡ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಬರೋಡಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಹಾಕಿದೆ.

Advertisement

ಮಾ. 19ರಂದು ಫೈನಲ್‌ ಪಂದ್ಯ ನಡೆಯಲಿದೆ. ಶುಕ್ರವಾರ ಝಾರ್ಖಂಡ್‌ ಮತ್ತು ಬಂಗಾಲ ನಡುವೆ ಇನ್ನೊಂದು ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದ ವಿಜೇತ ತಂಡವು ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬರೋಡಾ 219 ರನ್ನಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. 
ಗುರಿ ಬೆನ್ನು ಹತ್ತಿದ ತಮಿಳುನಾಡಿಗೆ ದಿನೇಶ್‌ ಕಾರ್ತಿಕ್‌ (77) ಮತ್ತು ವಿಜಯ್‌ ಶಂಕರ್‌ (53) ಆಸರೆಯಾದರು. ಮೊದಲ ವಿಕೆಟ್‌ಗೆ ಕೌಶಿಕ್‌ ಗಾಂಧಿ (19) ಮತ್ತು ಶ್ರೀಧರ್‌ ರಾಜು (15) 30 ರನ್‌ ಸೇರಿಸಿದ್ದರು. 

ತಂಡದ ಮೊತ್ತ 95 ರನ್‌ ಆಗಿರುವಾಗ ಮಹತ್ವದ 3 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಅನಂತರ ಜತೆಯಾದ ದಿನೇಶ್‌ ಕಾರ್ತಿಕ್‌ ಮತ್ತು ವಿಜಯ್‌ ಶಂಕರ್‌ 4ನೇ ವಿಕೆಟ್‌ಗೆ 88 ರನ್‌ ಜತೆಯಾಟದಲ್ಲಿ ಪಾಲ್ಗೊಂಡು ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದರು. ತಂಡದ ಮೊತ್ತ 183 ರನ್‌ ತಲುಪಿದಾಗ ಅತಿತ್‌ ಬೌಲಿಂಗ್‌ನಲ್ಲಿ ಕಾರ್ತಿಕ್‌ ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ ಸೇರಿದರು. ಆ ಬಳಿಕ ವಿಜಯ್‌ ಶಂಕರ್‌ ಮತ್ತು ವಾಷಿಂಗ್ಟನ್‌ ಸುಂದರ್‌ (26 ರನ್‌) ಉತ್ತಮವಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಾಯಿ ಕಿಶೋರ್‌ಗೆ 4 ವಿಕೆಟ್‌: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಬರೋಡಾ ಸಾಯಿ ಕಿಶೋರ್‌ ದಾಳಿಗೆ ಕುಸಿಯಿತು. ಕಿಶೋರ್‌ ಪ್ರಮುಖ ನಾಲ್ಕು ವಿಕೆಟ್‌ ಪಡೆಯುವ ಮೂಲಕ ಬರೋಡಾಗೆ ಆಘಾತ ನೀಡಿದರು. ಬರೋಡಾ ಪರ ಕೇದಾರ್‌ ದೇವಧರ್‌ (46), ಆದಿತ್ಯ ವಾಗೊ¾àಡೆ (45) ಅತೀ ಹೆಚ್ಚು ರನ್‌ ದಾಖಲಿಸಿದರೆ ಅಶ್ವಿ‌ನ್‌ ಕ್ರಿಸ್ಟ್‌, ರಹಿಲ್‌ ಶಾ, ವಾಷಿಂಗ್ಟನ್‌ ಸುಂದರ್‌ ತಲಾ 2 ವಿಕೆಟ್‌ ಪಡೆದರು.

Advertisement

ಸಂಕ್ಷಿಪ್ತ ಸ್ಕೋರ್‌ 
ಬರೋಡಾ 49.3 ಓವರ್‌ಗಳಲ್ಲಿ 219 ಆಲೌಟ್‌ (ಕೇದಾರ್‌ ದೇವಧರ್‌ 46, ಆದಿತ್ಯ ವಾಗೊ¾àಡೆ 45, ಕೃನಾಲ್‌ ಪಾಂಡ್ಯ 30, ಇರ್ಫಾನ್‌ ಪಠಾಣ್‌ 27, ಪಿನಾಲ್‌ ಶಾ 36, ಸಾಯಿ ಕಿಶೋರ್‌ 59ಕ್ಕೆ 4, ಅಶ್ವಿ‌ನ್‌ ಕ್ರಿಸ್ಟ್‌ 22ಕ್ಕೆ 2, ರಹಿಲ್‌ ಶಾ 36ಕ್ಕೆ 2, ವಾಷಿಂಗ್ಟನ್‌ ಸುಂದರ್‌ 20ಕ್ಕೆ 2), ತಮಿಳುನಾಡು 47.3 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 220 (ಬಾಬಾ ಅಪರಾಜಿತ್‌ 28, ದಿನೇಶ್‌ ಕಾರ್ತಿಕ್‌ 77, ವಿಜಯ್‌ ಶಂಕರ್‌ 53 ಔಟಾಗದೆ, ಅತಿತ್‌ ಶೇಥ್‌ 36ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next