Advertisement

Priest Training: ತಮಿಳುನಾಡಿನಲ್ಲಿ 14 ಸ್ತ್ರೀಯರಿಗೆ ಅರ್ಚಕರ ತರಬೇತಿ ಪೂರ್ಣ

12:10 PM Jul 11, 2024 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ 2022ರಲ್ಲಿ ಅರ್ಚಕರ ತರಬೇತಿ ಶಾಲೆಗಳನ್ನು ಪುನರುಜ್ಜೀವನಗೊಳಿಸಿದ ಬಳಿಕ 14 ಮಹಿಳೆಯರು ಅರ್ಚಕರ ತರಬೇತಿ ಪಡೆದುಕೊಂಡಿದ್ದಾರೆ.

Advertisement

2023ರಲ್ಲಿ ತಮಿಳುನಾಡಿನಲ್ಲಿ 110 ಮಂದಿ ಅರ್ಚಕ ವೃತ್ತಿ ಬಗ್ಗೆ ತರಬೇತಿ ಪಡೆದುಕೊಂಡಿದ್ದರು. ಈ ಪೈಕಿ ಮೂವವರು ಮಹಿಳೆಯರಾಗಿದ್ದಾರೆ ಎಂದು ಅಲ್ಲಿನ ಮುಜರಾಯಿ ಸಚಿವ ಪಿ.ಕೆ.ಶೇಖರ ಬಾಬು ಹೇಳಿದ್ದಾರೆ.

2007ರಲ್ಲಿ ಅರ್ಚಕರ ತರಬೇತಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದರೂ, 2008ರಲ್ಲಿ ಕೋರ್ಟ್‌ಗಳಲ್ಲಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದರಿಂದ ಸ್ಥಗಿತಗೊಂಡಿತ್ತು. ಅರ್ಚಕ ವೃತ್ತಿ ತರಬೇತಿ ಪಡೆಯುವವರಿಗೆ ಪ್ರತಿ ತಿಂಗಳು 4000 ರೂ. ಸ್ಟೈಪೆಂಡ್‌ ನೀಡಲಾಗುತ್ತದೆ. ಪ್ರಸಕ್ತ ವರ್ಷ ವರ್ಷದಲ್ಲಿಯೂ ಕೂಡ ಮಹಿಳೆಯರಿಂದ ಅರ್ಚಕ ವೃತ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಶೇಖರ್‌ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next