Advertisement

ದೇಶಭಕ್ತಿ ಮೂಡಿಸುತ್ತದೆ ಆರೆಸ್ಸೆಸ್‌

11:57 AM Oct 19, 2019 | Naveen |

ತಾಳಿಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 93 ವರ್ಷದಿಂದ ದೇಶಭಕ್ತಿ ಮೂಡಿಸುತ್ತ ಸಾಗಿದೆ ಎಂದು ಆರೆಸ್ಸೆಸ್‌ ಜಿಲ್ಲಾ ವಿಭಾಗ ಪ್ರಚಾರಕ ಪ್ರಮುಖ ದಯಾನಂದ ಹೇಳಿದರು. ಶುಕ್ರವಾರ ಪಟ್ಟಣದ ಕನ್ನಡ ಶಾಲಾ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗದ ಯುಗಾಬ್ದದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

1925ರಲ್ಲಿ ನಾಗಪುರದಲ್ಲಿ ಡಾ| ಹೆಡಗೆವಾರ ಪ್ರಾರಂಭಿಸಿದ ಸಂಘಟನೆ ತನ್ನ ಧ್ಯೇಯೋದ್ದೇಶಗಳೊಂದಿಗೆ ಮುನ್ನಡೆದಿದೆ. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶವನ್ನು ಸ್ವತಂತ್ರಗೊಳಿಸಬೇಕು. ಸ್ವತಂತ್ರಗೊಳಿಸಿಯೇ ತೀರುತ್ತೇವೆ ಎಂಬ ಶಪಥದ ಮೇಲೆ ಪ್ರಾರಂಭಗೊಂಡ ಸಂಘಟನೆ ಈಗ ಜಗತ್ತಿನ 40 ದೇಶಗಳಲ್ಲಿ ಬೆಳೆದು ನಿಂತಿದೆ ಎಂದರು.

ಅಂದಿನ ರಾಜರುಗಳ ಆಡಳಿತದಲ್ಲಿ ಕೆಲವರು ಬ್ರಿಟಿಷರ್‌ ಸೊಪ್ಪಿಗೆ ಬಲಿಯಾಗಿ ಸಾಮ್ರಾಜ್ಯವನ್ನು ಧ್ವಂಸಗೊಳಿಸಿದರು. ದೇಶ ಕಂಡ ಅಪ್ರತಿಮವೀರ ಮಹಾರಾಣಾಪ್ರತಾಪಸಿಂಹ್‌ ಕಾಲದಲ್ಲಿ ಅವರದೇ ಸಾಮ್ರಾಜ್ಯದಲ್ಲಿದ್ದ ಮಾನಸಿಂಗ್‌ ಎಂಬ ವ್ಯಕ್ತಿ ಅವನನ್ನು ಸೋಲಿಸಲು ಕಾರಣನಾದ. ಬ್ರಿಟಿಷರಿಗೆ ನಡುಕನ್ನೇ ಹುಟ್ಟಿಸಿದ ಕಿತ್ತೂರ ರಾಣಿ ಚನ್ನಮ್ಮನ ಆಸ್ಥಾನದಲ್ಲಿ ಮಲ್ಲಪ್ಪ ಶೆಟ್ಟಿ ಎಂಬಾತ ಆಕೆಯನ್ನು ಬಂಧಿಸಲು ಬ್ರಿಟಿಷರಿಗೆ ಸಹಾಯ ಮಾಡಿದ. ಇಂತಹ ಅನೇಕ ರಾಜಮಹನೀಯರ ಅವನತಿ ಹಿಂದೆ ನಮ್ಮವರ ಕೈವಾಡ ಅಡಗಿದೆ ಎಂದರು.

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತದಲ್ಲಿ ಬೆರಳೆಣಿಕಯಷ್ಟು ಸೈನಿಕರಿದ್ದರೂ ಕೂಡಾ ಸುಸ್ತೆಂಬುದೇ ಇದ್ದಿಲ್ಲ. ಧರ್ಮ ಎಂಬ ವಿಷಯ ಬಂದಾಗ ಕೆಲಸ ಮುಗಿಯುವವರೆಗೂ ಹೋರಾಡುವುದನ್ನು ರೂಢಿಸಿಕೊಂಡಿದ್ದರು. ಒಮ್ಮೆ ಔರಂಗಜೇಬನು ಶಿವಾಜಿ ಜೊತೆ ಲಕ್ಷಾಂತರ ಸೈನಿಕರೊದಿಗೆ ಯುದ್ಧಕ್ಕೆ ಹೋದಾಗ ಮರಳಿ ತನ್ನ ಸ್ಥಾನಕ್ಕೆ ಹೋಗಲಿಲ್ಲ.

ಅಷ್ಟೋಂದು ಕೆಚ್ಚೆದೆಯಿಂದ ಸುಸ್ತಾಗದೇ ತಮ್ಮ ಕಾರ್ಯದಲ್ಲಿ ಶಿವಾಜಿ ಸೈನಿಕರು ಹೋರಾಡಿದ್ದರು ಎಂದು ಶಿವಾಜಿ ಮಹಾರಾಜರು ಹಿಂದೂ ಸ್ವರಾಜ್ಯ ಸ್ಥಾಪನೆಗೋಸ್ಕರ ಮಾಡಿದ ಕೆಲಸ ಕಾರ್ಯಗಳನ್ನು ವಿವರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ 7 ದಿನಗಳಿಂದ ನಡೆದ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಯಚಟುವಟಿಕೆಗಳ ಕುರಿತು ಸಂಘ ಎಂದರೇನು? ಸಂಘದ ಸ್ವಯಂ ಸೇವಕರು ಮಾಡುತ್ತಿರುವ ದಿನದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿ ಬ್ರಿಟಿಷರ ಕಾಲದಲ್ಲಿಯೇ ಅಂಜಿ ಅಳುಕದೇ ಅಂದು ಸಂಘ ಪ್ರಾರಂಭಿಸಿರುವುದರಿಂದ ಈಗ ಸಂಘದ ನೇತೃತ್ವದಲ್ಲಿ 50 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಾಲೆಗಳು ನಡೆಯುತ್ತಿವೆ 1.50 ಲಕ್ಷಕ್ಕೂ ಅ ಧಿಕ ಸ್ವಯಂ ಸೇವಕರು ತಮ್ಮ ಕಾರ್ಯ ನಡೆಸುತ್ತಿದ್ದಾರೆಂದು ಹೇಳಿದರು.

Advertisement

ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾಥಮಿಕ ಶಿಕ್ಷಾ ವರ್ಗದ ವರ್ಗಾಧಿಕಾರಿ ಎಸ್‌.ಎಂ. ಸಜ್ಜನ ವರದಿ  ವಾಚಿಸಿದರು.

ಪಥ ಸಂಚಲನ: ಬಹಿರಂಗ ಸಭೆಗೂ ಮುನ್ನ ಗಣ ವೇಷಧಾರಿ ರಾಷ್ಟ್ರೀಯ ಸ್ವಯಂ ಸೇವಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲ ನಡೆಯಿತು. ಪಥಸಂಚಲನ ಉದ್ದಕ್ಕೂ ಮಹಿಳೆಯರು ದಾರಿಯೂದ್ದಕ್ಕೂ ರಂಗೋಲಿ ಚಿತ್ತಾರ ಬಿಡಿಸಿದ್ದರು. ವೀರ ಮಹಾ ಪುರುಷರಾದ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾಪ್ರತಾಪ ಹಾಗೂ ಕಿತ್ತೂರು ರಾಣಿ ಚನ್ನಮ್ಮ, ಭಗತ್‌ಸಿಂಗ್‌, ಸ್ವಾಮಿ ವಿವೇಕಾನಂದರ ಒಳಗೊಂಡಂತೆ ಅನೇಕರ ವೇಷ ಧರಿಸಿದ ಮಕ್ಕಳು ಜನಮನ ಸೆಳೆದರು.

ಕಾರ್ಯಕ್ರಮದ ಮೊದಲಿಗೆ ಸ್ವಯಂ ಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಿತು. ಘೋಷ ಪ್ರದರ್ಶನ, ಯೋಗ ಪ್ರದರ್ಶನ, ದಂಡ ಪ್ರದರ್ಶನ, ಕರಾಟೆ, ಸರಪಳಿ ಹಾಗೂ ಬಿಚ್ಚು ಆಟ, ಸೇತುವೆ ಹಾರುವ ಆಟ, ಸಾರಿಗೆ ವಾಹನ ಆಟ, ತುರ್ತು ಚಿಕಿತ್ಸೆ ಕ್ರಮ ಕೈಗೊಳ್ಳುವ ಆಟ, ಗೋಪುರ ಆಟ, ದಂಡ ವ್ಯಾಯಾಮಗಳನ್ನು ಪ್ರದರ್ಶಿಸಲಾಯಿತು. ಸ್ವಯಂ ಸೇವಕ ಪರಮೇಶ್ವರ ಕುಂಬಾರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next