ನವದೆಹಲಿ: ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರು 2023ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಪೈಪೋಟಿಯಲ್ಲಿದ್ದಾರೆ. ಬೂಕರ್ ಪ್ರಶಸ್ತಿ ಫೌಂಡೇಶನ್ ಮಂಗಳವಾರ ಶಾರ್ಟ್‌ಲಿಸ್ಟ್ ಮಾಡಿರುವ 13 ಕೃತಿಗಳ ಪಟ್ಟಿಯಲ್ಲಿ ಮುರುಗನ್ ಅವರ ಪೈರ್ ಕೃತಿಯ ಹೆಸರಿದೆ.
ಮುರುಗನ್(56) ಅವರು ತಮಿಳಿನಲ್ಲಿ 2016ರಲ್ಲಿ ಬರೆದ “ಪೈರ್’ ಪುಸ್ತಕವನ್ನು ಅನಿರುದ್ಧನ್ ವಾಸುದೇವನ್ ಅವರು ಇಂಗ್ಲೀಷ್‌ಗೆ ತರ್ಜುಮೆ ಮಾಡಿದ್ದಾರೆ.
ಈ ಪುಸಕ್ತದ ಕಾರಣ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಮುರುಗನ್ ಇದ್ದಾರೆ. ಓಡಿಹೋಗಿ ಮದುವೆಯಾಗುವ ಅಂತರ್ಜಾತಿ ದಂಪತಿಯ ಕಥೆಯನ್ನು ಮನೋಜ್ಞವಾಗಿ “ಪೈರ್’ ಪುಸ್ತಕದಲ್ಲಿ ಮುರುಗನ್ ಚಿತ್ರಿಸಿದ್ದಾರೆ.
ಹಿಂದಿ ಲೇಖಕಿ ಗೀತಾಂಜಿ ಶ್ರೀ ಅವರು ಬೂಕರ್ ಪ್ರಶಸ್ತಿ(2022) ಪಡೆದ ಮೊದಲ ಭಾರತೀಯ ಸಾಹಿತಿಯಾಗಿದ್ದಾರೆ.