Advertisement
ಶಾಸಕ ಮುಕೇಶ್ ರಾಜೀನಾಮೆ ಕೊಡಬೇಕು: ಸಿಪಿಐತಿರುವನಂತಪುರ: ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ನಟ ಶಾಸಕ- ಮುಕೇಶ್ ರಾಜೀನಾಮೆ ನೀಡಬೇಕು ಎಂದು ಕೇರಳ ಸಿಪಿಐ ನಾಯಕರು ಆಗ್ರಹಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾದ ಸಿಪಿಐ ಕೇರಳ ಘಟಕದ ಕಾರ್ಯದರ್ಶಿ ಬಿನೊಯ್ ವಿಶ್ವಂ ಬಳಿ ಮುಕೇಶ್ ರಾಜೀನಾಮೆಯ ಬೇಡಿಕೆ ಇಟ್ಟಿದ್ದಾರೆ. ಜತೆಗೆ ನೈತಿಕತೆಯ ಆಧಾರದಲ್ಲಿ ಅವರು ರಾಜಕೀಯದಿಂದ ದೂರ ಇರಬೇಕು ಎಂದು ಸಿಎಂ ಬಳಿ ಹೇಳಿದ್ದಾರೆ. ನಟ ಜಯ ಸೂರ್ಯ ವಿರುದ್ಧ 2ನೇ ಪ್ರಕರಣ ದಾಖಲಾಗಿದೆ.
“ಯಾರಾದರೂ ನಿಮ್ಮ ಮೈ ಮುಟ್ಟಿದರೆ ತತ್ಕ್ಷಣವೇ ಅವರಿಗೆ ಚಪ್ಪಲಿಯಲ್ಲಿ ಬಾರಿಸಿ. ಆಗ ಅವರು ಅಂತ ದುಷ್ಕೃತ್ಯಕ್ಕೆ ಮುಂದಾಗಲ್ಲ ಹಾಗೂ ಮತ್ತೆಂದಿಗೂ ಮಹಿಳೆಯರನ್ನು ಮುಟ್ಟುವ ಬಗ್ಗೆ ಅವರು ಯೋಚನೆಯೂ ಮಾಡಲ್ಲ’ ಎಂದು ತಮಿಳು ನಟ ವಿಶಾಲ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ವಿಶಾಲ್ ಈ ಹೇಳಿಕೆ ನೀಡಿದ್ದಾರೆ. “ಲೈಂಗಿಕ ಕಿರು ಕುಳ ತಡೆಗಾಗಿ ಹಾಗೂ ನಟಿಯರಿಗೆ ಬೆಂಬಲ ನೀಡುವುದಕ್ಕಾಗಿ ದಕ್ಷಿಣ ಭಾರತದ ಕಲಾವಿದರ ಒಕ್ಕೂಟವಾದ ನಾಡಿಗರ ಸಂಗಮ ಸಮಿತಿ ರಚಿಸಲು ನಿರ್ಧರಿಸಿದೆ. ಲೈಂಗಿಕ ಕಿರುಕುಳದ ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದೂ ವಿಶಾಲ್ ಹೇಳಿದ್ದಾರೆ.