ಹುಣಸೂರು: ಜಮೀನಿನಲ್ಲಿ ಬೆಳೆದಿದ್ದ ಸುಮಾರು 17 ಕೆಜಿಯ 80 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಪೋಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ನೇರಳಕುಪ್ಪೆ ನಿವಾಸಿ ಅಮಾವಾಸೆ ಬಂಧಿತ ಆರೋಪಿ.
ಈತ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದ ತಂಡ ಸೆ.20 ರಂದು 80 ಗಾಂಜಾಗಿಡಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಈ ವೇಳೆ ಆರೋಪಿ ನಾಪತ್ತೆಯಾಗಿದ್ದ.
ಸೆ.22 ಮಂಗಳವಾರ ಅಮವಾಸೆ ಮನೆಗೆ ಬಂದಿರುವ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತೆಂದು ಡಿವೈ.ಎಸ್.ಪಿ. ಸುಂದರರಾಜ್ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬೀರೇಗೌಡ. ಗಣೇಶ. ಶಿವರಾಜ್ ಕುಮಾರ್. ಲಿಖಿತ್. ಮೆಹರಾಜ್. ಮಂಜುನಾಥ. ಎ.ಎಸ್.ಐ. ದೊಡ್ಡೇಗೌಡ. ರಾಘು. ರಮೇಶ್ ಇದ್ದರು.