ಚೆನ್ನೈ: ತಮಿಳುನಾಡಿನ ಮೂರು ವರ್ಷದ ಬಾಲಕನೊಬ್ಬ ವಿಶಿಷ್ಟ ಸಾಧನೆಯಿಂದ ಅಂತಾರಾಷ್ಟೀಯ ದಾಖಲೆ ನಿರ್ಮಿಸಿದ್ದಾನೆ.
ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯ ಜೀವನಗರ ನಿವಾಸಿಗಳಾದ ಶಶಿರೇಖ ಮತ್ತು ಭರತ್ ದಂಪತಿ ಪುತ್ರನಾಗಿರುವ ದರ್ಶನ್(3) ಕೇವಲ 4.40 ನಿಮಿಷಗಳಲ್ಲಿ 197 ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸುವ ಮೂಲಕ ಇಂಟರ್‌ನ್ಯಾಷನಲ್ ರೆಕಾರ್ಡ್ ಮಾಡಿದ್ದಾನೆ.
ಎಲ್‌ಕೆಜಿಯಲ್ಲಿ ಓದುತ್ತಿರುವ ಈತನ ಪ್ರತಿಭೆ ಗುರುತಿಸಿ ಕಲಾಂ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಲಾಗಿದೆ.
ಈ ಹಿಂದೆ ನಾಲ್ಕು ವರ್ಷದ ಭಾರತದ ಬಾಲಕನೊಬ್ಬ ಎಲ್ಲಾ ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ. ಈ ದಾಖಲೆಯನ್ನು ದರ್ಶನ್ ಸರಿಗಟ್ಟಿದ್ದಾನೆ.
Related Articles
ದೆಹಲಿಯ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ದರ್ಶನ್‌ಗೆ ಸರ್ಟಿಫಿಕೆಟ್ ಮತ್ತು ಪದಕ ಪ್ರದಾನ ಮಾಡಿದೆ.